ಸುಣ್ಣದಕೇರಿ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
Team Udayavani, Jan 6, 2018, 11:31 AM IST
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರದ ಸುಣ್ಣದಕೇರಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಂಕರ.ಎಂ ಮತ್ತು ಉಪಾಧ್ಯಕ್ಷರಾಗಿ ಚಂದ್ರು ಅವಿರೋಧ ಆಯ್ಕೆಯಾದರು.
ತಾಲೂಕಿನ ಬೆಟ್ಟದಪುರದ ಎರಡನೇ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಡಿಸೆಂಬರ್ 24 ರಂದು ನಡೆದಿದ್ದು, 11 ಜನ ನಿರ್ದೇಶಕರು ಆಯ್ಕೆಯಾಗಿದ್ದರು. ಸಹಕಾರ ಸಂಘದ ನಿಯಮದಂತೆ ಅಧ್ಯಕ್ಷರ ಚುನಾವಣೆಯನ್ನು ನಿಗದಿ ಪಡಿಸಿದ್ದು,
ಅದರಂತೆ 2 ನಾಮಪತ್ರ ಹೊರತುಪಡಿಸಿ ಬೇರೆ ಯಾವ ನಾಮಪತ್ರ ಸಲ್ಲಿಸಿರಲಿಲ್ಲ, ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾಗಿದ್ದ ಸಹಕಾರ ಸಂಘಗಳ ಮೇಲ್ವಚಾರಕರಾದ ಪುಟ್ಟಸ್ವಾಮಿಗೌಡ ಅವರು ಅಧ್ಯಕ್ಷರಾಗಿ ಶಂಕರ.ಎಂ. ಮತ್ತು ಉಪಾಧ್ಯಕರಾಗಿ ಚಂದ್ರು ಅವಿರೋಧ ಆಯ್ಕೆಯಾಗಿದ್ದಾರೆಂದು ಘೊಷಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ನಾರಾಯಣ, ವೀರಭದ್ರ, ಗ್ರಾಮದ ಮುಖಂಡರುಗಳಾದ ಮಾಜಿ ಗ್ರಾ.ಪಂ ಅಧ್ಯಕ್ಷರುಗಳಾದ ಚನ್ನಕೇಶವ, ರಂಗಸ್ವಾಮಿ ಮಾಜಿ ಸದಸ್ಯ ಜಗದೀಶ್ ,ಕುಮಾರ, ನಾಗರಾಜು, ಮಂಜು, ಗೋವಿಂದ, ಶಂಕರ, ಅಂಜನೇಯ, ರಾಜು, ಕಾರ್ಯದರ್ಶಿ ಮಂಜು ,ಹಾಲು ಪರೀಕ್ಷಕ ಲೋಕೇಶ್ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.