ತಾಂಡವಪುರ ವ್ಯಾಪ್ತಿಯಲ್ಲಿ ಬಿ.ವೈ.ವಿಜಯೇಂದ್ರ ಪ್ರಚಾರ
Team Udayavani, Apr 11, 2018, 12:38 PM IST
ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರು ಮಂಗಳವಾರ ಕ್ಷೇತ್ರದ ತಾಂಡವಪುರ ಜಿಪಂ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಬೆಳಗ್ಗೆ ಸ್ಥಳೀಯ ಮುಖಂಡರೊಂದಿಗೆ ರಾಂಪುರಕ್ಕೆ ತೆರಳಿದ ವಿಜಯೇಂದ್ರ, ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ, ರಾಂಪುರ ಗ್ರಾಮ ದಲ್ಲಿ ಮತಯಾಚನೆ ಮಾಡಿದರು.
ನಂತರ ಗೌಡರಹುಂಡಿ, ಅಹಲ್ಯ, ಕೆಂಬಾಲು, ಬಿದರಗೂಡು, ಹಳ್ಳಿಕೆರೆಹುಂಡಿ, ಗೊದ್ದನಪುರ, ಮರಳೂರು, ಏಚಗಳ್ಳಿ, ಹಳ್ಳಿದಿಡ್ಡಿ, ತಾಂಡವಪುರ, ಹೆಬ್ಯಾ, ಅಡಕನಹಳ್ಳಿ ಹುಂಡಿ, ಚಿಕ್ಕಯ್ಯನಛತ್ರ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ಗ್ರಾಮಗಳಲ್ಲಿ ಮಂಗಳವಾದ್ಯ ಗಳೊಂದಿಗೆ ಬರಮಾಡಿಕೊಳ್ಳ ಲಾಯಿತು. ಬಿಜೆಪಿ ಮುಖಂಡರು ಗಳಾದ ಅಶೋಕ್, ಅಪ್ಪಣ್ಣ, ರಘು ಕೌಟಿಲ್ಯ ಸೇರಿದಂತೆ ಹಲವರು ವಿಜಯೇಂದ್ರ ಜತೆಗಿದ್ದರು. ಸಂಜೆ ಮಲ್ಲನಮೂಲೆ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.