ಸವಾರರಿಂದ 9 ದಿನದಲಿ 12.30 ಕೋಟಿ ರೂ. ದಂಡ ಸಂಗ್ರಹ
Team Udayavani, Feb 13, 2023, 3:40 PM IST
ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿದ್ದ ವಾಹನ ಚಾಲಕರು, ಸವಾರರಿಗೆ ಶೇ.50 ರಿಯಾಯಿತಿಯೊಂದಿಗೆ ದಂಡ ಪಾವತಿ ಸಲು ಸರ್ಕಾರ ಇತ್ತೀಚೆಗೆ ನೀಡಿದ್ದ ಆಫರ್‌ಗೆ ನಗರ ದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ ಫೆ.3ರಿಂದ 11ರವರೆಗೆ 9 ದಿನಗಳ ಅವಧಿ ಯಲ್ಲಿ 4,98,265 ಪ್ರಕರಣ ವಿಲೇವಾರಿ ಯಾಗುವ ಮೂಲಕ 12,30,58,650 ರೂ. ದಂಡ ಸಂಗ್ರಹವಾಗಿದೆ. ಇಷ್ಟು ದಿನ ರಸ್ತೆ ಬದಿ ನಿಂತು ವಾಹನ ತಪಾಸಣೆ ಮಾಡುತ್ತಿದ್ದ ಸಂಚಾರ ಪೊಲೀಸರನ್ನು ಕಂಡು ಬಿಧ್ದೋಡುತ್ತಿದ್ದ ಜನ, ಕಳೆದ ವಾರದಲ್ಲಿ ಪೊಲೀಸರನ್ನೇ ಬೆನ್ನತ್ತಿ, ದಂಡ ಕಟ್ಟಿದ ಪ್ರಸಂಗ ಸಾಮಾ ನ್ಯವಾಗಿತ್ತು. ಕೆಲವರು ರಸ್ತೆ ಬದಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಹಿಡಿದರೆ, ಇನ್ನೂ ಕೆಲವರು ಸಂಚಾರ ಠಾಣೆಗಳಿಗೆ ತೆರಳಿ ತಮ್ಮ ವಾಹನಗಳಿಗೆ ವಿಧಿಸಲಾಗಿದ್ದ ದಂಡ ಪಾವತಿಸಿದರು.
ದಾಖಲೆ ಪ್ರಮಾಣದ ದಂಡ ಸಂಗ್ರಹ: ಕಳೆದ ವರ್ಷ ಪೂರ್ತಿ 8 ಕೋಟಿ ರೂ. ದಂಡ ವಸೂಲಿ ಮಾಡಿದ್ದ ಮೈಸೂರು ನಗರ ಸಂಚಾರ ಪೊಲೀಸರು, ರಿಯಾಯ್ತಿ ನೀಡಿದ್ದರಿಂದ ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ಬಂದು ಸಂಚಾರ ಠಾಣೆ ಮತ್ತು ಆನ್ ಲೈನ್ ಮೂಲಕ ದಂಡದ ಹಣ ಪಾವತಿ ಮಾಡಿದ್ದರಿಂದ 4,98,265 ಪ್ರಕರಣ ವಿಲೇವಾರಿಯಾಗಿ 12,30,58,650 ಕೋಟಿ ರೂ. ಸಂಗ್ರಹವಾಗಿದೆ ಎಂದು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ ತಿಳಿಸಿದ್ದಾರೆ.
ನಗರದ ಜನತೆ ಮೈಸೂರು ನಗರದ ದೇವರಾಜ, ಕೃಷ್ಣರಾಜ, ವಿವಿ ಪುರಂ, ಸಿದ್ದಾರ್ಥ ನಗರ, ನರಸಿಂಹರಾಜ ಸಂಚಾರ ಠಾಣೆ, ಮೈಸೂರು ನಗರ ಸಂಚಾರ ಎಸಿಪಿ ಕಚೇರಿ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಟೋ ಮೇಷನ್ ಸೆಂಟರ್‌ಗಳಲ್ಲಿ ತೆರಳಿ 9 ದಿನಗಳಲ್ಲೂ ನಿತ್ಯ ಮುಂಜಾನೆಯಿಂದ ಸಂಜೆವರೆಗೂ ದಂಡ ಪಾವತಿ ಮಾಡಿದರು.
ಹೆಚ್ಚುವರಿ ಕೌಂಟರ್: ಠಾಣೆಗಳಲ್ಲಿ ದಂಡ ಪಾವತಿಗೆ ಒಂದೆರಡು ಕೌಂಟರ್ ತೆರೆದು ದಂಡದ ಹಣ ಸಂಗ್ರಹಿಸುತ್ತಿದ್ದ ಸಂಚಾರ ಪೊಲೀಸರು, ಸಾರ್ವಜನಿಕರ ಕ್ಯೂ ಹೆಚ್ಚಾದಂತೆ ಹೆಚ್ಚುವರಿ ಕೌಂಟರ್ ತೆರೆದು ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿತ್ತು. ಪರಿಣಾಮ ಸಾರ್ವಜನಿಕರಿಗೆ ಯಾವುದೇ ಗೊಂದಲ ಉಂಟಾಗಲಿಲ್ಲ.
ಅವಧಿ ವಿಸ್ತರಣೆಗೆ ಒತ್ತಾಯ: ವಾಹನಗಳ ಸವಾರರಿಂದ ಶೇ.50 ರಷ್ಟು ರಿಯಾಯ್ತಿಯಲ್ಲಿ ಸರ್ಕಾರ ದಂಡ ಪಾವತಿ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕಡಿಮೆ ಅವಧಿ ಇರುವುದರಿಂದ ಇನ್ನೂ ಸಾಕಷ್ಟು ಮಂದಿಗೆ ದಂಡ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದಂಡ ಪಾವತಿ ಇರುವ ಕಾಲಾವಧಿಯನ್ನು ಮತ್ತೆ ಒಂದು ವಾರಕ್ಕೆ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ.
ಕಳೆದ 9 ದಿನದಲ್ಲಿ ನಗರದ ವಿವಿಧ ಸಂಚಾರ ಠಾಣೆ, ವಾಹನ ತಪಾಸಣೆ ಮಾಡುವ ಪೊಲೀಸರ ಬಳಿ ಹಾಗೂ ಆಟೋ ಮೇಷನ್ ಸೆಂಟರ್‌ಗೆ ಸಾವಿರಾರು ಜನ ತೆರಳಿ ದಂಡ ಪಾವತಿಸಿ ದ್ದಾರೆ. ಈ ಮೂಲಕ 12.30 ಕೋಟಿ ರೂ. ದಂಡ ಸಂಗ್ರಹವಾಗಿದೆ. – ಪರುಶುರಾಮಪ್ಪ, ಎಸಿಪಿ ಸಂಚಾರ ವಿಭಾಗ ಮೈಸೂರು ನಗರ
-ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.