ಪೌರ ಕಾರ್ಮಿಕರಿಗೆ 7 ತಿಂಗಳಿಂದ ಕೂಲಿ ಇಲ್ಲ
Team Udayavani, May 28, 2018, 4:17 PM IST
ನಂಜನಗೂಡು: ನಗರಸಭೆಯಲ್ಲಿ ಪ್ರತಿನಿತ್ಯ ದುಡಿಯುತ್ತಿರುವ ಸುಮಾರು 52 ಸಿಬ್ಬಂದಿಗಳಿಗೆ 7 ತಿಂಗಳಿಂದ ಸಂಬಳವೇ ನೀಡಿಲ್ಲ. ಹೀಗಾಗಿ ಆ ಕಾರ್ಮಿಕರು ತಾವು ಮಾಡಿದ ಕೆಲಸಕ್ಕೆ ಕೂಲಿ ನೀಡಿ ಎಂದು ನಂಜನಗೂಡು ನಗರಸಭೆಯ ಆವರಣದಲ್ಲಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಶುಕ್ರವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ ಪೌರ ಕಾರ್ಮಿಕರು ಭಾನುವಾರ ಬೆಳಗ್ಗೆ ಬಂದು ನೋಡಿದಾಗ ಶಾಮಿಯಾನ ನೆಲಕಚ್ಚಿದ್ದು ಕಂಡುಬಂದಿತು. ಹಾಗಾಗಿ ಶಾಮಿಯಾನವಿಲ್ಲದೇ ಪ್ರತಿಭಟನೆ ಮುಂದುವರಿಸಿದ್ದು, ನಗರಸಭಾದಾ ದ್ಯಂತ ಕಸ ಎತ್ತುವವರಿಲ್ಲದೆ ನಂಜನಗೂಡು ನಗರಸಭೆ ಕಸದ ತೊಟ್ಟಿಯಾಗಲಾರಂಭಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾ ಕಾರರು, ಪೌರಕಾರ್ಮಿಕರ ನ್ಯಾಯವಾದ ಬೇಡಿಕೆ ಈಡೇರಿಸುವ ಬದಲು ಅಧಿಕಾರಿಗಳು ಕೆಲವು ಕಾರ್ಮಿಕರನ್ನು ಹೆದರಿಸಿ, ಕೆಲಸದಿಂದ ವಜಾ ಮಾಡುವುದಾಗಿ,ಬೆದರಿಸುತ್ತ ಪ್ರತಿಭಟನೆ ಯನ್ನು ಹತ್ತಿಕ್ಕುವ ಕುತಂತ್ರ ಆರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಸು ಹುಟ್ಟುವ ಮೊದಲೇ ಕುಲಾವಿ: ಸ್ವತ್ಛ ಭಾರತದ ಕಲ್ಪನೆಯಡಿ ನಗರಸಭೆ ಚಾಲಕರನ್ನು ನೇಮಿಸಿಕೊಳ್ಳದೆಯೇ ವಾಹನಗಳನ್ನು ಖರೀದಿಸಿ ನಂತರ ಆ ವಾಹನಗಳಲ್ಲಿ ಕಸ ತುಂಬಿ ಸಾಗಾಣಿಕೆ ಮಾಡಲು ಹೊರಗುತ್ತಿಗೆ ಕಾರ್ಮಿಕರ ಮೊರೆ ಹೋಗಿ ಈಗ ಅವರಿಗೂ ಸಂಬಳ ನೀಡಲಾಗದೆ ಪರದಾಟ ನಡೆಸಿದೆ. ಕಸ ತೆಗೆಯಲು 38 ಸಿಬ್ಬಂದಿ ಹಾಗೂ ಅದರ ಸಾಕಾಣಿಕೆಗಾಗಿ 14 ಮಂದಿ ಒಟ್ಟೂ 52 ಕಾರ್ಮಿಕರಿಂದ ದುಡಿಸಿಕೊಂಡ ನಗರಸಭೆ ಈಗ ಅವರಿಗೆ ಸಂಬಳ ಎಂದಾಗ ರಾಜ್ಯ ಸರ್ಕಾರದತ್ತ ಮುಖ ಮಾಡಿ ಮೌನವಾಗಿದೆ.
ಕಳೆದ ನವೆಂಬರ್ ತಿಂಗಳನಲ್ಲೇ ಹೊರಗುತ್ತಿಗೆ ಯನ್ನು ರಾಜ್ಯಾದ್ಯಂತ ರದ್ದುಗೊಳಿಸಿದ ಸರ್ಕಾರ ಅದಕ್ಕೆ ಪರ್ಯಾಯ ಮಾರ್ಗವನ್ನೂ ರೂಪಿಸದೆ ಇರುವದರಿಂದಾಗಿ ರಾಜ್ಯಾದ್ಯಂತ ಬಡ ಕಾರ್ಮಿಕರು ದುಡಿದ ಕೆಲಸಕ್ಕೆ ಕೂಲಿ ನೀಡಿ ಎಂದು ಗೋಗರೆಯುವಂತಾಗಿದೆ.
ನಮ್ಮ ಶ್ರಮಕ್ಕೆ ಕೂಲಿ ನೀಡಿ ಎಂದು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಹೊರಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಚಲುವರಾಜು, ಹೇಮಂತ್, ಕಮಲೇಶ್ ವಹಿಸಿದ್ದಾರೆ. ನಾಗಪ್ಪ, ರಂಗನಾಥ್, ರವಿ, ಮಣಿ, ಆರ್ಮುಗಮ್ ಸೇರಿದಂತೆ 56ಕ್ಕೂ ಹೆಚ್ಚು ಕಾರ್ಮಿಕರು ಸಾಥ್ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.