ವಾಣಿಜ್ಯ ಕಟ್ಟಡ ತೆರಿಗೆ ಪರಿಷ್ಕರಣೆ: ಆಯುಕ್ತ
Team Udayavani, Nov 17, 2021, 2:39 PM IST
ಮೈಸೂರು: ನಗರದ ವಾಣಿವಿಲಾಸ ನೀರು ಸರಬರಾಜು ನಿಗಮದ ಕಚೇರಿಯಲ್ಲಿ ಮಂಗಳವಾರ ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಇತರ ಅಧಿಕಾರಿಗಳೊಂದಿಗೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಸಭೆ ನಡೆಯಿತು. ಸಭೆಯಲ್ಲಿ ಸಂಘ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ಆಸ್ತಿ ತೆರಿಗೆ ಹಾಗೂ ಉದ್ದಿಮೆ ರಹದಾರಿ ಸಂಬಂಧ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಈ ವೇಳೆ ಮಾತನಾಡಿದ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಮುಂದಿನ ಕೌನ್ಸಿಲ್ ಸಭೆಯಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಇರುವ ಕಮರ್ಷಿಯಲ್ ಎ ಮತ್ತು ಬಿ ಎಂಬ ವಿಭಾಗಗಳನ್ನು ತೆಗೆದುಹಾಕಿ ವಾಣಿಜ್ಯ ಎಂಬ ಒಂದೇ ವಿಭಾಗದಡಿ ಎಲ್ಲ ವಾಣಿಜ್ಯ ಆಸ್ತಿಗಳೂ ಸೇರುವಂತೆ ಮಾಡಲಾಗುತ್ತದೆ.
ಇದನ್ನೂ ಓದಿ:- ಪ.ಪೂ. ಶಿಕ್ಷಣ ಇಲಾಖೆ ಸರ್ಕಾರದ ಅಧೀನವೇ?,ಸ್ಪಷ್ಟಪಡಿಸಿ: ಸಿಎಂಗೆ ಬಿಜೆಪಿ ಶಾಸಕ
ಈ ಮೂಲಕ ಮುಂದಿನ ವರ್ಷದಿಂದ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಚಿತ್ರಮಂದಿರಗಳು, ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ಲಾಡ್ಜ್ಗಳಿಗೆ ತೆರಿಗೆಯಿಂದ ಆಗುತ್ತಿರುವ ಹೊರೆ ಕಡಿಮೆಯಾಗುತ್ತದೆ. ಆದರೆ, ಈವರೆಗೂ ಉಳಿಸಿಕೊಂಡಿರುವ ತೆರಿಗೆಗಳನ್ನು ಆದಷ್ಟು ಬೇಗ ಪಾವತಿ ಮಾಡಿ. ಈವರೆಗೂ ಆಗಿರುವ ತೆರಿಗೆ ಲೆಕ್ಕಾಚಾರಗಳಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ಸರಿಪಡಿಸಿಕೊಡಲಾಗುವುದು ಎಂದರು.
ಹೊರೆ ಇಳಿಸಲು ಕ್ರಮ: ಉದ್ಯಮಿಗಳ ಬೇಡಿಕೆಯಂತೆ ಹೆಚಿ³ ಕನೆಕ್ಷನ್ ಆಧಾರದ ಮೇಲೆ ಮಾತ್ರ ಉದ್ದಿಮೆ ರಹದಾರಿ ನೀಡಲು, ಎಸಿ, ಜನರೇಟರ್ ಹಾಗೂ ಬೋರ್ವೆಲ್ ಮೇಲೆ ಹೆಚ್ಚುವರಿ ಶುಲ್ಕ ವಿಧಿಸದಿರಲು ಸಹ ಕೌನ್ಸಿಲ್‌ನಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಸಿಆರ್ ಇಲ್ಲದ ಕಟ್ಟಡಗಳಿಗೆ ದುಪ್ಪಟ್ಟು ಉದ್ದಿಮೆ ರಹದಾರಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಈ ಹೊರೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು. ಹಳೆಯ ಕಟ್ಟಡಗಳಿಗೂ ಇಂದಿನ ದಿನದ ನಿರ್ಮಾಣ ಶುಲ್ಕವನ್ನು ಪರಿಗಣಿಸಲಾಗುತ್ತಿದೆ.
ಕಟ್ಟಡ ಹಳೆಯದಾದಂತೆ ಆ ಶುಲ್ಕವೂ ಕಡಿಮೆಯಾಗಬೇಕು ಎಂಬ ವಿಷಯವನ್ನು ಕೌನ್ಸಿಲ್‌ನಲ್ಲಿ ಇಡಲಾಗುತ್ತದೆ. ಅಲ್ಲದೆ ಬಿ ಖಾತಾ ಪದ್ಧತಿಯನ್ನೂ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದಾಗಿ ಪಾಲಿಕೆಯ ಆದಾಯ ಹೆಚ್ಚಾಗಲಿದೆ ಎಂದು ತಿಳಿಸಿದರು.
ಲೋಪ ಸರಿಪಡಿಸಿ: ಮಾಜಿ ಮೇಯರ್ ಭೈರಪ್ಪ ಮಾತನಾಡಿ, ಸೆಟ್ ಬ್ಯಾಕ್ ಸ್ಥಳಕ್ಕೂ ಪಾಲಿಕೆ ತೆರಿಗೆ ವಿಧಿಸುತ್ತಿರುವುದು ತಪ್ಪು. ಕೆಲವರು ದಶಗಳಿಂದ ತೆರಿಗೆ ಪಾವತಿಸಿಲ್ಲದಿದ್ದರೂ ಅವರನ್ನು ಕೇಳದೆ ಕೇವಲ ಎರಡು-ಮೂರು ವರ್ಷಗಳಿಂದ ತೆರಿಗೆ ಕಟ್ಟಿಲ್ಲದವರ ಆಸ್ತಿಗಳಿಗೆ ಬ್ಯಾನರ್ ಹಾಕಲಾಗುತ್ತಿದೆ. ಇನ್ನು ಕೆಲವರು ತೆರಿಗೆ ಕಟ್ಟಲು ತಯಾರಿದ್ದರೂ ಕಟ್ಟಿಸಿಕೊಳ್ಳಲು ಸಿಬ್ಬಂದಿ ತಯಾರಿಲ್ಲ. ಆನ್‌ಲೈನ್ ತೆರಿಗೆ ಪಾವತಿ ವ್ಯವಸ್ಥೆಯಲ್ಲೂ ಹಲವು ಲೋಪದೋಷಗಳಿವೆ.
ಅದನ್ನು ಸರಿಪಡಿಸಬೇಕು ಎಂದರು. ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಎಂ.ಆರ್. ರಾಜಾರಾಂ, ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಕಾರ್ಯದರ್ಶಿ ವಿನಯ್ ವೆಂಕಟೇಶ್, ಮನೋಜ್ ಶಣೈ, ಒಕ್ಕೂಟದ ಉಪಾಧ್ಯಕ್ಷ ಸಿ.ನಾರಾಯಣಗೌಡ, ಜಂಟಿ ಕಾರ್ಯದರ್ಶಿ ಕೆ.ಆರ್. ಸತ್ಯನಾರಾಯಣ, ನಿರ್ದೇಶಕರಾದ ಎಸ್.ಕೆ.ದಿನೇಶ್, ಎ.ಸುಧೀಂದ್ರ, ವೀರಭದ್ರಪ್ಪ, ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಎಂ.ಎನ್.ಶಶಿಕುಮಾರ್, ಉದ್ದಿಮೆ ರಹದಾರಿ ಅಧಿಕಾರಿ ರೂಪಾ ಮತ್ತಿತರರು ಉಪಸ್ಥಿತರಿದ್ದರು.
ಅವಮಾನಿಸುವ ಬ್ಯಾನರ್ ಅಳವಡಿಕೆ ಹಾಕುವುದಿಲ್ಲ
ನಗರಪಾಲಿಕೆ ವತಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ತೆರಿಗೆ ಕಟ್ಟದವರ ಕಟ್ಟಡಗಳಿಗೆ ಬ್ಯಾನರ್ ಹಾಕಿದ್ದಾರೆ, ಇದರಿಂದಾಗಿ ಎಲ್ಲರಿಗೂ ಅವಮಾನವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ಹಾಗಾಗದಂತೆ ಪಾಲಿಕೆ ನೋಡಿಕೊಳ್ಳುತ್ತದೆ. ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸುತ್ತಿರುವ ಬಗ್ಗೆಯೂ ಚರ್ಚೆ ನಡೆಸಿ ಹಾಗಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.