ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಿ
Team Udayavani, Jun 7, 2017, 2:39 PM IST
ಹುಣಸೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇದೇ ಪ್ರಥಮ ಬಾರಿಗೆ ಸ್ವತ್ಛ ಭಾರತ್ ಅಭಿಯಾನದಡಿ ನಗರಸಭೆ ವತಿಯಿಂದ ವಾಡ್ ನಂ.4 ರ ಬಡಾವಣೆ ನಿವಾಸಿಗಳಿಗೆ ಮನೆಯಿಂದಲೇ ಹಸಿ ಕಸ ಮತ್ತು ಒಣ ಕಸ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಕಸದ ಬುಟ್ಟಿಗಳನ್ನು ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ನಗರದ ವಾರ್ಡ್ 04 ರಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಕೆ.ಲಕ್ಷ್ಮಣ ಮಾತನಾಡಿ, ಹಳ್ಳಿಯ ಜನರು ನಿಸರ್ಗದೊಂದಿಗೆ ಜೋಡಣೆಯಾಗಿದ್ದಾರೆ. ಆದರೆ ನಗರ ಪ್ರದೇಶದ ಜನರು ನಿಸರ್ಗದೊಂದಿಗೆ ಬೆರೆಯದ ಹೊರತು, ಉತ್ತಮ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ ಎಂದರು.
ಇನ್ನಾದರೂ ಎಚ್ಚೆತ್ತು ನಿಮ್ಮ ಮನೆಯ ಕೈತೋಟಗಳಲ್ಲಿ ಅಗತ್ಯಕ್ಕನುಗುಣವಾಗಿಯಾದರೂ ಸಸಿಗಳನ್ನು ಬೆಳೆಸಿ, ಉತ್ತಮ ಪರಿಸರ ನಿರ್ಮಾಣ ಮಾಡಲು ಸಹಕರಿಸಿ, ಸರ್ಕಾರ ಎಲ್ಲ ನಗರದಲ್ಲಿಯೂ 2016ರಲ್ಲಿ ಘನ ತ್ಯಾಜ್ಯ ವಿಂಗಡಣೆ ಮಾಡಬೇಕೆಂಬ ಘೋಷಣೆ ಹೊರಡಿಸಿದ್ದು, ನಗರ ಸ್ವತ್ಛವಾಗಿರಬೇಕಾದರೆ ಜನರ ಭಾಗವಹಿಸುವಿಕೆ ಅತೀ ಮುಖ್ಯವಾಗಿದೆ ಎಂದು ತಿಳಿಸಿದರು.
ಇಂದಿನಿಂದಲೇ ತ್ಯಾಜ್ಯ ವಿಲೇವಾರಿಗೆ ಸಹಕರಿಸಿರಿ. ಗಿಡ ನೆಡಲು ಜಾಗವಿಲ್ಲ ಎನ್ನುವ ಮನೋಭಾವನೆಯನ್ನು ಜನರು ಮೊದಲು ಬಿಡಬೇಕು, ನಗರವನ್ನು ಸ್ವತ್ಛವಾಗಿಸುವ ನಿಟ್ಟಿನಲ್ಲಿ ನಾವು ಇಂಥದೊಂದು ಸಂಸ್ಕೃತಿ ಅಳವಡಿಸಿಕೊಂಡು ಸ್ವತ್ಛತೆಯನ್ನು ಸಾಮೂಹಿಕ ಚಳವಳಿಯನ್ನಾಗಿ ಮಾಡಬೇಕು. ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸಿದರೆ ಅದು ಕೂಡ ಸಂಪತ್ತೆಂದು ಹೇಳಿದರು.
ಪರಿಸರ ಎಂಜಿನಿಯ್ ರವಿಕುಮಾರ್ ಮಾತನಾಡಿ, ದೇಶಾದ್ಯಂತ ಇಂದು 4 ಸಾವಿರ ನಗರಗಳಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಸಾಮೂಹಿಕ ತ್ಯಾಜ್ಯ ನಿರ್ವಹಣೆ ಅಭಿಯನಕ್ಕೆ ವಿಶ್ವಪರಿಸರ ದಿನದಂದೇ ಚಾಲನೆ ನೀಡಿದೆ. ನಗರದ ವಾರ್ಡ್ ನಂ. 4ರ ಎಲ್ಲ 432 ನಿವಾಸಿಗಳಿಗೆ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಸಲುವಾಗಿ ಹಸಿರು ಮತ್ತು ನೀಲಿ ಬಣ್ಣದ ಎರಡು ಬಗೆಯ ಬುಟ್ಟಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಭಗೀರಥ ಸಂಸ್ಥೆಯ ಅಧ್ಯಕ್ಷ ಪ್ರಕಾಶಕುಲಕರ್ಣಿ ಮಾತನಾಡಿ, ಇಂದು ನಿಸರ್ಗದೊಂದಿಗೆ ಜನರ ಜೋಡಣೆ ಎಂಬ ಕಲ್ಪನೆಯೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಯೋಜಿಸಿದ್ದು ದಿನೇದಿನೇ ತಾಪಮಾನ ಹೆಚ್ಚುತ್ತಿದೆ, ಜನರ ದುರಾಸೆಯೊಂದಿಗೆ ಪ್ರಕೃತಿಯನ್ನು ಹಾಳುಮಾಡಿದ್ದು, ಇನ್ನಾದರೂ ಪ್ರಕೃತಿಗೆ ಕೊಂಚ ಕೊಡುಗೆ ನೀಡಿ ಎಂದು ತಿಳಿಸಿದರು.
ದಿನಾಚರಣೆ ಕುರಿತು ನಗರ ಸಭೆಯ ಸದಸ್ಯರಾದ ವೆಂಕಟೇಶ, ಸತೀಶಕುಮಾರ್, ಸುನೀತಾ ಜಯರಾಮೇಗೌಡ, ಜಿ.ಎಸ್.ಜಗದೀಶ್ ಮಾತನಾಡಿದರು. ವಾರ್ಡ್ 4ರಲ್ಲಿ ಪ್ರತಿ ಬೀದಿಗಳಲ್ಲಿ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ ಮಾಡಲಾಯಿತು.
ನಗರ ಸಭೆಯ ಪೌರಯುಕ್ತ ಶಿವಪ್ಪನಾಯಕ, ಸದಸ್ಯರಾದ ಕೃಷ್ಣರಾಜಗುಪ್ತ, ಎಸ್.ಶರವಣ, ಆಶ್ರಯ ಸಮಿತಿಯ ಸದಸ್ಯ ಎಸ್.ಜಯರಾಮ್, ಆರೋಗ್ಯಾಧಿಕಾರಿಗಳಾದ ಸತೀಶ್, ಮೋಹನ್, ಭ ಗೀರಥ ಸಂಸ್ಥೆಯ ಚಂಗಪ್ಪ, ನಂಜುಂಡಸ್ವಾಮಿ, ನಗರ ಸಭೆ ಸಿಬ್ಬಂದಿ, ವಾರ್ಡ್‌ನ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರುಗಳು, ಮಹಿಳಾ ಸಂಘದ ಪ್ರತಿನಿಧಿ ಗಳು, ಸತ್ಯಸಾಯಿ ಐಟಿಐ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಡಾನ್ ಬಾಸ್ಕೊ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.