ಗಿಡನೆಡುವ ಪ್ರವೃತ್ತಿ ಬೆಳೆಸಿಕೊಳ್ಳಿ


Team Udayavani, May 23, 2017, 12:57 PM IST

mys5.jpg

ಹುಣಸೂರು: ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಈ ಸಾಲಿನಿಂದ ಸರ್ಕಾರ 100ರೂಗೆ ಹೆಚ್ಚಿಸಿದ್ದು,  ರೈತರು ಸದ್ಬಳಕೆ ಮಾಡಿಕೊಂಡಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವ ಮೂಲಕ ಆದಾಯ ಪಡೆಯುವ ಜೊತೆಗೆ ಪರಿಸರ ಉಳಿವಿಗೆ ಕೊಡುಗೆ ನೀಡಿದಂತಾ ಗಲಿದ್ದು ಪ್ರತಿಯೊಬ್ಬ ರೈತರು ಗಿಡನೆಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಮನವಿ ಮಾಡಿದರು.

ಹುಣಸೂರಿನ ಪ್ರಾದೇಶಿಕ ಅರಣ್ಯ ವಿಭಾಗ ಕಚೇರಿಯ ಕೇಂದ್ರೀಯ ಸಸ್ಯ ಕ್ಷೇತ್ರದ ಆವರಣದ 2017-18 ನೇ ಸಾಲಿನ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನೋಂದಾಯಿಸಿ ಕೊಂಡಿರುವ ರೈತರಿಗೆ ಸಸಿ ವಿತರಿಸಿ ಮಾತನಾಡಿದರು. 

ಈ ಸಾಲಿನಿಂದ ಸಸಿ ಬೆಳೆಸುವ ರೈತರಿಗೆ ಪ್ರತಿ ಬದುಕುಳಿಯುವ ಗಿಡಕ್ಕೆ ಸರಕಾರ 45 ರಿಂದ 100 ರೂಗೆ ಹೆಚ್ಚಿಸಿದ್ದು, ಮೊದಲ ಮತ್ತು ಎರಡನೇ ವರ್ಷ ತಲಾ 30 ರೂ ಮೂರನೇ ವರ್ಷ ಬದುಕುಳಿದ ಸಸಿಗಳಿಗೆ 40 ರೂ ಪ್ರೋತ್ಸಾಹ ಧನ ಸಿಗಲಿದೆ. ರಾಜ್ಯವನ್ನು ಹಸಿರು ವಲಯವಾಗಿಸಲು ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ರೈತರು ಆರ್ಥಿಕ ನೆರವಿನ ಈ ಯೋಜನೆ ಬಳಸಿಕೊಳ್ಳಿ ಇತರರಿಗೂ ತಿಳಿಸಿ ಎಂದರು.

ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಈ ಯೋಜನೆ ಹಳ್ಳಿಗಳಲ್ಲಿ ಹೆಚ್ಚು ಪ್ರಚುರಪಡಿಸಿ ರೈತರನ್ನು ಪ್ರೇರೇಪಿಸಬೇಕು. ರೈತರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಬೆಳೆಯುವ ಹಾಗೂ ಲಾಭ ತಂದು ಕೊಡುವ ಹೆಬ್ಬೇವಿಗೆ ಆದ್ಯತೆ ನೀಡಿ, ಅಲ್ಲದೆ ಮಾನವ, ಪಕ್ಷಿಗಳಿಗೆ ಉಪಯೋಗವಾಗುವ ನೇರಳೆ, ಹಲಸು, ಬೇಲದ ಸಸಿಗಳನ್ನು ಹಾಗೂ ಕೆರೆ ಹಾಗೂ ನದಿಯಂಚಿನಲ್ಲಿ ಬೆಳೆಯುವ ಬಿದಿರು ಸೇರಿದಂತೆ ಅತ್ಯವಶ್ಯ ಜಾತಿಯ ಸಸಿಗಳನ್ನು ವಿತರಿಸಬೇಕು.

 ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವ  ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗವು ಮುಂದೆಯೂ ಅದೇರೀತಿ ಮುಂದುವರೆಯಲೆಂದು ಆಶಿಸಿದರು. ಜಿಪಂ ಸದಸ್ಯೆ ಡಾ.ಪುಷ್ಪ ಅಮರ್‌ನಾಥ್‌ ಮಾತನಾಡಿ, ಈ ಯೋಜನೆ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಶಾಲಾ-ಕಾಲೇಜು ದಿಸೆಯಿಂದಲೇ ಸಸ್ಯ ಬೆಳೆಸುವ, ಪರಿಸರದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಅರಣ್ಯ ಇಲಾಖೆ ಕಾರ್ಯಕ್ರಮದ ಮೂಲಕ ಪ್ರೇರೇಪಿಸಬೇಕೆಂದು ಆಶಿಸಿ, ಗಿಡ ವಿತರಿಸಿದರೆ ಸಾಲದು ಅದರ ನಿರ್ವಹಣೆ ಬಗ್ಗೆಯೂ  ಆಸಕ್ತಿ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಎಸಿಎಫ್ ಸೋಮಪ್ಪ ಮಾತನಾಡಿ, ಈ ಸಾಲಿನಲ್ಲಿ ವಿವಿಧ ಜಾತಿಯ 4.10 ಲಕ್ಷ ಸಸಿಗಳನ್ನು 1200 ಮಂದಿ ರೈತರಿಗೆ ವಿತರಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ 4.30 ಲಕ್ಷ ಸಸಿಗಳನ್ನು ವಿತರಿಸಿದ್ದು, ಬದುಕುಳಿದ ಸಸಿಗಳಿಗೆ 28.89 ಲಕ್ಷರೂ ಪ್ರೋತ್ಸಾಹ ವಿತರಿಸಲಾಗಿದೆ. ಆಸಕ್ತ ರೈತರು ಸಸಿಗಳು ಬೇಕಾದಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

1 ಲಕ್ಷ ಕೊಡುಗೆ: ನಗರದ ಸಮಾಜ ಸೇವಕ ಮಾಕಂ ನಾಗರಾಜ ಶ್ರೇಷ್ಠಿಯವರು ಶಾಲಾ-ಕಾಲೇಜು ಆವರಣದಲ್ಲಿ ಹಣ್ಣಿನ ಸಸಿಗಳನ್ನು ಬೆಳೆಸುವ ಸಲುವಾಗಿ ಒಂದು ಲಕ್ಷರೂ ನೆರವು ನೀಡಿದ್ದು, ಶೀಘ್ರದಲ್ಲೇ ಚನ್ನಪಟ್ಟಣದ ಸಸ್ಯ ಕ್ಷೇತ್ರದಿಂದ ಸಸಿ ಖರೀದಿಸಿ ಹಂಚಲಾಗುವುದು, ಕೊಡುಗೆ ನೀಡಿರುವ ನಾಗರಾಜ ಶ್ರೇಷ್ಠಿಯವರ ಕಾರ್ಯ ಶ್ಲಾಘನೀಯ ಎಂದರು.

ವಲಯ ಅರಣ್ಯಾಧಿಕಾರಿ ಶಾಂತಕುಮಾರಸ್ವಾಮಿ, ಡಿಆರ್‌ಎಫ್ಒಗಳಾದ ಅಕ್ಷಯಕುಮಾರ್‌, ಪ್ಯಾರೆಜಾನ್‌, ಅರಣ್ಯ ರಕ್ಷಕರಾದ ಶೋಭಾ, ಕನಕಲಕ್ಷ್ಮೀ,ದೇವಯ್ಯ, ಅರಣ್ಯ ವೀಕ್ಷಕ ರಮೇಶ್‌, ಸ್ಪೂರ್ತಿ ಸಂಸ್ಥೆಯ ಬಸವರಾಜು ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.