ಮೃಗಾಲಯಗಳ ನಿರ್ವಹಣೆ ಹಣ ನೀಡಲು ಸಿಎಂ ಸಮ್ಮತಿ


Team Udayavani, Apr 29, 2021, 3:21 PM IST

SCCM agreed to pay for the maintenance of the zoo

ಮೈಸೂರು: ಮೃಗಾಲಯಗಳ ನಿರ್ವಹಣೆ ಹಾಗೂ ಖರ್ಚು-ವೆಚ್ಚಗಳಿಗೆ ಹಣ ಮಂಜೂರು ಮಾಡಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ತಿಳಿಸಿದರು.

ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸಭಾಂಗಣದಲ್ಲಿ ಬುಧವಾರ ಆನ್‌ಲೈನ್‌ ವೇದಿಕೆಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಸಭೆಯಲ್ಲಿ ಮಾತನಾಡಿದ ಅವರು, ಎಲ್ಲಮೃಗಾಲಯಗಳ ನಿರ್ವಹಣೆಗೆ 17 ಕೋಟಿ ರೂ.ಹಣ ಮಂಜೂರು ಮಾಡಲು ಸಿಎಂ ಸಮ್ಮತಿಸಿದ್ದು,ಶೀಘ್ರವೇ ಹಣ ಮಂಜೂರಾಗಲಿದೆ ಎಂದರು.

ಬಳಿಕ ನಡೆದ ಆಡಳಿತ ಮಂಡಳಿ ಸಭೆಯಲ್ಲಿ2021 -22ನೇ ಸಾಲಿನ ಮೃಗಾಲಯ ಪ್ರಾಧಿಕಾರದ ಆದಾಯ ಮತ್ತು ವೆಚ್ಚಗಳ ಅಂದಾಜು ಬಜೆಟ್‌ ಅನುಮೋದನೆ ನೀಡುವುದು, ಗದಗ ಮತ್ತು ಹಂಪಿ ಮೃಗಾಲಯಗಳ ಪ್ರಾಣಿ-ಪಕ್ಷಿಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಅಗತ್ಯವಾದ ವೈದ್ಯಕೀಯ ಉಪಕರಣ ಖರೀದಿಸಿ, ಮೃಗಾಲಯಗಳಿಗೆ ನೀಡಿರುವ ಕಾರ್ಯಕ್ಕೆ ಘಟನೋತ್ತರ ಮಂಜೂರಾತಿ ನೀಡುವ ಸಂಬಂಧಸಭೆಯಲ್ಲಿ ಚರ್ಚಿಸಲಾಯಿತು.

ಕೋವಿಡ್‌ ಹಿನ್ನೆಲೆ ಪ್ರವಾಸಿಗರ ಹಿತದೃಷ್ಟಿಯಿಂದ ಇಳಿಸಿದ್ದ ಬ್ಯಾಟರಿ ಚಾಲಿತ ವಾಹನ ದರಗಳನ್ನು ಪರಿಷ್ಕರಿಸಲು ಅನುಮೋದನೆ ನೀಡುವುದು, ಮೈಸೂರು ಮೃಗಾಲಯದ ನೇರ ಗುತ್ತಿಗೆ ನೌಕರರಿಗೆ ಮಾಡಿಸಿರುವ ಗ್ರೂಪ್‌ ಗ್ರಾಜುಟಿ ಸ್ಕೀಮ್‌ ನವೀಕರಣಮಾಡುವುದು, ಕಾರಂಜಿ ಕೆರೆ ದೋಣಿ ವಿಹಾರಗುತ್ತಿಗೆ ಅವಧಿ ವಿಸ್ತರಣೆ, ಮೈಸೂರು ಮೃಗಾಲಯದಪ್ರವೇಶ ಟಿಕೆಟ್‌ ಮತ್ತು ವಿದ್ಯಾರ್ಥಿಗಳ ರಿಯಾಯಿತಿ ಟಿಕೆಟ್‌ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಪ್ರವೇಶ ಟಿಕೆಟ್‌ ದರಗಳನ್ನು ಪರಿಷ್ಕರಿಸಲು ಅನುಮೋದನೆ ನೀಡುವ ಸಂಬಂಧ ಪ್ರಾಧಿಕಾರದ ಸದಸ್ಯರು ಹಾಗೂ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿಚರ್ಚೆ ನಡೆಸಿದರು.

ಶೀಘ್ರವೇ ಒರಾಂಗುಟನ್‌: ಪ್ರಾಣಿ ವಿನಿಮಯದಡಿ 02 ಒರಾಂಗುಟನ್‌ಗಳನ್ನು ಸಿಂಗಾಪುರ್‌ ಮೃಗಾಲಯದಿಂದ ಮೈಸೂರು ಮೃಗಾಲಯಕ್ಕೆತರಲು ಸಭೆಯಲ್ಲಿ ಚರ್ಚಿಸಿ ಒಪ್ಪಿಗೆಪಡೆಯಲಾಯಿತು. ಜೊತೆಗೆ ಅವುಗಳ ಸಾಕಾಣಿಕೆ ಬಗ್ಗೆ ತರಬೇತಿ ಪಡೆಯಲು ಪಶುವೈದ್ಯಾಧಿಕಾರಿ ಡಾ.ಕೆ.ವಿ. ಮದನ್‌ ಸಿಂಗಾಪುರ ಮೃಗಾಲಯಕ್ಕೆ ಭೇಟಿ ನೀಡಲು ಅನುಮತಿ ನೀಡಲಾಯಿತು.ಕೇಂದ್ರ ಮೃಗಾಲಯ ಪ್ರಾಧಿಕಾರದ 10 ವರ್ಷವಿಶನ್‌ ಪ್ಲಾನ್‌ ಅಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಮೃಗಾಲಯವನ್ನುಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೈಸೂರು ಮೃಗಾಲಯ ಹಾಗೂ ಕೆನಡಾದ ಟೊರೆಂಟೊ ಮೃಗಾಲಯ ನಡುವಿನ ಸಹಭಾಗಿತ್ವಕ್ಕೆ ಅನುಮೋದನೆ ನೀಡುವ ಸಂಬಂಧ ಚರ್ಚೆ ನಡೆಸಲಾಯಿತು.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ವಿಶೇಷ ಸಫಾರಿಗಾಗಿ ವಾಹನಗಳನ್ನು ಖರೀದಿಸುವುದು, ಉದ್ಯಾನವನದ ಪ್ರಾಣಿ-ಪಕ್ಷಿಗಳಿಗೆ ಹಾಗೂ ಪ್ರವಾಸಿಗರಿಗೆಅನುಕೂಲವಾಗುವಂತೆ ಕಾವೇರಿ ನೀರನ್ನು ಒದಗಿಸುವ ಸಲುವಾಗಿ ಪ್ರತ್ಯೇಕ ಕೊಳವೆ ಅಳವಡಿಸುವ ಕಾಮಗಾರಿ ಕುರಿತು, ಗದಗಮೃಗಾಲಯದ ವಾಹನ ನಿಲ್ದಾಣ ಹಾಗೂಉಪಾಹಾರ ಗೃಹದ ಬಾಡಿಗೆ ಮೊತ್ತವನ್ನುಪಾವತಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ ಮಹೇಶ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

22-hunsur-1

Hunsur: ಕಾರು ಪಲ್ಟಿಯಾಗಿ ಎಳನೀರು ವ್ಯಾಪಾರಿ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.