ಚಾಮುಂಡೇಶ್ವರಿ ದೇಗುಲ ಆದಾಯ 30 ಕೋಟಿ ರೂ.
Team Udayavani, Apr 6, 2018, 12:49 PM IST
ಮೈಸೂರು: ನಾಡದೇವತೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2017-18ನೇ ಸಾಲಿನಲ್ಲಿ 29.95 ಕೋಟಿ ರೂ. ಆದಾಯ ಬಂದಿದೆ. 2014-15ನೇ ಹಣಕಾಸು ವರ್ಷದಲ್ಲಿ 18,33,69, 828 ರೂ., 2015-16ನೇ ಸಾಲಿನಲ್ಲಿ 21,74,00,255 ರೂ., 2016-17ನೇ ಸಾಲಿನಲ್ಲಿ 24,09,53,742 ರೂ. ಆದಾಯ ಬಂದಿತ್ತು.
ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ಮಾತನಾಡಿ, ದೇಗುಲದ ಆದಾಯ ಇಲ್ಲಿನ ನಿಧಿಯಲ್ಲಿಯೇ ಇರುತ್ತದೆ. ಸರ್ಕಾರದ ಖಜಾನೆಗಾಗಲಿ, ಇನ್ನಿತರೆ ಯಾವುದೇ ಯೋಜನೆಗಳಿಗೆ ಬಳಸುವುದಿಲ್ಲ. ದೇವಸ್ಥಾನದ ಆಡಳಿತ ಮಂಡಳಿಯು ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
2017-18ನೇ ಸಾಲಿನಲ್ಲಿ 100 ರೂ. ನೇರ ಪ್ರವೇಶದ ಟಿಕೆಟ್ ಪಡೆದ ಭಕ್ತರಿಗೆ ಉಚಿತ ಲಾಡು ಪ್ರಸಾದ ಹಾಗೂ ಕುಂಕುಮ ವಿತರಣೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಭಕ್ತರ ಅನುಕೂಲಕ್ಕಾಗಿ ಮಧ್ಯಾಹ್ನದ ದಾಸೋಹದ ಜತೆಗೆ ಬೆಳಗ್ಗೆ ಮತ್ತು ಸಂಜೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಪ್ರವಾಸಿಗರಿಗೆ ಬೆಟ್ಟದ ಮೇಲಿಂದ ಮೈಸೂರು ನಗರ ವೀಕ್ಷಣೆಗಾಗಿ ಬೈನಾಕ್ಯೂಲರ್ ಮತ್ತು ನಂದಿ ಬಳಿ ಚಾಮುಂಡಿಬೆಟ್ಟದ ವೀಕ್ಷಣೆಗಾಗಿ ವ್ಯೂ ಪಾಯಿಂಟ್ ನಿರ್ಮಿಸಲಾಗಿದೆ. ದೇವಸ್ಥಾನದ ವಿವಿಧ ಸೇವೆಗಳಿಗೆ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ.
ಭಕ್ತರು, ಪ್ರವಾಸಿಗರ ಅನುಕೂಲಕ್ಕಾಗಿ ಕಾರ್ಡ್ ಸ್ವೆ„ಪಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಚಾಮುಂಡಿಬೆಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು 6.95 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಮೂಲಗಳು ಆದಾಯ
ಹುಂಡಿಗಳಿಂದ 10,25,37,945 ರೂ.
30 ರೂ. ಪ್ರವೇಶ ಶುಲ್ಕ 2,37,32,530 ರೂ.
100 ರೂ. ನೇರ ಪ್ರವೇಶ 7,47,41,926 ರೂ.
ಮನಿಯಾರ್ಡರ್ 9,00,539 ರೂ.
ಡಿಡಿ, ಧನಾದೇಶ 9,10,286 ರೂ.
ವಿವಿಧ ಗುತ್ತಿಗೆ 36,50,954 ರೂ.
ಪ್ರಸಾದ ಮಾರಾಟ 3,58,93,121 ರೂ.
ಸೇವಾರ್ಥ, ಇತರೆ ಸೇವೆ 6,31,828 ರೂ.
ಅತಿಥಿಗೃಹದ ಬಾಡಿಗೆ 1,84,900 ರೂ.
ದಾಸೋಹ ಕಾಣಿಕೆ 1,18,01,752 ರೂ.
ಹಾಲ್ ಬಾಡಿಗೆ 11, 87,100 ರೂ.
ವಿವಿಧ ಗುತ್ತಿಗೆ 14,300 ರೂ.
ಮಳಿಗೆಗಳ ಬಾಡಿಗೆ 6,21,627 ರೂ.
ಗಣಪತಿ ಸೇವೆ 38 ಸಾವಿರ ರೂ.
ಚಿತ್ರೀಕರಣ 10 ಸಾವಿರ ರೂ.
ಸೀರೆಗಳ ಹರಾಜು 1,73,55,155 ರೂ.
ಅರಮನೆ ಸೇವಾರ್ಥ 16,09,878 ರೂ.
ಶಾಲಾ ಕಟ್ಟಡದ ಬಾಕಿ 20 ಸಾವಿರ ರೂ.
ಇ-ಸೇವೆಗಳಿಂದ 16,99,080 ರೂ.
ಬೆಂಗಳೂರು ಒನ್ ಸೇವೆ 18,04,181 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು
Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.