ಸಾರೋಟಲ್ಲಿ ಮೆರವಣಿಗೆ ಮಾಡಿಸಿಕೊಂಡಿದ್ದರಿಂದ ಶನಿ ಹೆಗಲೇರಿದ್ದ: ಜಿಟಿಡಿ

ಮಗನಿಗೆ ಪಟ್ಟದ ಅಧಿಕಾರ ಕೊಡಿ, ಇಬ್ಬರೂ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇವೆ

Team Udayavani, Mar 19, 2023, 9:19 PM IST

1-sadsad-as-d

ಹುಣಸೂರು: ಪುತ್ರ ಹರೀಶ್‌ಗೌಡನನ್ನು ನಿಮ್ಮ ಮಡಿಲಿಗೆ ಹಾಕಿದ್ದೀನಿ, ಪಟ್ಟದ ಅಧಿಕಾರ ಹುಣಸೂರಿನಿಂದಲೇ ಆಗಬೇಕು.ಇಲ್ಲಿಂದಲೇ ಅಧಿಕಾರ ಸಿಗಬೇಕು. ತಾಯಂದಿರು ಆಶಿರ್ವದಿಸಬೇಕೆಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.

ಹುಣಸೂರಿನ ಕಲ್ಕುಣಿಕೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಆಯೋಜಿಸಿದ್ದ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹುಣಸೂರಲ್ಲಿ ಎರಡು ಬಾರಿ ಶಾಸಕ, ಮಂತ್ರಿಯಾಗಿದ್ದ ಅವಧಿಯಲ್ಲಿ ನಗರಕ್ಕೆ ಕೆ.ಆರ್.ನಗರದಿಂದ ಕಾವೇರಿ ನೀರುಪೂರೈಕೆ, ನೀರಾವರಿ ಯೋಜನೆ ಮೂಲಕ 35 ಸಾವಿರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ, ಹಾರಂಗಿ ನಾಲೆಗಳ ಅಭಿವೃದ್ದಿ, 75 ನೀರಿನ ಟ್ಯಾಂಕ್ ನಿರ್ಮಾಣ, ಶಾಲಾ-ಕಾಲೇಜು, ಅಸ್ಪತ್ರೆ, ಪಶುಆಸ್ಪತ್ರೆ ಮಂಜೂರು, ರಸ್ತೆಗಳ ಅಭಿವೃದ್ದಿ, ನಾಲ್ಕು ಸಬ್ ಸ್ಟೇಷನ್ ಮಾಡಿಸಿದ್ದೆ, ಸೇತುವೆ ನಿರ್ಮಾಣ, ನಗರದ ರಸ್ತೆ ಅಭಿವೃದ್ದಿ, ಎಂಎಲ್‌ಸಿಯಾಗಿದ್ದ ಚಿಕ್ಕಮಾದುರಿಂದ ಸಾಗುವಳಿ ವಿತರಣೆ, ಹೀಗೆ ಸಮಗ್ರ ಅಭಿವೃದ್ದಿ ಮಾಡಿಸಿರುವ ಹೆಮ್ಮೆ ಇದೆ. ಇದಕ್ಕೆ ವಿರೋಧಿ ಎನ್ನುತ್ತೀರಾ ಎಂದು ಪ್ರಶ್ನಿಸಿದರು.

ಅಂಬೇಡ್ಕರ್,ವಾಲ್ಮೀಕಿ, ಜಗಜೀವನರಾಂ ಸಮುದಾಯ ಭವನಕ್ಕೆ ಅನುದಾನ, ಕುರುಬ ಸಮುದಾಯ ಭವನಕ್ಕೆ 1.25 ಕೋಟಿ ಮಂಜೂರು ಮಾಡಿಸಿದ್ದೆ, ಸಿದ್ದರಾಮಯ್ಯ ಒಂದು ಕೋಟಿ ಕೊಟ್ಟಿದ್ದಾರೆ ಅಂತಾರಲ್ಲಾ, ಸರಿನಾ ಎಂದು ಪ್ರಶ್ನಿಸಿದ ಅವರು 25 ವರ್ಷ ಸಿದ್ದರಾಮಯ್ಯರ ಗೆಲುವಿಗೆ ದುಡಿದಿದ್ದೇನೆ. ಅಂದು ದೇವೇಗೌಡ್ರು, ಕುಮಾರಸ್ವಾಮಿರನ್ನ ಮನವೊಲಿಸಿ ಕುರುಬ ಸಮಾಜದ ಪೆಟ್ರೋಲ್‌ಬಂಕ್ ಕುಮಾರಸ್ವಾಮಿ, ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸಿದ್ದು, ಸಾ.ರಾ.ಮಹೇಶ್, ಕೆ.ಮಹದೇವ್, ಅಶ್ವಿನ್‌ಗೆ ಗೆಲ್ಲಿಸಿದ್ದೇನೆ, ಫಜಲ್, ಗಿರಿಜನ ಮಹಿಳೆ ಜಾಜಿಯಮ್ಮನನ್ನು ಗೆಲ್ಲಿಸಿದ್ದೆ, ರಮೇಶ,ಕಣ್ಣಯ್ಯ, ಲಕ್ಷ್ಮಣನಿಗೆ ಅಧಿಕಾರ ಕೊಡಿಸಿದ್ದೆ. ದಲಿತ ಪುಟ್ಟಮಾದಯ್ಯನಿಗೆ ಅಧ್ಯಕ್ಷರನ್ನಾಗಿ ಮಾಡಿದೆ ಎಂದರು.

ಶನಿದೇವರು ಹೆಗಲೇರಿದ
ನಗರದ ಬೀದಿಗಳಲ್ಲಿ ವೈರ್ ನೇತಾಡುತ್ತಿತ್ತು ಹೊಸದಾಗಿ ೩೫೦೦ ವಿದ್ಯುತ್ ಕಂಬ ಬದಲಾಯಿಸಿದೆ. ಸೇತುವೆ ಕಟ್ಟಿಸಿದೆ.15 ಎಕರೆ ಜಾಗ ಇದೆ.15 ವರ್ಷದಿಂದ ನಿವೇಶನ ಕೊಟ್ಟಿಲ್ಲ. ತಾಲೂಕಿನ ರಸ್ತೆಗಳ ಅಭಿವೃದ್ದಿ, ಹೊಸ ಆಸ್ಪತ್ರೆ,ಶಾಲಾ-ಕಾಲೇಜು ನಿರ್ಮಾಣ, ಕೆರೆ ನೀರು ತುಂಬಿಸಿದ್ದೆ. ಕಟ್ಟೆಮಳಲವಾಡಿ ನಾಲೆ ಅಭಿವೃದ್ದಿಗೊಳಿಸಿ ೩೫ ಬೃಹತ್ ನೀರಾವರಿಗೆ ಸೇರಿಸಿದೆ. ನಿಮ್ಮ ಮಕ್ಕಳು ವಿದ್ಯಾವಂತರಾಗಿದ್ದಾರೆಂದರೆ ಈ ಜಿಟಿಡಿ ಶ್ರಮ ಇದೆ. ಆಕಸ್ಮಿಕವಾಗಿ ಹುಣಸೂರಿಗೆ ಬಂದೆ. ಚಿಕ್ಕಮಾದು ನನ್ನನ್ನು ಜೋಡಿ ಸಾರೋಟಿನಲ್ಲಿ ಮೆರವಣಿಗೆ ಮಾಡಿಸಿದ್ದರು. ಶನಿದೇವರು ಹೆಗಲೇರಿದ ಚಿಕ್ಕಮಾದು ನಾನು ಇಬ್ಬರೂ ಸೋತು ಹೋದೆವೆಂದು ಮಾರ್ಮಿಕವಾಗಿ ನುಡಿದರು.

ತ್ಯಾಗ ಮಾಡೋರಿಗೆ ವ್ಯಾಪಾರ ಮಾಡೋರು ಸವಾಲ್ ಹಾಕ್ತಿಯಪ್ಪ
ಕುಮಾರಣ್ಣ, ರೇವಣ್ಣ, ಸಿದ್ದರಾಮಯ್ಯನವರ ಬೆಂಬಲದಿಂದ ಅಭಿವೃದ್ದಿಗೊಳಿಸಿದ್ದೆ. ಶೆಟ್ರು ರಿಯಲ್ ಎಸ್ಟೇಟ್, ಮೈನ್ಸ್ ಮಾಡಿ ಎಲೆಕ್ಷನ್‌ಗೆ ಆಗುವಷ್ಟು ದುಡ್ಡು ಇಟ್ಟಿದ್ದೀಯಪ್ಪಾ, ದುಡ್ಡು ತಗೊಳ್ಳಿ ಬಿಡಬೇಡಿ.ಆದರೆ ಕುಮಾರಣ್ಣನಿಗೆ ಬೆಂಬಲ ಕೊಡಿ. ನನ್ನ ಅನುದಾನವನ್ನೂ ಹುಣಸೂರಿಗೆ ಕೊಡುತ್ತೇನೆ. ಹರೀಶ್ ಗೌಡನಿಗೆ ಬೆಂಬಲ ಕೊಡಿ ಎಂದರು.

ಪೊಲೀಸರು ನ್ಯಾಯಕೊಡಿ
ಪೊಲೀಸರು ನ್ಯಾಯದ ಪರವಾಗಿರ್ರೀ, ಕಾಂಗ್ರೆಸ್‌ನವರ ಪರವಾಗಿ ಎಷ್ಟು ದಿನ ಕೆಲಸ ಮಾಡುತ್ತೀರಾ. ಎಷ್ಟು ದಿನ ಉಳಿತೀರಾ, ಕೇಸ್ ಹಾಕ್ತಿರಾ, ಇನ್ನು 15 ದಿನದಲ್ಲಿ ಎಲ್ಲಾ ಮುಗೀತು. ನಿಮ್ಮ ಆಟ ನಡೆಯಲ್ಲ. ವಕೀಲನಿಗೆ ಕುತ್ತಿಗೆ ಪಟ್ಟಿ ಹಿಡಿದು ಹೊಡೀತಾರಾ, ಯಾರು ರೌಡಿ. ಈ ಎಂಎಲ್‌ಎ ಕೇಸ್ ಹಾಕಿಸುವುದಕ್ಕೆ ಇರೋದು ನಮ್ಮ ಸರ್ಕಾರ ಬಂದರೆ ಎಲ್ಲಾ ಕೇಸ್‌ಗಳನ್ನು ಬಿ.ರಿಪೋರ್ಟ್ ಹಾಕಿಸುತ್ತೇನೆ. ಜನರು ತಾಳ್ಮೆಯಿಂದಿರಿ ಹೆದರ ಬೇಡಿ ಎಂದು ಗೆಲುವಿನ ವಿಶ್ವಾಸದ ಮಾತುಗಳನ್ನಾಡಿದರು.

ತಾಲ್ಲೂಕು ಅಧ್ಯಕ್ಷ ದೇವರಾಜಒಡೆಯರ್, ಜಿ.ಪಂ.ಸದಸ್ಯ ಮಾಜಿ ಫಜಲುಲ್ಲಾ, ರಂಜಿತಾ ಚಿಕ್ಕಮಾದು, ಪುರಸಭೆ ಸದಸ್ಯರಾದ ಮಾಜಿ ಕಲ್ಕುಣಿಕೆ ಆನಂದ್, ದೇವರಾಜ್, ಪಕ್ಷದ ವಕ್ತಾರ ಎಂ.ಶಿವಕುಮಾರ್ ಮಾತನಾಡಿ ತಾಲೂಕಿನಲ್ಲಿ ಹಿಟ್ಲರ್ ಆಡಳಿತವಿದ್ದು ಕೊನೆಗಾಣಿಸಬೇಕೆಂದರು.

ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ, ನಿಯೋಜಿತ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ಮಾತನಾಡಿ ಯಾವುದೇ ಉತ್ಸವ ಆರಂಭವಾಗೋದು ಕಲ್ಕುಣಿಕೆಯ ರಂಗನಾಥ ಬಡಾವಣೆಯಿಂದ. ಇಂದು ಜೆಡಿಎಸ್ ಉತ್ಸವ ಇಲ್ಲಿಂದಲೇ ಪ್ರಾರಂಭ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಈ ಉತ್ಸವ ವಿಧಾನಸೌದ ಪ್ರವೇಶಿಸಲಿದೆ. ಕಲ್ಕುಣಿಕೆಯಲ್ಲಿ ಒಗ್ಗಟ್ಟಿದೆ. ಜಿಟಿಡಿಯವರು ಶಾಸಕ, ಸಚಿವರಾದ ವೇಳೆ ಬೆಂಬಲ ನೀಡಿದ್ದರಿಂದ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಇದಕ್ಕೆ ಜನಾಶೀರ್ವಾದ ಕಾರಣ. ಕಾವೇರಿ ನೀರು ವಿಸ್ತರಿಸಲು ಇಂದಿಗೂ ಸಾಧ್ಯವಾಗಿಲ್ಲ.ತಾಲೂಕಿನಲ್ಲಿ ಮುಖ್ಯರಸ್ತೆ ಆಗಿಲ್ಲ.ಎಲ್ಲರ ಪ್ರೀತಿ ಆಶಿರ್ವಾದ ನನ್ನ ಮೇಲಿರಲಿ ಅಭಿವೃದ್ದಿ ಮಾಡಲು ನಾನು ಬದ್ದ ಎಂದರು.

ಹರೀಶ್ ಗೌಡ ಬಂದಿದ್ದಾನೆ, ದಬ್ಬಾಳಿಕೆ ಮಾಡುತ್ತಾನೆ ಎನ್ನುತ್ತಿದ್ದಾರೆ. ನನ್ನ ಮೇಲೂ ಕೇಸ್ ಹಾಕಿಸಿದ್ದಾರೆ. ಪೋಟೋ ಹಾಕಿಕೊಂಡರೆ ಪೊಲೀಸರಿಂದ ಪೋನ್ ಮಾಡಿಸುತ್ತಾರೆ. ತಾಲೂಕಿನಲ್ಲಿ ೧೫ ವರ್ಷದಿಂದೀಚೆಗೆ ಕಾಂಗ್ರೆಸ್‌ನಲ್ಲಿ ಒಬ್ಬ ನಾಯಕನೆಂದು ಹೇಳಿಕೊಳ್ಳುವವರು ಯಾರೂ ಇಲ್ಲ. ಯಾರಿಗೆ ಪ್ರಾತಿನಿತ್ಯ ಕೊಟ್ಟಿದ್ದೀರಾ.15ವರ್ಷಗಳ ಹಿಂದೆ ಗಾರ್ಮೆಂಟ್ಸ್ ತರುತ್ತೇನೆ ಎಂದ್ದೀರಿ. ಈಗ 2 ಸಾವಿರ ಗ್ಯಾರಂಟಿ ಎನ್ನುತ್ತೀದ್ದೀರಾ ನಿಮ್ಮ 2 ನೇ ಅವತಾರ ಇದು. ಅಪ ಪ್ರಚಾರ ನಿಲ್ಲಿಸಿ. ನಾನೇ ವೆಚ್ಚ ಭರಿಸಿ ಕಸಬಾ ಸೊಸೈಟಿ ಕಟ್ಟಡ ನಿರ್ಮಿಸಿಕೊಟ್ಟಿದ್ದೀನಿ. ಸೊಸೈಟಿ ವತಿಯಿಂದ 2.5 ಕೋಟಿ ಸಾಲ ಮನ್ನಾ ಆಗಿದೆ.ಕುಮಾರಣ್ಣ ಮಾತಿಗೆ ತಪ್ಪಿಲ್ಲ, ಖಂಡಿತಾ ಸಾಲ ಮನ್ನಾ ಮಾಡುತ್ತಾರೆ ಎಂದರು.

ನಮ್ಮ ಮತದಾರರು, ಮಹಿಳೆಯರು, ಮುಗ್ದರಲ್ಲ. ಚುನಾವಣೆಯಲ್ಲಿ ಈ ಹರೀಶನನ್ನು ಹರಸಿ, ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ದೇವರಾಜ ಒಡೆಯರ್,ಯಶೋಧ,ರಂಜಿತಾ, ಶಿವಕುಮಾರ್, ಸತೀಶ್‌ಕುಮಾರ್,ಪಾಂಡು, ಆನಂದ,ಕೃಷ್ಣನಾಯಕ,ಕಾವೇರಿ ದಿನೇಶ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಂಮದಿ ಭಾಗವಹಿಸಿದ್ದರು.

ಮೆರವಣಿಗೆ
ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸುತ್ತಾ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹಾಗೂ ನಿಯೋಜಿತ ಅಭ್ಯರ್ಥಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡರನ್ನು ಕಲ್ಕುಣಿಕೆ ಸರ್ಕಲ್‌ನಿಂದ ರಂಗನಾಥ ಬಡಾವಣೆವರೆಗೆ ನಗಾರಿ, ದೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿದರು, ಮೂಲಕ ಕರೆತಂದು ನಂತರ ವೇದಿಕೆ ಕಾರ್ಯಕ್ರಮ ನಡೆಸಿದರು. ಹಲವರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.