ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಭರ್ಜರಿ ರೋಡ್‌ಶೋ
Team Udayavani, Apr 3, 2018, 1:19 PM IST
ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕನೇ ದಿನವೂ ಮತಬೇಟೆಗಾಗಿ ಭರ್ಜರಿ ರೋಡ್ ಶೋ ನಡೆಸಿದರು.
ಜಯಪುರ ಹೋಬಳಿಯ ಕೆಲ್ಲಹಳ್ಳಿಯಿಂದ ಮತಬೇಟೆ ಆರಂಭಿಸಿದ ಅವರು, ದಾರಿಪುರ, ಬರಡನಪುರ, ಮಾವಿನಹಳ್ಳಿ, ಜಯಪುರ, ಹಾರೋಹಳ್ಳಿ (ಜಯಪುರ), ಸೋಲಿಗರ ಕಾಲೋನಿ, ಗುಮಚನಹಳ್ಳಿ, ಎಸ್.ಕಲ್ಲಹಳ್ಳಿ, ಚುಂಚರಾಯನ ಹುಂಡಿ, ಮದ್ದೂರು, ಮದ್ದೂರು ಹುಂಡಿ, ಮಂಡನಹಳ್ಳಿ, ಗುಜ್ಜೆàಗೌಡನಪುರ, ಅರಸನಕೆರೆ, ಮಾರ್ಬಳ್ಳಿ ಹುಂಡಿ, ಮಾರ್ಬಳ್ಳಿ ಹಾಗೂ ಟಿ.ಕಾಟೂರು ಗ್ರಾಮಗಳಲ್ಲಿ ಸ್ಥಳೀಯ ಮುಖಂಡರೊಂದಿಗೆ ರೋಡ್ ಶೋ ನಡೆಸಿ ಮತಯಾಚಿಸಿದರು.
ಮುಜುಗರ: ಸೋಮವಾರ ಬೆಳಗ್ಗೆ ಮೈಸೂರಿನ ಟಿ.ಕೆ.ಲೇಔಟ್ ಬಡಾವಣೆಯ ಮನೆಯಿಂದ ಹೊರಟ ಮುಖ್ಯಮಂತ್ರಿಯವರು ನೇರವಾಗಿ ಎಚ್.ಡಿ.ಕೋಟೆ ರಸ್ತೆಯಲ್ಲಿ ಬರುವ ಕೆಲ್ಲಹಳ್ಳಿಗೆ ಭೇಟಿ ನೀಡಿ, ರೋಡ್ ಶೋ ನಡೆಸಿ ಮತಯಾಚಿಸಿದರು. ಈ ವೇಳೆ ಗ್ರಾಮದ ಕೆಲ ಯುವಕರು ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ಗೆ ಜೈಕಾರ ಕೂಗಿದ್ದರಿಂದ ಮುಜುಗರ ಅನುಭವಿಸಬೇಕಾಯಿತು.
ಅಲ್ಲಿಂದ ದಾರಿಪುರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಾ.ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮ ಜಯಂತಿ ನಿಮಿತ್ತ ಗ್ರಾಮಸ್ಥರು ಮೆರವಣಿಗೆಗೆ ಸಿದ್ಧಪಡಿಸಿದ್ದ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಂಗಳಾರತಿ ತಟ್ಟೆಗೆ 100 ರೂ. ಹಾಕಿ ಮುನ್ನಡೆದರು. ಗ್ರಾಮದ ಚಾವಡಿ ಕಟ್ಟೆಯಲ್ಲಿ ಕುಳಿತು ಕೆಲ ಕಾಲ ಸ್ಥಳೀಯರೊಂದಿಗೆ ಚರ್ಚಿಸಿ, ಮತಯಾಚನೆ ಮಾಡಿಬಂದರು.
ಅಲ್ಲಿಂದ ಬರಡನಪುರಕ್ಕೆ ಬಂದ ಮುಖ್ಯಮಂತ್ರಿಯವರು ಗ್ರಾಮದ ಕಾಂಗ್ರೆಸ್ ಮುಖಂಡ ಮಹದೇವ್ ಅವರ ಮನೆಗೆ ತೆರಳಿ ಟೀ ಕುಡಿದು, ಗ್ರಾಮದಲ್ಲಿ ಮತಯಾಚನೆ ಮಾಡಿದರು. ಈ ವೇಳೆ ಕೂಲಿ ಕೆಲಸಕ್ಕೆ ಹೋಗುವಾಗ ರಸ್ತೆ ಅಪಘಾತದಲ್ಲಿ ತನ್ನ ಎರಡೂ ಕಾಲು ಕಳೆದುಕೊಂಡಿರುವ ಗ್ರಾಮದ ನಂಜಪ್ಪ ಎಂಬುವವರು ಸಹಾಯ ಯಾಚಿಸಿದರು,
ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವೈಯಕ್ತಿಕವಾಗಿ ಸಹಾಯ ಮಾಡಲಾಗಲ್ಲ. ಅಂಗವಿಕಲ ಪ್ರಮಾಣಪತ್ರ ಮಾಡಿಸಿಕೊಂಡು ಬಂದರೆ, ಸರ್ಕಾರದ ಯೋಜನೆಗಳಲ್ಲಿ ನೆರವುಕೊಡಿಸುವುದಾಗಿ ಹೇಳಿ ಮುನ್ನಡೆದರು. ಇತ್ತ ಗ್ರಾಮದ ಕೆಲವರು ದೇವಸ್ಥಾನಕ್ಕೆ ಭೇಟಿ ನೀಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲಿಂದ ಮಾವಿನಹಳ್ಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮತಯಾಚನೆ ಮಾಡಿದ ನಂತರ ಗ್ರಾಮದ ಮುಖಂಡ ರಾಮೇಗೌಡರ ತೋಟದ ಮನೆಗೆ ತೆರಳಿ ಮಧ್ಯಾಹ್ನದ ಊಟ ಮುಗಿಸಿದರು.
ನಂತರ ಜಯಪುರಕ್ಕೆ ಆಗಮಿಸಿದ ಅವರನ್ನು ಹೂ ಮಳೆಗರೆದು ಬರಮಾಡಿಕೊಳ್ಳಲಾಯಿತು. ಎಚ್.ಡಿ.ಕೋಟೆ ರಸ್ತೆ ಜಂಕ್ಷನ್‌ನಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ, ಗ್ರಾಮಸ್ಥರನ್ನು ಉದ್ದೇಶಿಸಿ ಭಾಷಣ ಮಾಡಿ ಮತಯಾಚಿಸಿದರು. ಅಲ್ಲಿಂದ ಹೊರಟ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡರ ದಂಡು ಜಯಪುರದ ದಿ.ಪಂಡಿತರ ಮನೆಗೆ ಭೇಟಿ ನೀಡಿ, ಫೂ›ಟ್ ಸಲಾಡ್ ಸೇವಿಸಿ ಬಂದರು.
ನಂತರ ಹಾರೋಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿಯವರು ಗ್ರಾಮದ ಆರಂಭದಲ್ಲೇ ಇರುವ ಲಿಂಗಾಯತ ಸಮಾಜದ ಮುಖಂಡ ನಂಜಪ್ಪ ಅವರ ಮನೆಗೆ ತೆರಳಿ ತಂಪು ಪಾನೀಯ ಸೇವಿಸಿದರು. ಅಲ್ಲಿಂದ ಹಾರೋಹಳ್ಳಿ (ಜಯಪುರ)ಗೆ ಬಂದ ಮುಖ್ಯಮಂತ್ರಿ ಅವರನ್ನು ಛತ್ರಿ, ಛಾಮರದೊಂದಿಗೆ ಮೆರವಣಿಗೆಯಲ್ಲಿ ಗ್ರಾಮದ ರಾಮಮಂದಿರಕ್ಕೆ ಕರೆದೊಯ್ದು ಮಂಗಳಾರತಿ ಮಾಡಿಸಲಾಯಿತು. ರಾಮಮಂದಿರ ಮುಂಭಾಗದಲ್ಲೇ ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಅಲ್ಲಿಂದ ಬಂದ ಸಿದ್ದರಾಮಯ್ಯ ಅವರು, ಗ್ರಾಮದ ಮಾರಮ್ಮದೇವಿ ದೇವಸ್ಥಾನದ ಆವರಣದಲ್ಲಿ ತೆರೆದ ವಾಹನದಲ್ಲಿ ನಿಂತು ಭಾಷಣ ಮಾಡಿ ಮತಯಾಚಿಸಿ, ನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕ ಸತ್ಯನಾರಾಯಣ, ಜಿಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಮಾವಿನಹಳ್ಳಿ ಸಿದ್ದೇಗೌಡ ಜತೆಗಿದ್ದರು.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.