ಮೋದಿ ಹುಟ್ಟುಹಬ್ಬ: ಬಸವ ದೇಗುಲದಲ್ಲಿ ಸ್ವಚ್ಛತಾ ಕಾರ್ಯ
Team Udayavani, Sep 18, 2020, 3:40 PM IST
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಪ್ರಾಚೀನ ಕಾಲದ ಬಸವನ ದೇವಾಲಯ ಮರು ನಿರ್ಮಾಣ ಮತ್ತು ಸ್ವತ್ಛತಾ ಕಾರ್ಯ ನಡೆಸಲಾಯಿತು.
ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಮೈಸೂರು- ಬೆಂಗಳೂರು ರಸ್ತೆಯ ಎಡಭಾಗದಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಪಕ್ಕ ಇರುವ ಕಾಡು ಬಸವ ದೇವಸ್ಥಾನದ ಸುತ್ತ ಮುತ್ತ ಬೆಳೆದಿದ್ದ ಗಿಡಗಳನ್ನು ಕಿತ್ತು ಸ್ವತ್ಛಮಾಡಿ ಸುತ್ತಲೂ ಸುಣ್ಣವನ್ನು ಬಳಿದು ಶುಚಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಟಿ. ಎಸ್. ಶ್ರೀವತ್ಸ ಮಾತನಾಡಿ, ಸೇವಾಸಪ್ತಾಹದಡಿ ವಿವಿಧ ಸೇವಾ ಕಾರ್ಯ ಕ್ರಮಗಳನ್ನು ಪಕ್ಷದ ಕಾರ್ಯಕರ್ತರು ನಡೆಸುವ ಮೂಲಕ ಮೋದಿ ಅವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ರಾಜ್ಯದ ಪ್ರತಿ ಮನೆ ಮನೆಗೂ ಮೊದಿ ಅವರ ಯೋಜ ನೆಗಳನ್ನು ತಲುಪಿಸಬೇಕು. ತಿಂಗಳಿಗೆ ಒಂದು ಗ್ರಾಮದಂತೆ ಅಲ್ಲಿಯ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡ ಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಪ್ರಧಾನ ಕಾರ್ಯದಶಿಗಳಾದ ವಾಣೀಶ್, ಗಿರಿಧರ್, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಥಾಮಸ್, ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್, ಮಣಿರತ್ನಂ, ಉಪಾಧ್ಯಕ್ಷ ಭರತ್, ಕಾರ್ಯದರ್ಶಿ ಶಿವರಾಜ್ ಹರೀಶ್,ಜಗದೀಶ್, ಸ್ವಾಮಿಗೌಡ, ಆನಂದ್, ನಾಗರಾಜು, ರಾಜೀವ್ ಸ್ನೇಹ ಬಳಗದ ಸಂಚಾಲಕ ಕುಮಾರ್ ಇತರರಿದ್ದರು.
ಮೋದಿ 70ನೇ ಹುಟ್ಟು ಹಬ್ಬಕ್ಕೆ 70 ಸಸಿ ನೆಟ್ಟರು : ಹುಣಸೂರು: ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕು ಬಿಜೆಪಿ ಘಟಕದ ವತಿಯಿಂದ ದೇವರಾಜು ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ 70 ಸಸಿಗಳನ್ನು ನೆಡಲಾಯಿತು. ನಗರದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕಾರ್ಯಕರ್ತರು ನಂತರ ಕಾಲೇಜಿನಲ್ಲಿ 70 ಸಸಿಗಳನ್ನು ನೆಟ್ಟರು. ಬಳಿಕ ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಒಳ ರೋಗಿಗಳಿಗೆ ಹಣ್ಣು ವಿತರಿಸಿದರು.
ಈ ವೇಳೆ ನಗರ ಮಂಡಲ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಉಪಾಧ್ಯಕ್ಷ ಎಸ್.ಸಿ. ದಿನೇಶ್, ಮೋರ್ಚಾ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ರವಿಶಂಕರ್, ಹರವೆ ರವಿಕುಮಾರ್, ಕೃಷ್ಣ,ರಮೇಶ್, ಮುದ್ದುರಾಮು, ತಾಲೂಕು ರೈತಮೋರ್ಚಾ ಅಧ್ಯಕ್ಷ ಸೂರೇಗೌಡ, ನಾಗೇಶ್, ಅರುಣ್‌ಚವ್ಹಾಣ್, ಮಹಿಳಾ ಮೋರ್ಚಾದ ಸವಿತಾಚವ್ಹಾಣ್, ಯಶೋಧಮ್ಮ, ಮಧು, ಕೃಷ್ಣೋಜಿ ರಾವ್, ಬೋಜಣ್ಣ, ವಾಸು ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.