ಪೊಲೀಸರೇ ಚುರುಕಾಗಿ ಕಾರ್ಯನಿರ್ವಹಿಸಿ
ನಗರ ಪೊಲೀಸ್ ಆಯುಕ್ತರ ನೂತನಕಚೇರಿ ಕಟ್ಟಡ ಉದ್ಘಾಟಿಸಿದ ಬಿ.ಎಸ್‌ಯಡಿಯೂರಪ್ಪ ಅಭಿಮತ
Team Udayavani, Nov 25, 2020, 3:24 PM IST
ಮೈಸೂರು: ಮೈಸೂರು ನಗರ ಪೊಲೀಸ್ ಆಯುಕ್ತರ ನೂತನ ಕಚೇರಿ ಕಟ್ಟಡ ಕೊನೆಗೂ ಎಲ್ಲ ಅಡೆತಡೆಗಳನ್ನು ಮೀರಿ ಸಾರ್ವಜನಿಕರ ಸೇವೆಗೆ ಮುಕ್ತವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಉದ್ಘಾಟಿಸಿದರು. ನಜರ್‌ಬಾದ್‌ನಲ್ಲಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಕಟ್ಟಡವನ್ನು ಪೊಲೀಸರ ಸೇವೆಗೆ ಮುಕ್ತವಾಗಿಸಿದರು. ಇದೇ ವೇಳೆ ಪೊಲೀಸ್ ಗೃಹ-2020 ಯೋಜನೆಯಡಿ ನಿರ್ಮಿಸಿರುವ 108 ವಸತಿ ಗೃಹಗಳ ಉದ್ಘಾಟನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದು. ಸಾರ್ವಜನಿಕರಿಗೆ ಗುಣಾಣ್ಮತ, ವೃತ್ತಿಪರ, ಉತ್ತಮ ಆಡಳಿತವನ್ನು ಪೊಲೀಸರು ನೀಡಬೇಕಿದ್ದು, ಅದಕ್ಕಾಗಿ ಸರ್ಕಾರ ಸಕಲ ಸವಲತ್ತು ಹಾಗೂ ಸೌಲಭ್ಯಗಳನ್ನು ನೀಡುತ್ತಿದೆ. ಬೆಂಗಳೂರಿನ ನಂತರ ಮೈಸೂರು ಅತ್ಯಂತವೇಗವಾಗಿ ಬೆಳೆಯುತ್ತಿರುವ ನಗರವಾಗಿರುವುದರಿಂದ
ಇಂತಹ ಕಟ್ಟಡದ ಅಗತ್ಯತೆ ಮನಗಂಡು ಇಂದು ಉದ್ಘಾಟಿಸಲಾಗಿದೆ. ಕೇವಲ ಕಟ್ಟಡ ಮಾತ್ರವಲ್ಲದೆ ಜ್ಯೋತಿನಗರದಲ್ಲಿ 36, ಜಾಕಿ ಕ್ವಾರ್ಟಸ್‌ನಲ್ಲಿ 72 ವಸತಿಗಳೂ ಸಿದ್ಧವಿದ್ದು,ಅವುಗಳನ್ನೂಉದ್ಘಾಟಿಸಲಾಗಿದೆ ಎಂದು ಹೇಳಿದರು.
ಕಟ್ಟಡದಲ್ಲಿ ಕೂರದೆ ಕೆಲಸ ಮಾಡಿ: ಪೊಲೀಸ್ ಆಯುಕ್ತ ಕಟ್ಟಡ ಮೈಸೂರಿನ ಘನತೆ, ಪಾರಂಪರಿಕತೆಗೆ ತಕ್ಕಂತೆ ನಿರ್ಮಾಣವಾಗಿದೆ. ಅಧಿಕಾರಿಗಳು ಭವ್ಯ ಕಟ್ಟಡದಲ್ಲಿ ಕಾಲ ಕಳೆಯದೆ ಹೊರಗಡೆ ಹೋಗಿ ಕೆಲಸ ಮಾಡಿ. ಅತ್ಯಂತ ಚಲನಶೀಲವಾಗಿ, ಚುರುಕಾಗಿ, ಸಮಯಕ್ಕೆ ಸರಿಯಾಗಿ ಘಟನಾ ಸ್ಥಳಕ್ಕೆ ತೆರಳಿ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿದರು.
ಇದನ್ನೂ ಓದಿ:ದಂಪತಿಗೆ ಸಮಗ್ರ ಕೃಷಿಯೇ ಜೀವನ
ಮೈಸೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣ ಅಧಿಕ ವಾಗಿತ್ತು. ಇದೀಗ ತಹಬದಿಗೆ ಬರುತ್ತಿದೆ. ಆದರೂ ಮೈಮರೆಯದೆ ಎಚ್ಚರಿಕೆಯಿಂದ ಇರಬೇಕು . ಜನಸಾಮಾನ್ಯರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸೋಂಕಿನಿಂದ ದೂರವಿರಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಕ್ರೈಂ ರೇಟ್ ಇಳಿಕೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಕಾಪಾಡಲು, ಶಾಂತಿ ನೆಲೆಸುವಂತೆ ಮಾಡಲು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.ಇದರಿಂದಾಗಿ ಕ್ರೈಂ ರೇಟ್ ಕಡಿಮೆಯಾಗಿದೆ. ಇನ್ನಷ್ಟುಕಡಿಮೆ ಮಾಡಲು ಗುರಿ ಇದೆ. ಅಲ್ಲದೆ ರಾಜ್ಯದಾದ್ಯಂತ ಡ್ರಗ್ಸ್ ವಿರುದ್ಧ ನಿರಂತರವಾಗಿ ಸಮರ ಸಾರುತ್ತಿದ್ದು, 10 ವರ್ಷಗಳಲ್ಲಿ ವಶಪಡಿಸಿಕೊಳ್ಳಲು ಆಗದ ಡ್ರಗ್ಸ್ ಅನ್ನು ಕೇವಲ 6 ತಿಂಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳ ಮಾರಾಟ ಜಾಲ ಭೇದಿಸಲಾಗಿದೆ ಎಂದರು. ತಂತ್ರಜ್ಞಾನ ಅಧಿಕಗೊಂಡಂತೆ ಸೈಬರ್ ಕ್ರೈಂ ಹೆಚ್ಚಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಸೆಲ್ ಪೊಲೀಸ್ ಠಾಣೆಯನ್ನು ಸ್ಥಾಪಿಸಿಸೈಬರ್‌ಕ್ರೈಂನಿಯಂತ್ರಿಸಲಾಗುತ್ತಿದೆ ಎಂದರು. ಕಟ್ಟಡದ ವಿನ್ಯಾಸಗಾರ ಜಯಪ್ರಕಾಶ್ ಸೈಮನ್ ಅವರನ್ನು ಅಭಿನಂದಿಸಲಾಯಿತು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸ¨ ಪ್ರತಾಪ್ ಸಿಂಹ, ಶಾಸಕರಾ¨ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎಚ್.ವಿಶ್ವನಾಥ್, ಕೆ.ಟಿ.ಶ್ರೀಕಂಠೇಗೌಡ, ಎಲ್.ನಾಗೇಂದ್ರ, ಕೆ.ಮಹದೇವ, ಹರ್ಷವರ್ಧನ್, ಮೇಯರ್ ತಸ್ನಿಂ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಮುಡಾ ಅಧ್ಯಕ್ಷ ಎಚ್ .ವಿ.ರಾಜೀವ್, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಇದ್ದರು.
ಬಜೆಟ್‌ನಲ್ಲಿ ಅನುದಾನದ ನಿರೀಕ್ಷೆ
ಮೈಸೂರು ಪೊಲೀಸರಿಗೆ 31 ವರ್ಷಗಳ ಬಳಿಕ ಅತ್ಯಂತ ಸುಂದರವಾದ ಕಟ್ಟಡ ಸಿಕ್ಕಿದೆ. ಪೊಲೀಸರು ಅತ್ಯತ್ತಮವಾಗಿ ಕೆಲಸ ಮಾಡಲು ಮುಖ್ಯವಾಗಿ ಬೇಕಿರುವುದು ಕಚೇರಿ ಹಾಗೂ ಮನೆ. ಇಲಾಖೆಯ ಸಿಬ್ಬಂದಿಗೆ ವಸತಿ ಗೃಹಗಳ ಕೊರತೆ ಇದೆ. ಸದ್ಯ ಶೇ.51ರಷ್ಟು ಸಿಬ್ಬಂದಿಗೆ ವಸತಿ ಗೃಹವಿದೆ. ಇದು ಶೇ.75ಕ್ಕೆ ಏರಿಕೆಯಾಗಲು 11 ಸಾವಿರ ಮನೆಗಳನ್ನು ನಿರ್ಮಿಸಬೇಕು. ಮುಂದಿನ ಬಜೆಟ್‌ನಲ್ಲಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವ ಭರವಸೆ ಇದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.