ಕಾಡಾನೆಗಳ ದಾಳಿ: ನೆಲಕ್ಕುರುಳಿದ ಸಾವಿರಾರು ಮರಗಳು
Team Udayavani, May 30, 2017, 1:00 PM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಭಾಗದಲ್ಲಿ ಕಳೆದರೆಡು ತಿಂಗಳಿನಿಂದ ಮಿತಿ ಮೀರಿದ್ದು, ಲಕ್ಷಾಂತರ ರೂ ಬೆಳೆನಷ್ಟ ಉಂಟಾಗಿದ್ದು, ಬರದ ನಡುವೆಯೂ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಲಲು ರೆತರು ಹೆಣಗಾಡುತ್ತಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಲ್ಲೇನಹೊಸಹಳ್ಳಿ, ಕೆ.ಜೆ.ಹಬ್ಬನಕುಪ್ಪೆ, ಚಂದನಗಿರಿ, ಕೋಣನಹೊಸಹಳ್ಳಿ, ಕೊಳವಿಗೆ,ನೇರಳಕುಪ್ಪೆ, ಕಚುವಿನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ನಿತ್ಯ ಕಾಡಾನೆಗಳ ಹಾಜರಾತಿ ಕಡ್ಡಾಯವಾಗಿದ್ದು, ರೆತರು ಕಷ್ಟಪಟ್ಟು ಬೆಳೆದಿರುವ ಮಾವಿನ ಮರಗಳು, ಕಾಫಿ,ಮೆಣಸು, ಮರಗೆಣಸು, ಶುಂಠಿ,ಜೋಳ ಸೇರಿದಂತೆ ನೂರಾರು ಎಕರೆ ಪ್ರದೇಶದ ಬೆಳೆಗಳು ಆನೆಗಳ ಪಾಲಾಗುತ್ತಿವೆ.
ಕೆ.ಜೆ.ಹಬ್ಬನಕುಪ್ಪೆಯ ತರಗನ್ ಎಸ್ಟೇಟ್ ಒಂದರಲ್ಲೇ ಕಳೆದರೆಡು ತಿಂಗಳಿನಿಂದೀಚೆಗೆ ಕಾಡಾನೆಗಳ ಹಿಂಡು ಸುಮಾರು1200 ಮರಗಳನ್ನು ಕೆಡವಿ ಹಾಕಿವೆ, ಅಲ್ಲದೆ ಕಾಳಬೋಚನಹಳ್ಳಿಯ ಕೆ.ಟಿ. ಪುಟ್ಟರಾಜ್‌ರ ಮರಗೆಣಸು ಬೆಳೆಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿ ಲಕ್ಷಾಂತರ ರೂ ನಷ್ಟ ಪಡಿಸಿವೆ. ಇದಲ್ಲದೆ ಅಕ್ಕ-ಪಕ್ಕದ ರೆತರ ಶುಂಠಿ ಬೆಳೆ ಹಾಗೂ ಪೆಪ್‌ಗ್ಳನ್ನು ಸಹ ನಾಶ ಪಡಿಸಿವೆ.
ಪಕ್ಕದ ಚಂದನಗಿರಿಯ ಶಾಂತಿಭೂಪತಿಗೆ ಸೇರಿದ ಶುಂಠಿ ಜಮೀನಿಗೂ ಲಗ್ಗೆ ಇಟ್ಟ ಕಾಡಾನೆಗಳು ಬೆಳೆ ಹಾಗೂ ಪಂಪ್‌ಸೆಟ್‌ನ ಪೆಪ್‌ಗ್ಳನ್ನು ನಾಶಪಡಿಸಿವೆ. ಹೆಬ್ಬನಕುಪ್ಪೆ ಗ್ರಾಮದ ಪೂಣಚ್ಚ, ಜಿ.ಎಂ,ದೇವಯ್ಯ, ಚಂದ್ರಶೇಖರ್ ರವರ ಕಾಫಿ ತೋಟ ಹಾಗೂ ಶುಂಠಿ ಬೆಳೆ ಹಾಗೂ ಪೆಪ್‌ಗ್ಳನ್ನು ಸಹ ನಾಶ ಪಡಿಸಿವೆ.
ರೆಲುಕಂಬಿ ತಡೆಗೋಡೆ ನಿರ್ಮಿಸಿ, ಆನೆಗಳ ಹಾವಳಿ ತಪ್ಪಿಸಿ:
ವೀರನಹೊಸಹಳ್ಳಿ ಗೇಟ್‌ನಿಂದ ಕೊಳುವಿಗೆವರೆಗೆ ಮಾತ್ರ ರೆಲುಕಂಬಿಯ ತಡೆಗೋಡೆ ನಿರ್ಮಿಸಿದ್ದು, ಆಭಾಗದಲ್ಲಿ ಕಾಡಾನೆ ಹಾವಳಿ ನಿಯಂತ್ರಣದಲ್ಲಿದೆ, ಆದರೆ ಕೋಣನಹೊಸಹಳ್ಳಿಯಿಂದ ಅಳ್ಳೂರಿನವರೆಗೆ ತಡೆಗೋಡೆ ಇಲ್ಲದೆ ಆನೆಗಳು ನದಿಯನ್ನು ದಾಟಿ ಆರಾಮವಾಗಿ ಹೊರಬರುತ್ತಿವೆ.ರೆತರ ಗೋಳು ಅರಣ್ಯ ರೋಧನವಾಗಿದೆ.
ರೆಲು ಕಂಬಿ ತಡೆಗೋಡೆ ನಿರ್ಮಿಸುವವರೆಗಾದರೂ ನಿಯಮಿತವಾಗಿ ಆನೆಗಳ ದಾಟದಂತೆ ಕಾವಲು ಹಾಕಬೇಕು,ನಷ್ಟಕ್ಕೆ ತಕ್ಕ ಪರಿಹಾರ ನೀಡಬೇಕು, ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸುವುದಾಗಿ ರೆತರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.