MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ
ಮುಡಾ: ಕೆಸರೆ ಜಮೀನು ಮಾಲಕತ್ವಕ್ಕೆ ಈಗ ತಕರಾರು
Team Udayavani, Nov 28, 2024, 6:35 AM IST
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಕೆಸರೆಯ ಸ.ನಂ. 462, 464ರಲ್ಲಿ ಖರೀದಿಸಿರುವ 3.16 ಎಕರೆ ಜಮೀನಿನ ಮೂಲ ಮಾಲಕತ್ವಕ್ಕಾಗಿ ಕಾನೂನು ಹೋರಾಟ ಆರಂಭವಾಗಿದೆ.
ವಿವಾದಿತ ಭೂಮಿಯನ್ನು ಸಿದ್ದರಾಮಯ್ಯ ಭಾಮೈದ ಅವರು ದೇವರಾಜು ಎಂಬವರಿಂದ ಖರೀದಿಸಿದ್ದರು. ಈ ಪ್ರಕ್ರಿಯೆ ಕಾನೂನು ಬಾಹಿರವಾಗಿದ್ದು, ದೇವರಾಜು ನಮ್ಮ ಆಸ್ತಿಯನ್ನು ಮೋಸದಿಂದ ಮಲ್ಲಿಕಾರ್ಜುನಸ್ವಾಮಿ ಅವರಿಗೆ ಮಾರಾಟ ಮಾಡಿದ್ದಾರೆ. ಆ ಜಮೀನಿನಲ್ಲಿ ನಮಗೂ ಪಾಲು ಬರಬೇಕು ಎಂದು ದೇವರಾಜು ಅವರ ಅಣ್ಣ ಮೈಲಾರಯ್ಯ ಅವರ ಪುತ್ರಿ ಜಮುನಾ ಮೈಸೂರಿನ 7ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅ. 21ರಂದು ದಾವೆ ಹೂಡಿದ್ದರು. ಪ್ರಕರಣ ಕೈಗೆತ್ತಿಕೊಂಡಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು 2025ರ ಜನವರಿ 10ಕ್ಕೆ ಮುಂದೂಡಿದೆ.
ಜಮುನಾ ಅವರು ಸಹೋದರ ಎಂ. ಮಂಜುನಾಥ, ಚಿಕ್ಕಪ್ಪ ದೇವರಾಜು, ಸರೋಜಮ್ಮ, ಶೋಭಾ, ದಿನಕರ್ ರಾಜು, ಪ್ರಭಾ, ಡಿ. ಪ್ರತಿಭಾ, ಶಶಿಧರ, ಸಿಎಂ ಭಾಮೈದ ಮಲ್ಲಿಕಾರ್ಜುನಸ್ವಾಮಿ, ಪತ್ನಿ ಪಾರ್ವತಿ ಹಾಗೂ ಮುಡಾ ಆಯುಕ್ತರು ಮತ್ತು ಜಿಲ್ಲಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.