ವಾಹಿನಿಗಳ ಟಿಆರ್‌ಪಿ ದಾಹಕ್ಕೆ ಚಾರಿತ್ರ್ಯಹರಣ 


Team Udayavani, Dec 1, 2017, 2:34 PM IST

m6-vahini.jpg

ಮೈಸೂರು: ಸುದ್ದಿ ನೀಡುವ ಆತುರದಲ್ಲಿ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ಸುದ್ದಿ ಪ್ರಸಾರ ಮಾಡುವ ಸುದ್ದಿ ವಾಹಿನಿಗಳು ಟಿಆರ್‌ಪಿ ದಾಹಕ್ಕಾಗಿ ಬೇರೆಯವರ ಚಾರಿತ್ರ್ಯಹರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಸಂಸದ ಪ್ರತಾಪ್‌ ಸಿಂಹ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂ¸‌ ಉದ್ಘಾಟಿಸಿ ಮಾತನಾಡಿದರು. ಸುದ್ದಿ ನೀಡುವ ಧಾವಂತದಲ್ಲಿ ಸುದ್ದಿಯ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ಭಿತ್ತರಿಸಲಾಗುತ್ತದೆ.

ಇದರಿಂದ ಬಹುತೇಕ ಸಂದಭ‌ಗಳಲ್ಲಿ ವ್ಯಕ್ತಿಗಳ ಚಾರಿತ್ರ್ಯವಧೆ ಹಾಗೂ ತೇಜೋವಧೆಯಾಗಿ ತಲೆ ತಗ್ಗಿಸುವ ಪರಿಸ್ಥಿತಿ ಎದುರಾಗುತ್ತಿದೆ. ಈ ರೀತಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳಿಂದ ಅನೇಕರು ಆತ್ಮಹತ್ಯೆಗೆ ಮುಂದಾಗುತ್ತಾರೆ.

ಈ ನಿಟ್ಟಿನಲ್ಲಿ ನ್ಯೂಸ್‌ ಚಾನೆಲ್‌ಗ‌ಳು ಟಿಆರ್‌ಪಿ ದಾಹದಿಂದ ಸುಳ್ಳುಸುದ್ದಿ ಮೂಲಕ ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುವುದನ್ನು ನಿಲ್ಲಿಸಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಮುದ್ರಣ ಮಾಧ್ಯಮ ಅವನತಿಯತ್ತ ಸಾಗಿವೆ. ಆದರೆ, ಭಾರತದಲ್ಲಿ ಮುದ್ರಣ ಮಾಧ್ಯಮ ಇಂದಿಗೂ ತನ್ನ ವಿಶ್ವಾಸ ಉಳಿಸಿಕೊಂಡಿದ್ದು,

ವಿದ್ಯುನ್ಮಾನ ಮಾಧ್ಯಮಗಳಂತೆ ಸಹನೆ ಕಳೆದುಕೊಂಡು ಸುಳ್ಳುಸುದ್ದಿಗಳನ್ನು ಪ್ರಕಟಿಸಿದ್ದರೆ ನಮ್ಮ ದೇಶದಲ್ಲೂ ಮುದ್ರಣ ಮಾದ್ಯಮಗಳು ಅಸ್ತಿತ್ವ ಕಳೆದುಕೊಳ್ಳುತ್ತಿತ್ತು. ಆದರೆ ಯಾವುದೇ ಸುದ್ದಿ ಪ್ರಕಟಿಸುವ ಸಂದರ್ಭದಲ್ಲಿ ಸಂಬಂಧಪಟ್ಟವರ ಅಭಿಪ್ರಾಯವನ್ನು ಪಡೆದು ಪ್ರಕಟಿಸುವುದರಿಂದ ಮುದ್ರಣ ಮಾಧ್ಯಮ ಇಂದಿಗೂ ಓದುಗರ ವಿಶ್ವಾಸವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

ಹಾದಿ ತಪ್ಪುತ್ತಿದ್ದಾರೆ: ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊಸಬರಿಗೆ ಮಾರ್ಗದರ್ಶನ ನೀಡುವ ಹಿರಿಯ ಪತ್ರಕರ್ತರ ಸಂಖ್ಯೆಯೂ ಕಡಿಮೆಯಾಗಿದೆ. ಹಿರಿಯರ ಮಾತುಗಳನ್ನು  ಕೇಳುವಷ್ಟು ವ್ಯವಧಾನ ಕಿರಿಯ ಪತ್ರಕರ್ತರಿಗಿಲ್ಲದ ಕಾರಣ ಹಾದಿ ತಪ್ಪುತ್ತಿದ್ದಾರೆ ಎಂದು ವಿಷಾದಿಸಿದರು.

ಬದಲಾವಣೆಗೆ ಹೊಂದಿಕೊಳ್ಳಿ: ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪತ್ರಿಕೋದ್ಯಮ ಅಗತ್ಯವಿದೆ. ಆದರೆ, ಎಲ್ಲಾ ಕ್ಷೇತ್ರಗಳಂತೆ ಪತ್ರಿಕಾರಂಗವೂ ಬದಲಾವಣೆಯತ್ತ ಸಾಗಲಿದ್ದು, ಮುಂದಿನ ಕೆಲವು ವರ್ಷಗಳ ನಂತರ ಮುದ್ರಣ ಮಾಧ್ಯಮ ಸ್ಥಗಿತವಾಗಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಡಿವೈಸ್‌ ಮೂಲಕ ಮನೆಯಲ್ಲೇ ಅವರಿಗೆ ಬೇಕಾದ ಸುದ್ದಿಗಳನ್ನು ನೋಡುವ ವ್ಯವಸ್ಥೆ ಬಂದರೂ ಆಶ್ಚರ್ಯವಿಲ್ಲ. ಹೀಗಾಗಿ ಪತ್ರಕರ್ತರು ಇಂತಹ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಜಾjಗಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ವಿ.ಸಂಪತ್‌ಕುಮಾರ್‌, ರೇಣುಕಾ ತುಂಬಸೋಗೆ, ಬಾಪುಲಿಂಗರಾಜೇ ಅರಸ್‌, ಟಿ.ಎನ್‌. ಹೇಮಂತ್‌ಕುಮಾರ್‌, ಎಚ್‌.ಎಲ್‌.ಶಾರದಾಸಂಪತ್‌, ನೇತ್ರರಾಜು ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಉತ್ತಮ ವರದಿಗಾರಿಕೆ ಪ್ರಶಸ್ತಿಯನ್ನು ಹರೀಶ್‌ ಎಲ್‌.ತಲಕಾಡು, ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಅನುರಾಗ್‌ ಬಸವರಾಜ್‌ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಂದೀಪ್‌ ಡಿ., ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಇತರರಿದ್ದರು.

ಪತ್ರಿಕೋದ್ಯಮದಲ್ಲಿದ್ದ ನನಗೆ ಸಂಸದನಾಗುವ ಅವಕಾಶ ಆಕಸ್ಮಿಕವಾಗಿ ದೊರೆತಿದೆ. ಅನುಭವವಿಲ್ಲದಿದ್ದರೂ ಯಾರಿಂದಲೂ ಒಂದು ಪೈಸೆಯೂ ಲಂಚ ಪಡೆಯದೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸಂಸದನಾದ ಮಾತ್ರಕ್ಕೆ ಅಹಂಕಾರ ಹಾಗೂ ಭ್ರಮಾಲೋಕದಲ್ಲಿ ತೇಲದೆ ಹಳೆಯದನ್ನು ನೆನಪಿಸಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದೇನೆ.
-ಪ್ರತಾಪ್‌ಸಿಂಹ, ಸಂಸದ

ಟಾಪ್ ನ್ಯೂಸ್

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

10-health

Asthma: ಎತ್ತರ ಪ್ರದೇಶಗಳು ಮತು ಅಸ್ತಮಾ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

9-bbk11

BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?

8-health

Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ

ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

Delhi: ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

MINCHU HULA: ತಂದೆ ಮಗನ ಸುತ್ತ ʼಮಿಂಚು ಹುಳʼ; ಅ.4ಕ್ಕೆ ತೆರೆಗೆ

MINCHU HULA: ತಂದೆ ಮಗನ ಸುತ್ತ ʼಮಿಂಚು ಹುಳʼ; ಅ.4ಕ್ಕೆ ತೆರೆಗೆ

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

10-health

Asthma: ಎತ್ತರ ಪ್ರದೇಶಗಳು ಮತು ಅಸ್ತಮಾ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

9-bbk11

BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.