ಬಜೆಟ್: 23 ಕೋಟಿ ಆದಾಯ, 31 ಕೋಟಿ ರೂ. ವ್ಯಯ
Team Udayavani, Mar 6, 2019, 7:26 AM IST
ನಂಜನಗೂಡು: ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭಾಧ್ಯಕ್ಷೆ ಪುಷ್ಪಲತಾ 2019-10ನೇ ಸಾಲಿಗೆ 72 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು. 23.36 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಆದಾಯ: ಆಸ್ತಿ ತೆರಿಗೆ 4.25 ಕೋಟಿ ರೂ., ಎಸ್‌ಎಫ್ಸಿ ನಿಧಿ ಅನುದಾನ 3.71 ಕೋಟಿ, ಎಸ್‌ಎಫ್ಸಿ ವಿದ್ಯುತ್ ಅನುದಾನ 6.28 ಕೋಟಿ, 14ನೇ ಹಣಕಾಸು ಅನುದಾನ 3.87 ಕೋಟಿ ರೂ. ಸೇರಿದಂತೆ ವಿವಿಧ ಮೂಲಗಳಿಂದ 23.36 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ವೆಚ್ಚ: ರಸ್ತೆ ಮತ್ತು ಚರಂಡಿಗಾಗಿ 5. 25 ಕೋಟಿ ರೂ., ನೀರು ಸರಬರಾಜಿನ ಯಂತ್ರೋಪಕರಣಕ್ಕೆ 1.30 ಕೋಟಿ ರೂ., ಬೀದಿ ದೀಪ ನೀರು ಸರಬರಾಜಿಗೆ 6.28 ಕೋಟಿ, ನೈರ್ಮಲ್ಯಕ್ಕೆ 2.1 ಕೋಟಿ, ನಿರಂತರ ನೀರು ಸರಬರಾಜಿಗಾಗಿ 93 ಲಕ್ಷ ರೂ., ಕಟ್ಟಡ ದುರಸ್ತಿಗೆ 90 ಲಕ್ಷ ರೂ., ಜಾಹೀರಾತು ಹಾಗೂ ವಿವಿಧ ಕಚೇರಿ ವೆಚ್ಚಕ್ಕಾಗಿ 1.33 ಕೋಟಿ ರೂ. ಸೇರಿದಂತೆ ನಾಗರಿಕರ ಮೂಲಭೂತ ಸೌಲಭ್ಯಕ್ಕಾಗಿ 31.56 ಕೋಟಿ ರೂ. ವ್ಯಯಿಸಲು ನಿರ್ಧರಿಸಲಾಗಿದೆ.
ಆರಂಭಿಕ ಶುಲ್ಕು 8.27 ಕೋಟಿ ರೂ. ಸೇರಿಸಲಾಗಿದ್ದು, ಒಟ್ಟಾರೆ 72 ಲಕ್ಷ ರೂ.ಗಳ ಉಳಿತಾಯದ ಆಯವ್ಯಯ ಇದಾಗಿದೆ ಎಂದ ಪುಷ್ಪಲತಾ ತಿಳಿಸಿದರು. ಇದೇ ವೇಳೆ, ನೌಕರರಿಗೆ ವೇತನ ವಿಳಂಬ ಹಾಗೂ ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ವೇತನ ಪಾವತಿಸದಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಭಾತ್ಯಾಗ: ತಾವು ಕೇಳಿದ ವಿವರಗಳ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ ಸದಸ್ಯ ಮಹದೇವಸ್ವಾಮಿ ಸಭಾತ್ಯಾಗ ನಡೆಸುವುದಾಗಿ ತಿಳಿಸಿ ಸಭೆಯಿಂದ ಹೊರ ನಡೆದರು. ಸಭೆಯಲ್ಲಿ ಉಪಾಧ್ಯಕ್ಷ ಪ್ರದೀಪ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಕೃಷ್ಣ, ಸದಸ್ಯರಾದ ಮಂಜುನಾಥ್, ರಾಜೇಶ್, ಆರ್.ರಾಜು, ನಗರಸಭಾ ಆಯುಕ್ತ ವಿಜಯ, ತಾಂತ್ರಿಕ ಅಧಿಕಾರಿ ಭಾಸ್ಕರ್, ಅಧಿಕಾರಿ ಅರ್ಚನಾ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.