KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!


Team Udayavani, Dec 16, 2024, 6:38 PM IST

11

ಕೆ.ಆರ್‌.ನಗರ: ಆಧುನಿಕ ಮಾದರಿಯ ಸುಸಜ್ಜಿತ ವಾದ ಬಸ್‌ ನಿಲ್ದಾಣ ನಿರ್ಮಿಸಿದ್ದರೂ ಸೂಕ್ತ ನಿರ್ವಹಣೆಯ ಕೊರತೆಯಿಂದ ಗಬ್ಬು ನಾರುತ್ತಿರುವ ಶೌಚಾಲಯ, ಸ್ವತ್ಛತೆ ಮತ್ತು ನೈರ್ಮಲ್ಯತೆಯ ಕೊರತೆ, ಕುಡಿವ ನೀರಿಲ್ಲದೆ ಪ್ರಯಾಣಿಕರ ಪರದಾಟ, ವಾರಕ್ಕೊಮ್ಮೆ ಮಾತ್ರ ನಿಲ್ದಾಣಕ್ಕೆ ಸಂಚಾರ ನಿಯಂತ್ರಕರ ಭೇಟಿ, ಪ್ರಯಾಣಿಕರ ಗೋಳು ಕೇಳುವವರೇ ಇಲ್ಲ, ವಿರಾಮ ಕೊಠಡಿ ಮತ್ತು ಉಪಾಹಾರ ಗೃಹವಿಲ್ಲ.

ಇವು ಸಾಲಿಗ್ರಾಮ ತಾಲೂಕಿನ ಇತಿ ಹಾಸ ಪ್ರಸಿದ್ಧ ಚುಂಚನಕಟ್ಟೆಯ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದ ಕಥೆ ಮತ್ತು ವ್ಯಥೆ.  ಅಲ್ಲದೆ ನಿಲ್ದಾಣದಲ್ಲಿ ಪ್ರಯಾಣಿಕ ರಿಗೆ ಸಮರ್ಪಕವಾದ ಅಗತ್ಯ ಮೂಲ ಭೂತ ಸವಲತ್ತುಗಳನ್ನು ಒದಗಿಸುವಲ್ಲಿ ಇಲ್ಲಿನ ಸಂಬಂಧಪಟ್ಟ ಅಧಿಕಾರಿ ವರ್ಗ ಸಂಪೂರ್ಣವಾಗಿ ವಿಫ‌ಲವಾಗಿದೆ. ಸಾರಿಗೆ ಇಲಾಖೆ ಸಿಬ್ಬಂದಿ ವರ್ಗದವರು ಮಾಡಿದ ತಪ್ಪಿನಿಂದ ಪ್ರಯಾಣಿಕರು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದೆ.

ನಿತ್ಯ ಪ್ರಯಾಣಿಕರಿಗೆ ನರಕಯಾತನೆ: ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಸಮರ್ಪಕವಾದ ಶೌಚಾಲಯದ ವ್ಯವಸ್ಥೆಯಿಲ್ಲ. ನೀರು ಸಮರ್ಪಕವಾಗಿ ಸರಬರಾಜಾಗದೆ ಇರುವ ಶೌಚಾಲಯ ಸ್ವತ್ಛತೆಯಿಲ್ಲದೆ ಗಬ್ಬು ನಾರುತ್ತಿದೆ. ಮೂಗು ಮುಚ್ಚಿಕೊಂಡು ನಿತ್ಯಕರ್ಮ ಮು ಗಿಸಿ ಹೊರಬರಬೇಕಾಗಿದೆ. ಇದೊಂದು ರೀತಿಯ ನರಕಯಾತನೆಯೇ ಸರಿ.

ಅಲ್ಲದೆ ಮಹಿಳೆಯರ ಶೌಚಾಲ ಯದ ಗೋಡೆಗಳ ಮೇಲೆ ಆಳುದ್ದ ಗಿಡಗಂಟಿಗಳು ಮತ್ತು ಬಳ್ಳಿಗಳು ಬೆಳೆದು ನಿಂತಿದ್ದು, ಅದನ್ನು ಸ್ವತ್ಛಗೊಳಿಸುವ ಗೋಜಿಗೆ ಯಾರೊಬ್ಬರೂ ಹೋಗಿಲ್ಲ. ಜತೆಗೆ ಮಹಿಳೆಯರ ಶೌಚಾಲಯಕ್ಕೆ ಬೀಗ ಜಡಿ ಯಲಾಗಿದೆ. ಇದರಿಂದ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಶೌಚಾಲಯವಿಲ್ಲದೆ ಪರದಾಡುವಂತಾಗಿದೆ.

ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದೇ ಇಲ್ಲ: ನಿಲ್ದಾಣದಲ್ಲಿ ಸ್ವತ್ಛತೆ ಮತ್ತು ನೈರ್ಮಲ್ಯತೆ ಮರೀಚಿಕೆ ಯಾಗಿದೆ. ನಿಲ್ದಾಣದ ಸುತ್ತಲಿರುವ ತಡೆಗೋಡೆಯ ಮೇಲೆ ಗಿಡಗಂಟೆ ಗಳು ಮತ್ತು ಬಳ್ಳಿ ಬೆಳೆದು ನಿಂತಿರುವುದರ ಜತೆಗೆ ನಿಲ್ದಾಣದೊಳಗೆ ಸ್ವತ್ಛತೆ ಯಿರುವುದಿಲ್ಲ. ಚರಂಡಿ ಮತ್ತಿತರ ಅಶುಚಿತ್ವದ ಜಾಗಗಳಲ್ಲಿ ನೀರು ನಿಂತಿದ್ದು, ಸೊಳ್ಳೆಗಳ ವಾಸಸ್ಥಾನ ವಾಗಿದ್ದು, ನಿಲ್ದಾಣದಲ್ಲಿ ನೆಮ್ಮದಿಯಿಂದ ಕುಳಿತುಕೊಳ್ಳಲು ಬಿಡದೆ ಕಚ್ಚುತ್ತವೆ. ಅದನ್ನು ತೆರವುಗೊಳಿಸಿ ಸ್ವತ್ಛಗೊಳಿಸುವಲ್ಲಿ ವಿಫ‌ಲವಾಗಿರುವ ಅಲ್ಲಿನ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ವಿಷ ಜಂತುಗಳ ವಾಸಸ್ಥಾನವಾಗಿ ಪರಿವರ್ತನೆಗೊಂಡಿದೆ.

ಶುದ್ಧ ಕುಡಿಯುವ ನೀರಿಗೆ ಪರದಾಟ: ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಲಭ್ಯವಿರುವುದಿಲ್ಲ. ಬಸ್‌ ಏರು ವುದಕ್ಕಿಂತ ಮೊದಲು ನಿಲ್ದಾಣದಲ್ಲಿ ಬಾಯಾರಿಕೆಯಾದರೆ ಸಂಪಿನಿಂದ ಬರುವ ನೀರನ್ನೇ ಕುಡಿದು ದಾವು ಇಂಗಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ದುಡ್ಡು ಕೊಟ್ಟು ನೀರು ಖರೀದಿಸಿ ಕುಡಿ ಯಬೇಕಾಗಿದೆ. ಅಲ್ಲದೆ ನಿಲ್ದಾಣ ನಿರ್ಮಾಣ ವಾದಂದಿನಿಂದ ಇಲ್ಲಿಯವರೆಗೆ ಸಂಪನ್ನು ಸ್ವತ್ಛಗೊಳಿ ಸಿಯೇ ಇಲ್ಲ. ಪ್ರಯಾಣಿಕರಿಗೆ ಅಧಿಕಾರಿಗಳು ಅದೇ ನೀರನ್ನು ಕುಡಿಯಲು ಸರಬರಾಜು ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.

ಕಚೇರಿಯ ಬಾಗಿಲಿಗೆ ಬೀಗ: ನಿಲ್ದಾಣ ಸಂಚಾರ ನಿಯಂತ್ರಕರನ್ನು ಸಾರಿಗೆ ಇಲಾಖೆ ನೇಮಕ ಮಾಡಿದೆ. ಅವರು ಪ್ರತಿದಿನ ನಿಲ್ದಾಣದಲ್ಲಿ ಕರ್ತವ್ಯದ ಸಮಯ ದಲ್ಲಿ ಹಾಜರಿದ್ದು, ಪ್ರಯಾಣಿಕರ ಅಹವಾಲುಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿ ಯಬೇಕು. ಆದರೆ ಯಾವಾಗಲೂ ಸಂಚಾರ ನಿಯಂ ತ್ರಕರ ಕಚೇರಿಯ ಬಾಗಿಲಿಗೆ ಬೀಗ ಜಡಿದಿರುತ್ತದೆ. ಪ್ರಯಾಣಿಕರನ್ನು ಪ್ರಶ್ನಿಸಿದರೆ ಕೇವಲ ವಾರಕ್ಕೊಮ್ಮೆ ಮಾತ್ರ ಕಚೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಉತ್ತರಿಸುತ್ತಾರೆ.

ಸಮರ್ಪಕವಾದ ವ್ಯವಸ್ಥೆ ಇಲ್ಲ: ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಮರ್ಪಕವಾದ ವ್ಯವಸ್ಥೆ ಇರುವು ದಿಲ್ಲ. ನಿಲ್ದಾಣಕ್ಕೆ ಆಗಮಿಸುವ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕುಳಿತಿರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ರಾತ್ರಿಯ ವೇಳೆ ಸಮರ್ಪಕ ವಾದ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಪ್ರಯಾಣಿಕರು ಮಬ್ಬು ಬೆಳಕಿನ ಭಯದ ವಾತಾವರಣದಲ್ಲಿ ಬಸ್ಸುಗಳನ್ನು ಕಾದು ಏರಬೇಕಾಗಿದೆ.

ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್‌ ಇಲ್ಲ :

ನಿಲ್ದಾಣದಲ್ಲಿ ಉಪಾಹಾರ ಗೃಹವಿದ್ದು, ಅಲ್ಲಿ ಯಾವುದೇ ಹೋಟೆಲು ಅಥವಾ ಕ್ಯಾಂಟೀನು ನಡೆಯುತ್ತಿಲ್ಲ. ಇದರಿಂದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಉಪಾಹಾರ ಅಥವಾ ಊಟಕ್ಕೆ ಪರದಾಡಬೇಕಾಗಿದೆ. ವಿಶೇಷವಾಗಿ ವಯೋವೃದ್ಧರು ಮತ್ತು ಮಕ್ಕಳು ಊಟ, ಉಪಾಹಾರ ಬಯಸಿದರೆ ನಿಲ್ದಾಣದಿಂದ ದೂರದಲ್ಲಿರುವ ಹೋಟೆಲುಗಳಿಗೆ ತೆರಳಿ ಖರೀದಿಸಿ ಬಳಸಬೇಕಿದೆ. ಕರ್ತವ್ಯದ ವೇಳೆ ಲಭ್ಯವಿರುವ ಸಂಚಾರ ನಿಯಂತ್ರಕರು ಪ್ರಯಾಣಿಕರ ಅಹವಾಲುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳುತ್ತಾರೆಂಬುದು ಪ್ರಯಾಣಿಕರ ದೂರು. ಒಟ್ಟಾರೆಯಾಗಿ ರಾಜ್ಯದಲ್ಲಿಯೇ ಜಾನುವಾರು ಜಾತ್ರೆಗೆ ಅತ್ಯಂತ ಪ್ರಸಿದ್ಧಿ ಪಡೆದಿರುವ ಚುಂಚನಕಟ್ಟೆಯ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣ ಮಾತ್ರ ಅವ್ಯವಸ್ಥೆಗಳ ಆಗರವಾಗಿದೆ.

ನಾನು ಕಳೆದ ಮೂರು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದು, ಚುಂಚನಕಟ್ಟೆಯ ಬಸ್‌ ನಿಲ್ದಾಣದ ಸಮಸ್ಯೆಗಳ ಅರಿವು ನನಗೆ ಇಲ್ಲ. ಸೋಮವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುವುದರ ಜತೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದಿರುವ ಸಂಚಾರ ನಿಯಂತ್ರಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.-ವೀರಭದ್ರಸ್ವಾಮಿ, ಪ್ರಭಾರ ಘಟಕ ವ್ಯವಸ್ಥಾಪಕರು, ಕೆ.ಆರ್‌.ನಗರ ಘಟಕ

ನಿಲ್ದಾಣದಲ್ಲಿ ಸ್ವತ್ಛತೆಯಿಲ್ಲ. ಶುದ್ಧ ಕುಡಿಯುವ ನೀರಂತೂ ಇಲ್ಲವೇ ಇಲ್ಲ. ರಾತ್ರಿಯ ವೇಳೆ ಪ್ರಯಾಣಿಕರಿಗೆ ಸೂಕ್ತ ರಕ್ಷಣೆಯಿಲ್ಲ. ಸಂಚಾರ ನಿಯಂತ್ರಕರು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. -ತಮ್ಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ, ಲಕ್ಷ್ಮೀಪುರ, ಸಾಲಿಗ್ರಾಮ ತಾಲೂಕು

ಸಂಚಾರ ನಿಯಂತ್ರಕರು ನಿರಂತರವಾಗಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಮೇಲಧಿಕಾರಿಗಳು ಗೈರಾಗುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು. ಸ್ವತ್ಛತೆಯ ಕೊರತೆಯಿಂದ ನಿಲ್ದಾಣ ಸೊಳ್ಳೆಗಳ ವಾಸಸ್ಥಾನವಾಗಿದೆ. ಪ್ರಯಾಣಿಕರಿಗೆ ವಿರಾಮದ ಕೊಠಡಿ ಲಭ್ಯವಿಲ್ಲ. ಉಪಾಹಾರ ಗೃಹವೂ ಇಲ್ಲ.-ಸಿ.ಎಚ್‌.ಸೋಮಶೇಖರ್‌, ಪ್ರಯಾಣಿಕ, ಚಿಕ್ಕಕೊಪ್ಪಲು, ಸಾಲಿಗ್ರಾಮ ತಾಲೂಕು

– ಗೇರದಡನಾಗಣ್ಣ

ಟಾಪ್ ನ್ಯೂಸ್

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ

Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

1-sonia

Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hanuma-mala

SriRangapattana: ಹನುಮ ಮಾಲಾಧಾರಿಗಳಿಂದ ಮಸೀದಿ ಪ್ರವೇಶ ಯತ್ನ

HD-Kote

H.D.Kote: ಹೆಬ್ಬುಲಿ ದಾಳಿಗೆ ಒಂದೂವರೆ ವರ್ಷದ ಮರಿ ಹುಲಿ ಸಾವು!

court

Mysuru: ಕ್ಷುಲ್ಲಕ ಕಾರಣಕ್ಕೆ ಜೋಡಿ ಕೊ*ಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

Hun-Deid

Hunasur: ನಗರಸಭಾ ಸದಸ್ಯ ಪುತ್ರಿ, ಪದವಿ ವಿದ್ಯಾರ್ಥಿನಿ ಅನಾರೋಗ್ಯದಿಂದ ಮೃತ್ಯು

2-hunsur

Hunsur: ಟ್ರ್ಯಾಕ್ಟರ್‌ ಚಾಲಕರ ಪೈಪೋಟಿಗೆ ಬೈಕ್ ಸವಾರ ಬಲಿ; 15 ದಿನಗಳ ಅಂತರದಲ್ಲಿ 2ನೇ ಅಪಘಾತ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.