ಮೈಸೂರು : ಕೋವಿಡ್ ; ಶಾಲೆ ಇಲ್ಲದ್ದಕ್ಕೆ ಬಾಲ್ಯ ವಿವಾಹ ದ್ವಿಗುಣ


Team Udayavani, Sep 21, 2020, 3:19 PM IST

ಕೋವಿಡ್: ಶಾಲೆ ಇಲ್ಲದ್ದಕ್ಕೆ ಬಾಲ್ಯ ವಿವಾಹ ದ್ವಿಗುಣ

ಮಧ್ಯರಾತ್ರಿ ಸಮಯದಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ, ಮದುವೆ ನಿಲ್ಲಿಸುತ್ತಿರುವ ಅಧಿಕಾರಿಗಳು.

ಮೈಸೂರು: ಸಾಮಾಜಿಕ ಅನಿಷ್ಟ ಪದ್ಧತಿಗಳಲ್ಲಿ ಒಂದಾದ ಬಾಲ್ಯ ವಿವಾಹ ಇಂದಿಗೂ ಸಮಾಜದಲ್ಲಿ ನಡೆಯುತ್ತಿದ್ದು, ಲಾಕ್‌ಡೌನ್‌ ನಂತರ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಬೆಳಕಿಗೆ ಬಂದ ಸಂಖ್ಯೆ ದ್ವಿಗುಣವಾಗಿದೆ. ಪ್ರತಿ ವರ್ಷ ಸಾಮಾನ್ಯವಾಗಿ 60-80 ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇವುಗಳನ್ನು ತಡೆಯಲಾಗುತ್ತಿತ್ತು. ಆದರೂ 7-8 ಬಾಲ್ಯ ವಿವಾಹಗಳು ನಡೆಯುತ್ತಿದ್ದವು. ಆದರೆ, ಈ ವರ್ಷ ಈ ಸಂಖ್ಯೆ ದ್ವಿಗುಣವಾಗಿದೆ.

ಮಾರ್ಚ್‌ ಅಂತ್ಯದಲ್ಲಿ ಲಾಕ್‌ಡೌನ್‌ ಜಾರಿಯಾದಂತೆ ಈವರೆಗೆ ಜಿಲ್ಲೆಯಲ್ಲಿ 149 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿದೆ. ಇವುಗಳಲ್ಲಿ 131 ವಿವಾಹಗಳನ್ನು ತಡೆಯಲಾಗಿದ್ದು, 18 ಬಾಲ್ಯ ವಿವಾಹಗಳು ನಡೆದಿವೆ.ಈ ಸಂಬಂಧ ಜಿಲ್ಲೆಯ ವಿವಿಧ ಭಾಗಗಳಲ್ಲಿ 18 ಪ್ರಕರಣ ದಾಖಲಾಗಿದೆ. ಈ ನಡುವೆ ಬೆಳಕಿಗೆ ಬಾರದೆ ಹಲವು ಪ್ರಕರಣಗಳು ಉಳಿದಿರುವುದು ಇದೆ. ಬಾಲ್ಯ ವಿವಾಹ ತಡೆ ಕಾಯಿದೆ ಜಾರಿ ಮಾಡಿ ಹಲವು ವರ್ಷಗಳೇ ಕಳೆದರೂ, ಮಕ್ಕಳ ಪೋಷಕರು ತಮ್ಮ ಮರ್ಯಾದೆಗೆ ಅಂಜಿ ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ.

ಬಡತನ,ಕಾಯಿದೆ ಸಂಬಂಧ ಅರಿವಿನ ಕೊರತೆ ಜೊತೆಗೆ ತಮ್ಮ ಮಕ್ಕಳು ಬೇರೆ ಯುವಕನನ್ನು ಪ್ರೀತಿಸುವ ವಿಷಯ ಬೆಳಕಿಗೆ ಬಂದಾಕ್ಷಣ ಹಾಗೂ ಲಾಕ್‌ಡೌನ್‌ ಸಮಯದಲ್ಲಿ ಶಾಲಾ ಕಾಲೇಜು ಇಲ್ಲದಿದ್ದರಿಂದ ಮಕ್ಕಳು ಮನೆಯಲ್ಲೇ ಉಳಿದ ಪರಿಣಾಮ ಪೋಷಕರು18 ವರ್ಷ ತುಂಬದೇ ಇರುವ ಮಗಳಿಗೆ ರಾತ್ರೋರಾತ್ರಿ ವರನನ್ನು ಹುಡುಕಿ ಮದುವೆ ಮಾಡುವ ಪ್ರಸಂಗಗಳು ಹೆಚ್ಚಾಗಿ ನಡೆದಿವೆ.

18 ಬಾಲಕಿಯರ ರಕ್ಷಣೆ: ಮಾರ್ಚ್‌ನಿಂದ ಈವರೆಗೆ ಜಿಲ್ಲೆಯಲ್ಲಿ ಮಧ್ಯರಾತ್ರಿ, ಬೆಳಗಿನ ಜಾವವೇ 18 ಬಾಲ್ಯ ವಿವಾಹಗಳು ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಮದುವೆ ಮಾಡಿದ ಪೋಷಕರು ಹಾಗೂ ವರನ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಂಡಿರುವುದು ಒಂದೆಡೆಯಾದರೆ, ಹುಡುಗಿಯನ್ನು ರಕ್ಷಣೆ ಮಾಡಿ, ಮೈಸೂರಿನಲ್ಲಿರುವ ಬಾಲಕಿಯರ ಬಾಲ ಮಂದಿರದಲ್ಲಿ ಇಡಲಾಗಿದೆ. ಬಾಲ ಮಂದಿರದಲ್ಲಿಡಲಾದ ಹೆಣ್ಣಮಕ್ಕಳಿಗೆ ಉಚಿತ ಶಿಕ್ಷಣ,ಊಟಹಾಗೂವಸತಿನೀಡಲಾಗುತ್ತಿದ್ದು,ಅವರಸ್ವಾವಲಂಬನೆಗಾಗಿ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗುತ್ತಿದೆ.

ಮಾಹಿತಿ ಇದ್ದರೆ ಕರೆ ಮಾಡಿ: ಜಿಲ್ಲೆಯ ಬಾಲ್ಯ ವಿವಾಹ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಇಲಾಖೆ ಹಾಗೂಪೊಲೀಸರು ಸನ್ನದ್ಧರಾಗಿದ್ದು, ಇವರ ಜೊತೆಗೆಮಕ್ಕಳ ಸಹಾಯವಾಣಿ ಎಂಬ ಸರ್ಕಾರೇತರಸಂಸ್ಥೆಯು ಕೈಜೋಡಿಸಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿಯಾದರೂ ಬಾಲ್ಯ ವಿವಾಹ ಪ್ರಕರಣಗಳು ಜರುಗುತ್ತಿದ್ದರೆ ಮೈಸೂರಿನ ಮಕ್ಕಳ ಸಹಾಯವಾಣಿ (ಎನ್‌ಜಿಒ) ಸಂಸ್ಥೆ 1098 ಸಂಖ್ಯೆಗೆ ಕರೆ ಮಾಡಿ ತಿಳಿಸಿ ಎಂಬುದು ಉದಯವಾಣಿ ಪತ್ರಿಕೆಯಕಳಕಳಿ. ಬಾಲ ಮಂದಿರದಲ್ಲಿ ರಕ್ಷಣೆ: ಲಾಕ್‌ಡೌನ್‌ ಸಂದರ್ಭವನ್ನೆ ಅವಕಾಶವನ್ನಾಗಿ ಮಾಡಿಕೊಂಡ ಮಕ್ಕಳ ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ.

ಈ ಸಂಬಂಧ ದೂರು ಬಂದಾಕ್ಷಣ ಸ್ಥಳಕ್ಕೆ ತೆರಳಿ ಪೋಷಕರ ಮನವೊಲಿಸಿ ಮದುವೆ ನಿಲ್ಲಿಸಿದ್ದೇವೆ. ಅಲ್ಲದೇ ಬಾಲ್ಯ ವಿವಾಹ ನಡೆಸಿರುವ ಎರಡೂ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ರಕ್ಷಣೆ ಮಾಡಲಾದ ಹುಡುಗಿರನ್ನು ಬಾಲಕಿಯರ ಬಾಲ ಮಂದಿರದಲ್ಲಿ ಇಡಲಾಗಿದೆ. ಬಾಲ್ಯವಿವಾಹ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಉಪನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿಕೆ. ಪದ್ಮಾ ತಿಳಿಸಿದ್ದಾರೆ.

ಯಾವ ತಿಂಗಳು ಎಷ್ಟು ಪ್ರಕರಣ? : ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾದ ನಂತರ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಿರುವುದು ಬೆಳಕಿಗೆ ಬಂದಿದ್ದು, ಏಪ್ರಿಲ್‌ನಲ್ಲಿ21, ಮೇ-43, ಜೂನ್‌-58,ಜುಲೈ- 6 ಹಾಗೂ ಆಗಸ್ಟ್‌ನಲ್ಲಿ21 ಪ್ರಕರಣಗಳು ಸೇರಿದಂತೆ ಒಟ್ಟು149 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ131 ಮದುವೆಗಳನ್ನು ತಡೆಯಲಾಗಿದ್ದು,18 ವಿವಾಹಗಳು ನಡೆದಿವೆ. ಈ 18 ಮದುವೆಗಳಿಗೆ ಸಂಬಂಧಿಸಿದಂತೆ ವಧು-ವರಕುಟುಂಬಗಳ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲಾಗಿದೆ.

ಮಕ್ಕಳ ಮೇಲೆ ಪೋಷಕರಲ್ಲಿ ನಂಬಿಕೆ ಇಲ್ಲ  :  ಲಾಕ್‌ಡೌನ್‌ ಸಮಯದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆದಿದೆ. ಆದರೆ,149 ಪ್ರಕರಣಗಳಷ್ಟೇ ಬೆಳಕಿಗೆ ಬಂದಿದೆ. ಜನರು ಬಡತನ, ತಿಳಿವಳಿಕೆ ಇಲ್ಲ ಎಂಬ ನೆಪ ಹೇಳುತ್ತಾರೆಯಷ್ಟೇ. ಮಕ್ಕಳ ಮೇಲೆ ಪೋಷಕರಲ್ಲಿ ನಂಬಿಕೆ ಇಲ್ಲವಾದ್ದರಿಂದ ಈ ರೀತಿಯಾಗುತ್ತಿದೆ. ಬೇರೊಬ್ಬ ಯುವಕನನ್ನು ಮಕ್ಕಳು ಪ್ರೀತಿ ಮಾಡುವ ವಿಚಾರ ತಿಳಿಯುತ್ತಿದ್ದಂತೆ ಯಾರಿಗೂ ತಿಳಿಯದಂತೆ ರಾತ್ರೋ ರಾತ್ರಿ ವಿವಾಹ ಮಾಡಿಬಿಡುವಕೆಲಸ ಆಗುತ್ತಿದೆ ಎಂದು ಮಕ್ಕಳ ಸಹಾಯ ವಾಣಿ ಸಂಯೋಜಕ ಎಸ್‌. ಶಶಿಕುಮಾರ್‌ ತಿಳಿಸಿದ್ದಾರೆ.

ಮಧ್ಯರಾತ್ರಿಯೇ ವಿವಾಹ :  ಮೈಸೂರು ಜಿಲ್ಲೆಯಲ್ಲಿಕಳೆದ ಆರು ತಿಂಗಳಿನಲ್ಲಿ ನಡೆದ 18 ಬಾಲ್ಯ ವಿವಾಹಗಳು ಮಧ್ಯರಾತ್ರಿ ಅಥವಾ ಮುಂಜಾನೆಯೇ ನಡೆದಿರುವುದು ವಿಶೇಷ. ಮಕ್ಕಳಿಗೆ ಮದುವೆ ಮಾಡುತ್ತಿರುವ ಬಗ್ಗೆ ಇತರರಿಗೆ ತಿಳಿಯದಂತೆ ಹಾಗೂ ಅಧಿಕಾರಿಗಳು ಬಂದು ವಿವಾಹವನ್ನು ತಡೆಯೊಡ್ಡಬಾರದೆಂಬ ಕಾರಣಕ್ಕೆ ಪೋಷಕರು ಮಧ್ಯರಾತ್ರಿ ಅಥವಾ ಮುಂಜಾನೆಯನ್ನೇ ಆಯ್ಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

 

ಸತೀಶ್‌ ದೇಪುರ

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಡಾ ನಿವೇಶನ 50:50 ಹಂಚಿಕೆ ರದ್ದು ತೀರ್ಮಾನ

MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್‌

Loka-SP-Udesh–CM

MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್‌

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.