ಬಯಲು ಸೀಮೆಯಲ್ಲಿ ಕಾಫಿ ಬೆಳೆದು ರೈತ ಯಶಸ್ಸು
Team Udayavani, Apr 20, 2019, 12:01 PM IST
ಶ್ರೀರಂಗಪಟ್ಟಣ: ಕೊಡಗಿನಂತಹ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯ ಬಹುದಾದ ಕಾಫಿ ಬೆಳೆಯನ್ನು ಕಡಿಮೆ ಮಳೆ ಬೀಳುವ ಪ್ರದೇಶವಾದ ಮಂಡ್ಯದ ಬಯಲು ಸೀಮೆಯಲ್ಲಿ ರೈತರೊಬ್ಬರು ಯಶಸ್ವಿಯಾಗಿ ಬೆಳೆದಿದ್ದಾರೆ.
ತಾಲೂಕಿನ ಪಾಲಹಳ್ಳಿ ಗ್ರಾಮದ ರೈತ ಸಿ.ದೇವರಾಜು ತಮ್ಮ ಒಂದೂವರೆ ಎಕರೆ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯುತ್ತಿದ್ದಾರೆ. ರೊಬಸ್ಟಾ ಮತ್ತು ಅರೇಬಿಕಾ-ಎರಡೂ ತಳಿಯ 1300ಕ್ಕೂ ಹೆಚ್ಚು ಗಿಡಗಳನ್ನು ಇವರು ಬೆಳೆದಿದ್ದು ಮೊದಲ ಕೊಯ್ಲು ಕಾಫಿ ಬೀಜ ತೆಗೆದ ಖುಷಿಯಲ್ಲಿದ್ದಾರೆ. ತಾವು ಬೆಳೆದ ಮೊದಲ ಫಸಲು 4 ಮೂಟೆ ಕಾಫಿ ಬೀಜಗಳನ್ನು ದೇವರಾಜು ಕುಶಾಲನಗರದಲ್ಲಿ ಮಾರಾಟ ಮಾಡಿ ಹಣ ಎಣಿಸಿಕೊಂಡಿದ್ದಾರೆ.
ಕಪ್ಪು- ಕೆಂಪು ಮಿಶ್ರಿತ ಮಣ್ಣಿನ ತಮ್ಮ ಜಮೀನಿನಲ್ಲಿ 3 ವರ್ಷಗಳ ಹಿಂದೆ ಕಾಫಿ ಗಿಡಗಳನ್ನು ನೆಟ್ಟಿದ್ದು ಎಲ್ಲಾ ಗಿಡಗಳು ಹುಲುಸಾಗಿ ಬೆಳೆದಿವೆ. ಕಾಫಿ ಅಗತ್ಯವಾದ ನೆರಳು, ತೇವಾಂಶ ಸೃಷ್ಟಿಸಿ ತಮ್ಮ ಪ್ರಯೋ ಗದಲ್ಲಿ ಯಶಸ್ಸು ಕಂಡಿದ್ದಾರೆ. ಸುಲಭ ವಾದ ಹಾಯಿ ನೀರು ಪದ್ಧತಿಯಲ್ಲಿಯೇ ಕಾಫಿ ಕೃಷಿ ನಡೆಯುತ್ತಿರುವುದು ಇಲ್ಲಿನ ವಿಶೇಷ.
ಬಹು ಬೆಳೆ ಪದ್ಧತಿ: ದೇವರಾಜು ಅವರ ಕಾಫಿ ತೋಟದ ನಡುವೆ ಹತ್ತಕ್ಕೂ ಹೆಚ್ಚು ಬಗೆಯ ತೋಟಗಾರಿಕಾ ಬೆಳೆಗಳಿವೆೆ. 300 ಪಚ್ಚಬಾಳೆ, 100 ಅಡಕೆ, 60 ಸಪೋಟ (ಚಿಕ್ಕು), 60 ತೆಂಗು, 100 ಪಪ್ಪಾಯ, 50 ಏಲಕ್ಕಿ ಬಾಳೆ, 50 ಕಾಳು ಮೆಣಸು, 10 ಸೀಬೆ (ಪೇರಲ), 10 ನಿಂಬೆ, 10 ಕಿತ್ತಳೆ, 6 ಬಟರ್ ಫ‌್ರೂಟ್, ಎರಡು ಮಾವು, ಎರಡು ದಾಳಿಂಬೆ ಹಾಗೂ ಏಲಕ್ಕಿ ಗಿಡಗಳಿವೆ. ಈ ಪೈಕಿ ಅಡಕೆ, ತೆಂಗು, ಸಪೋಟ, ಕಾಳು ಮೆಣಸು, ಪಪ್ಪಾಯ, ಮಾವು ಫಲ ಕೊಡುತ್ತಿವೆ. 100 ತೇಗ, 60 ಸಿಲ್ವರ್ ಮರಗಳು ಇಲ್ಲಿ ಬೆಳೆಯುತ್ತಿವೆ.
ವರ್ಷಕ್ಕೆ ಲಕ್ಷ ರೂ.: ದೇವರಾಜು ಅವರ ತೋಟದಲ್ಲಿ ಕಾಫಿ ಪ್ರಧಾನ ಬೆಳೆ. ಮೊದಲ ಫಸಲಿನಿಂದ 15 ಸಾವಿರ ರೂ.,ಆದಾಯ ಸಿಕ್ಕಿದೆ. ತೆಂಗಿನ ಕಾಯಿ, ಎಳನೀರಿನಿಂದ ವರ್ಷಕ್ಕೆ 60 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ. ಸಪೋಟ ಗಿಡಗಳನ್ನು ವರ್ಷಕ್ಕೆ 30 ಸಾವಿರಕ್ಕೆ ಗುತ್ತಿಗೆ ನೀಡಿದ್ದಾರೆ. ರೆಡ್ ಲೇಡಿ ತಳಿ ಪಪ್ಪಾಯ ಗಿಡಗಳು ಇದುವರೆಗೆ 20 ಸಾವಿರ ರೂ.ಹಣ ತಂದು ಕೊಟ್ಟಿವೆ. ಅಡಕೆ ಮತ್ತು ಅವುಗಳಿಗೆ ಹಬ್ಬಿರುವ ಕಾಳು ಮೆಣಸು ಬಳ್ಳಿಗಳು ಗೊಂಚಲಾಗಿ ಫಲ ನೀಡಲಾರಂಭಿಸಿವೆ.
ಸ್ಪ್ರಿಂಕ್ಲರ್ ನೀರು: ‘ಮರಗಳ ನೆರಳು ಮತ್ತು ತೇವಾಂಶ ಭರಿತ ವಾತಾವರಣ ಇದ್ದರೆ ಬಯಲು ಸೀಮೆಯಲ್ಲಿಯೂ ಕಾಫಿ ಬೆಳೆಯಬಹುದು. ನಿಗದಿತ ಪ್ರಮಾಣದಲ್ಲಿ ನೀರು ಮತ್ತು ಗೊಬ್ಬರ ಕೊಟ್ಟರೆ ಮಣ್ಣು ಮೃಧುವಾಗುವ ಜತೆಗೆ ವಾತಾವರಣದಲ್ಲಿ ಆದ್ರರ್ತೆ ತನ್ನಿಂತಾನೆ ಸೃಷ್ಟಿಯಾಗುತ್ತದೆ. ಸ್ಪ್ರಿಂಕ್ಲರ್ ಪದ್ಧತಿ ನೀರಿನ ವ್ಯವಸ್ಥೆ ಕಾಫಿ ಬೆಳೆಗೆ ಹೆಚ್ಚು ಸೂಕ್ತ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚಂದ್ರು.
‘ಕಾಫಿ ಗಿಡಗಳನ್ನು ನಾಟಿ ಮಾಡಿದ ಆರಂಭದ ದಿನಗಳಲ್ಲಿ ಬೆಳೆ ಬರುತ್ತ ದೆಯೋ ಇಲ್ಲವೋ ಎಂಬ ಆತಂಕ ಉಂಟಾಗಿತ್ತು. ಸದ್ಯ ಕಾಫಿ ಗಿಡಗಳು ಚೆನ್ನಾಗಿ ಬೆಳೆಯುತ್ತಿದ್ದು, ರೋಗಭಾದೆ ಯಿಂದ ಮುಕ್ತವಾಗಿವೆ. ಸದ್ಯಕ್ಕೆ 2-3 ಮೂಟೆ ಕಾಫಿ ಬೀಜ ಸಿಗುತ್ತಿದ್ದು, ಹಂತ ಹಂತವಾಗಿ ಇಳುವರಿ ಹೆಚ್ಚಲಿದೆ. ಇರುವ ಎಲ್ಲಾ ಬೆಳೆಯಿಂದ ವರ್ಷಕ್ಕೆ 1 ಲಕ್ಷ ರೂ., ಆದಾಯ ಬರುತ್ತಿದೆ. ಇನ್ನು 10 ವರ್ಷ ಕಳೆದರೆ ತೇಗ ಮತ್ತು ಸಿಲ್ವರ್ ಓಕ್ ಮರಗಳಿಂದಲೇ 20 ಲಕ್ಷ ರೂ. ಸಿಗಲಿದೆ’ ಎಂದು ದೇವರಾಜು ವಿಶ್ವಾಸ ವ್ಯಕ್ತ ಪಡಿಸುತ್ತಾರೆ. ಮಾಹಿತಿಗೆ ಮೊ.99643 64350ಕ್ಕೆ ಸಂಪರ್ಕಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.