ಜನ ಸಾಮಾನ್ಯರ ಆರ್ಥಿಕ ಸಮಸ್ಯೆಗೆ ಸಹಕಾರ ಸಂಘಗಳು ಅತ್ಯಗತ್ಯ:ಶಿವಸ್ವಾಮಿ
Team Udayavani, Dec 22, 2021, 7:01 PM IST
ಪಿರಿಯಾಪಟ್ಟಣ: ಸಹಕಾರ ಸಂಘಗಳನ್ನು ಬಲಪಡಿಸುವ ಮೂಲಕ ಜನ ಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನೆಲಜಲ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಶಿವಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹುಣಸವಾಡಿ ಗ್ರಾಮದ ಖಾಸಗಿ ಹೊಟೇಲ್ನ ಸಭಾಂಗಣದಲ್ಲಿ ಮಂಗಳವಾರ ನೆಲಜಲ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘದ 2020-21ನೇ ಸಾಲಿನ ವಾರ್ಷಿಕ ಮಹಾಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರ ಸಂಘ, ಸಂಸ್ಥೆಗಳು ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸುವ ಮೂಲಕ ಹಲವು ರೈತರಿಗೆ, ಮಹಿಳೆಯರಿಗೆ ಸಹಕಾರಿಯಾಗಿವೆ. ಮಹಿಳಾ ಸಂಘ, ಸ್ತ್ರಿ ಶಕ್ತಿ ಸಂಘಗಳ ಮೂಲಕ ಮಹಿಳೆಯರು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರು ಈ ಸಹಕಾರ ಸಂಘಗಳ ಜತೆ ಭಾಗವಹಿಸಿ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು. ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಲು ಷೇರುದಾರರ ಸಹಕಾರ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚುಹೆಚ್ಚು ಸದಸ್ಯರನ್ನು ಸಂಘಕ್ಕೆ ನೊಂದಣಿ ಮಾಡಬೇಕು ಎಂದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ಹರೀಶ್ ಮಾತನಾಡಿ ಕಳೆದ ಮೂರು ವರ್ಷಗಳ ಹಿಂದೆ ಸಂಘ ಪ್ರಾರಂಭಿಸಿ ಪ್ರಸ್ತುತ 514 ಷೇರುದಾರರಿದ್ದು ಎಲ್ಲರ ಹಿತ ಕಾಯುವ ದೃಷ್ಟಿಯಿಂದ ಸಹಕಾರ ಸಂಘದಂತೆ ಸವಲತ್ತು ಒದಗಿಸುವ ನಿಟ್ಟಿನಲ್ಲಿ ಎಂಡಿಸಿಸಿ ಬ್ಯಾಂಕ್ ಷೇರು ಪಡೆದು ಅವರಿಂದ ಸಾಲ ಪಡೆದು ವಿತರಿಸಲು ನಿರ್ಧರಿಸಲಾಗಿದೆ, ಷೇರುದಾರರು ಸಕಾಲಕ್ಕೆ ಸಾಲ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.
ಮೈಕ್ಯಾಪ್ಸ್ ಮುಖ್ಯಸ್ಥ ವಿಲಿಯಂ ಡಿಸೋಜ ಮಾತನಾಡಿ ಸಂಘದ ವತಿಯಿಂದ ರೈತರ ಕೃಷಿ ಚಟುವಟಿಕೆಗೆ ಸಹಕಾರ ಮಾಡುವ ನಿಟ್ಟಿನಲ್ಲಿ ಕೆರೆಗಳ ಹೂಳೆತ್ತಿ ನೀರು ಸಂಗ್ರಹಿಸುವ ಮೂಲಕ ಅಂತರ್ಜಲ ಹೆಚ್ಚಿಸಲಾಗುತ್ತಿದೆ ಈ ನಿಟ್ಟಿನಲ್ಲಿ ನೆಲ-ಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದೊಂದಿಗೆ ತಾಲ್ಲೂಕಿನಲ್ಲಿ ಕೈ ಜೋಡಿಸಲಾಗಿದೆ ಎಂದರು.
ಸಂಸ್ಥೆಯ ನಿರ್ದೇಶಕ ಹೆಚ್.ಜಿ ಶಿವಶಂಕರ್ ಮಾತನಾಡಿ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಶೇರುದಾರರ ಸಲಹೆ ಸೂಚನೆ ಅಗತ್ಯವಾಗಿದ್ದು ಸಂಘದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಿ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.
ಈ ಸಂದರ್ಭ ಮೈಕ್ಯಾಪ್ಸ್ ಅಭಿವೃದ್ಧಿ ಅಧಿಕಾರಿ ರಾಜಪ್ಪ, ಪದ್ಮಲತಾ, ಸಂಘದ ನಿರ್ದೇಶಕರಾದ ಕುಮಾರಸ್ವಾಮಿ, ಎಂ.ಎಲ್ ನವೀನ್, ಎ.ಆರ್ ಕೀರ್ತಿರಾಜ್, ಎ.ಕುಮಾರ, ಶೈಲಜಾ, ಡಿ.ಟಿ ಸತೀಶ್, ಸೈಯದ್ ಅಬ್ರಾರ್, ಕೆ.ವಿ ಆನಂದ್, ಎಸ್.ಕೆ ಜ್ಯೋತಿ, ಕೆ.ಎಸ್ ಲೋಕಪಾಲಯ್ಯ, ಇಂದ್ರ, ವೆಂಕಟೇಶ್, ಎ.ಟಿ ಮಂಜುನಾಯ್ಕ ಡಿ.ಎಮ್.ಹರೀಶ್ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.