ಅಕ್ರಮ ಮದ್ಯ ಮಾರಾಟಗಾರರ ಲೈಸೆನ್ಸ್ ರದ್ದು
Team Udayavani, Apr 25, 2020, 1:00 PM IST
ಸಾಂದರ್ಭಿಕ ಚಿತ್ರ
ನಂಜನಗೂಡು: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದು ಗಮನಕ್ಕೆ ಬಂದಲ್ಲಿ ಮಾರಾಟಗಾರರ ಲೈಸೆನ್ಸ್ ರದ್ದು ಮಾಡಿ, ಮಾಲೀಕರ ಅರೆ ಬೆತ್ತಲೆ ಮೆರವಣಿಗೆ ನಡೆಸುವುದಾಗಿ ಡಿವೈಎಸ್‌ಪಿ ಪ್ರಭಾಕರ್ ಸಿಂಧೆ ಎಚ್ಚರಿಸಿದರು. ತಮ್ಮ ಕಚೇರಿಯಲ್ಲಿ ನಡೆದ ಮದ್ಯ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಮದ್ಯ ಮಾರಾಟ ನಿಷೇಧಿಸಿ ತಿಂಗಳಾಗಿದ್ದರೂ ಅಕ್ರಮವಾಗಿ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮಾ.21 ರಂದು ಮದ್ಯ ಮಾರಾಟ ಮಳಿಗೆಯನ್ನು ಸೀಲ್ ಮಾಡಲಾಗಿದೆ. ನಾವು ಯಾವುದೇ ಸಮಯದಲ್ಲಿ ಬಂದು ಪರಿಶೀಲಿಸಿದಾಗ ಆಸಮಯದಲ್ಲಿದ್ದ ಮದ್ಯದ ದಾಸ್ತಾನು ಇರಬೇಕು. ಮದ್ಯ ಮಾರಾಟ ಮಳಿಗೆಯಲ್ಲಿ ಕಳ್ಳತನವಾದರೂ ಅದಕ್ಕೆ ಮಾರಾಟಗಾರರೇ ಹೊಣೆ ಯಾಗುತ್ತಾರೆ ಎಂದು ಎಚ್ಚರಿಸಿದರು. ಸಭೆಯಲ್ಲಿ ವೃತ್ತ ನೀರಿಕ್ಷಕ ರಾಜಶೇಖರ್, ಗ್ರಾಮಾಂತರ ಠಾಣಾಧಿಕಾರಿ ಸತೀಶ, ಪಟ್ಟಣ ಠಾಣೆಯ ಎಸ್‌ಐ ರವಿ ಕುಮಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.