ಬುದ್ಧ, ಬಸವ, ಅಶೋಕ ಮತಾಂಧರೇ?


Team Udayavani, Nov 12, 2017, 4:51 PM IST

mys.jpg

ಮೈಸೂರು: ಜನರನ್ನು ಇಸ್ಲಾಂ ಧರ್ಮಕ್ಕೆ ಕರೆತಂದ ಟಿಪ್ಪು ಮತಾಂಧನಾದರೆ, ಬುದ್ಧ, ಬಸವ, ಅಶೋಕ ತಮ್ಮ ಧರ್ಮಕ್ಕೆ ಅನೇಕ ಮಂದಿಯನ್ನು ಕರೆತಂದಿದ್ದು ಅವರು ಮತಾಂಧರೇ ಎಂದು ಇತಿಹಾಸ ತಜ್ಞ ಪ್ರೋ.ನಂಜರಾಜ ಅರಸ್‌ ಪ್ರಶ್ನಿಸಿದರು. ಮೈಸೂರಿನ ಕರ್ನಾಟಕ ದಲಿತ ವೆಲ್‌ಫೇರ್‌ ಟ್ರಸ್ಟ್‌, ರೆಸ್ಪಾನ್ಸಿಬಲ್‌ ಸಿಟಿಜನ್‌ ಫೋರಂ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಟಿಪ್ಪು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

 ಜನರನ್ನು ಅವರಿಗೆ ಅನುಕೂಲವಾಗುವ ಧರ್ಮಕ್ಕೆ ಪರಿವರ್ತಿಸುವುದು ನಿಜವಾದ ರಾಜಧರ್ಮ. ಈ ನಿಟ್ಟಿನಲ್ಲಿ ಅಶೋಕ, ಬುದ್ಧ, ಬಸವರಂತೆ ಟಿಪ್ಪು ಸಹ ಅನೇಕ ಮಂದಿಯನ್ನು ಇಸ್ಲಾಂ ಧರ್ಮಕ್ಕೆ ಕರೆ ತಂದಿದ್ದಾನೆ. ಆದರೆ, ಟಿಪ್ಪು$ ಎಂದಿಗೂ ತನ್ನ ರಾಜ್ಯದ ಹಿಂದೂಗಳ ಮತ ಪರಿವರ್ತಿಸಿಲ್ಲ. ಬದಲಿಗೆ ನೆರೆಯ ರಾಜ್ಯದಲ್ಲಿ ರಾಜಾಳ್ವಿಕೆಯಲ್ಲಿದ್ದ ಜನರನ್ನು ಮತಾಂತರಗೊಳಿಸಲು ಮುಂದಾದನೇ ಹೊರತು, ಆತ ಎಂದಿಗೂ ಯಾರನ್ನೂ ಇಸ್ಲಾಂ ಧರ್ಮಕ್ಕೆ ಬರುವಂತೆ ಹೇಳಿಲ್ಲ ಎಂದು ಹೇಳಿದರು.

ಟಿಪ್ಪುವನ್ನು ವಿರೋಧಿಸುವ ಬಿಜೆಪಿ ಅವರು ಈ ಹಿಂದೆ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ, ಪೊ›.ಶೇಕ್‌ಆಲಿ ಅವರು ಟಿಪ್ಪು ಕುರಿತ ಪುಸ್ತಕ ಬರೆದಾಗ ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್‌ ಶೆಟ್ಟರ್‌ ಅದಕ್ಕೆ ಮುನ್ನುಡಿ ಬರೆಯುತ್ತಾರೆ. 

ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾದ ಬಳಿಕವೂ ಅದೇ ಮುನ್ನುಡಿ ಯಲ್ಲಿ ಪುಸ್ತಕ ಲೋಕಾರ್ಪಣೆಯಾಗುತ್ತದೆ. ಇದರ ಪರಿವಿಲ್ಲದ ಜಗದೀಶ್‌ ಶೆಟ್ಟರ್‌ ಇಂದು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಹೀಗೆ ಅಧಿಕಾರದಲ್ಲಿದ್ದಾಗ ಟಿಪ್ಪುವನ್ನು ಹೊಗಳುವ, ನಂತರ ಟೀಕಿಸುವ ಪ್ರವೃತ್ತಿ ಬಿಜೆಪಿಯಲ್ಲಿದೆ ಎಂದು ದೂರಿದರು.

ಬಿಜೆಪಿಯವರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದು, ವಾಜಪೇಯಿ ಅವರೇ ಎಂದು ಒಪ್ಪಿಕೊಳ್ಳಲಿ. ಆ ನಂತರ ಟಿಪ್ಪುವಿನ ಆಡಳಿತಾ ವಧಿಯಲ್ಲಿ ನಡೆದ ಅನಾಹುತಗಳಿಗೆ ಟಿಪ್ಪುವನ್ನು ಹೊಣೆ ಮಾಡಲಿ ಎಂದು ತಿಳಿಸಿದರು.

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪೊ›.ಮಹೇಶ್‌ ಚಂದ್ರಗುರು, ಭಾರತಾಂಭೆ ಮಾನವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಾಗಿಟ್ಟ ಟಿಪ್ಪು ಸುಲ್ತಾನ್‌ ಎಂದಿಗೂ ಮತಾಂಧನಾಗುವುದಿಲ್ಲ. ಬದಲಿಗೆ ಪರಕೀಯರಿಗೆ ದೇಶವನ್ನು ಲೂಟಿ ಮಾಡಲು ಅವಕಾಶ ನೀಡಿದ ವೈದಿಕರು ನಿಜವಾದ ಮತಾಂಧರು ಎಂದು ಕುಟುಕಿದರು.

ಮಹಮ್ಮದ್‌ ಖೀಲ್ಜಿ ಸೇರಿದಂತೆ ಅನೇಕ ಪರಕೀಯರು ಹಲವು ಬಾರಿ ನಮ್ಮ ದೇಶದ ದೇವಾಲಯಗಳನ್ನು ನಾಶಪಡಿಸಿದರು. ಆದರೆ ಟಿಪ್ಪು ಸುಲ್ತಾನ್‌ ಶೃಂಗೇರಿ ದೇವಸ್ಥಾನವನ್ನು ರಕ್ಷಿಸಿದ. ಸಮಾಜದಲ್ಲಿ ಬ್ರಾಹ್ಮಣಿಕೆ ನೆಪದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸಿ ಮುಕ್ತಿಗೆ ಮುಂದಾದ ಟಿಪ್ಪು ಸಾಮಾಜಿಕ ಹರಿಕಾರ ಎಂದು ಬಣ್ಣಿಸಿದರು. 

ವಿಚಾರವಾದಿ ಪ್ರೊ. ಕೆ.ಎಸ್‌. ಭಗವಾನ್‌, ಮನುಸ್ಮತಿಯಲ್ಲಿ ಶೂದ್ರರೂ ಬ್ರಾಹ್ಮಣರ ಗುಲಾಮರು ಎಂದು ನಮೂದಿಸಿದ್ದಾರೆ. ಅಲ್ಲದೆ ಬ್ರಾಹ್ಮರ ಮಹಿಳೆಯರನ್ನು ಹೊರತುಪಡಿಸಿ, ಉಳಿದವರೆಲ್ಲಾ ಉಪ ಪತ್ನಿಯರು ಎಂದು ನಮೂದಿಸಿದ್ದಾರೆ. ಇಂತಹ ಮನುಸ್ಮತಿಯಿಂದ ನಾವು ಹಿಂದೂತ್ವವನ್ನು ಅರಿಯುತ್ತಿದ್ದು, ಈ ಬಗ್ಗೆ ಈಗಲಾದರೂ ಸಾಮಾಜಿಕ ಕ್ರಾಂತಿಗೆ ಮುಂದಾಗಬೇಕಿದೆ ಎಂದು ಹೇಳಿದರು.

 ಟಿಪ್ಪುವಿನ ಆಸ್ಥಾನದಲ್ಲಿ 13 ಮಂದಿ ಬ್ರಾಹ್ಮರಿದ್ದು, ಎಂದಿಗೂ ಆತ ಹಿಂದೂ ವಿರೋಧಿ ಎಂದು ಹೇಳಿಲ್ಲ. ಅಲ್ಲದೆ ಆತನ ಆಳ್ವಿಕೆಯ ಯಾರೊಬ್ಬರೂ ಆತನನ್ನು ಮತಾಂಧ ಎಂದು ದೂಷಿಸಿರಲಿಲ್ಲ. ಕೆಲವು ಮನುವಾದಿಗಳ ಗುಂಪಿನಿಂದ ಇಂತಹ ಅಪಪ್ರಚಾರ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ರಾಷ್ಟ್ರವಾದಿಯಾಗಿ ಟಿಪ್ಪು, ಅಭಿವೃದ್ಧಿ ಶಿಲ್ಪಿಯಾಗಿ ಟಿಪ್ಪು, ಸಮಾನತೆ ಮುತ್ಸದ್ಧಿಯಾಗಿ ಟಿಪ್ಪು, ಸಾಮಾಜಿಕ ನ್ಯಾಯದ ಹರಿಕಾರನಾಗಿ ಟಿಪ್ಪು ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಗಳು ನಡೆದವು.

 ಪ್ರೋ.ಶಬ್ಬೀರ್‌ ಮಸ್ತಾಫ‌, ಅಲಲ್ಹಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೌಲಾನಾ ಅಯ್ಯೂಬ್‌ ಅನ್ಸಾರಿ, ದಲಿತ ವೆಲ್‌ಫೇರ್‌ ಟ್ರಸ್ಟ್‌ ಅಧ್ಯಕ್ಷ ಕಾಂತರಾಜು, ಉದ್ಯಮಿ ಎಂ.ಎಫ್.ಕಲೀಂ, ರೇವಣ್ಣ, ಮಹದೇವಮೂರ್ತಿ ಮತ್ತಿತರರಿದ್ದರು.

ಟಾಪ್ ನ್ಯೂಸ್

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.