ಸಂಘ ಪರಿವಾರದ ಜತೆಗೆ ಸಿಎಂ ಒಳಒಪ್ಪಂದ
Team Udayavani, Oct 29, 2017, 12:39 PM IST
ಮೈಸೂರು: ಅಲ್ಪಸಂಖ್ಯಾತರಲ್ಲಿ ಅಭದ್ರತೆ ಭಾವನೆ ಮೂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಘ ಪರಿವಾರದ ಜತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್‌ಭಟ್, ಜಗದೀಶ್ ಕಾರಂತ್, ಪ್ರಮೋದ್ ಮುತಾಲಿಕ್ ಅವರುಗಳು ಕೋಮುಭಾವನೆ ಪ್ರಚೋಧಿಸುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಈ ಮೂಲಕ ಅಭದ್ರತೆಯ ಭಾವನೆ ಉಂಟುಮಾಡಿ, ಅಲ್ಪ ಸಂಖ್ಯಾತರು ತಮ್ಮ ಮುಂದೆ ಅಸಹಾಯಕರಾಗಿ ಬಂದು ಕೈಕಟ್ಟಿ ನಿಲ್ಲಲಿ ಎನ್ನುವ ತಂತ್ರ ಹೆಣೆದಿದ್ದಾರೆ .ಅಲ್ಪ$ಸಂಖ್ಯಾತರ ವಿಚಾರದಲ್ಲಿ ಬಿಜೆಪಿಗಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ಹಿಡನ್ ಅಜೆಂಡಾ ಇಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಅಹಿಂದಾ?: ನಾನು ಅಹಿಂದ ಪರ ಎನ್ನುವ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಅಲ್ಪ$ಸಂಖ್ಯಾತರು, ಹಿಂದುಳಿದವರಿಗೆ ಎಷ್ಟು ಕ್ಷೇತ್ರದಲ್ಲಿ ಟಿಕೆಟ್ ಕೊಡುತ್ತಾರೆ ಎಂದು ಪ್ರಶ್ನಿಸಿದ ಅವರು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಮುಸ್ಲಿಮರ ಪರಿಸ್ಥಿತಿ ಏನಾಗಿದೆ, ಕಾಂಗ್ರೆಸ್ ಬೆಂಬಲಿಸಿದ ಅವರಿಗೆ ನೀವು ಮಾಡಿದ್ದೇನು? ಇ
ಕ್ಬಾಲ್ ಅಹಮದ್ ಸರಡಗಿ ಸೋಲಿಸಿ ನಿಮ್ಮ ಆಪ್ತ ಸುರೇಶ್‌ಗೆ ವಿಧಾನಪರಿಷತ್ ಸದಸ್ಯ ಮಾಡಿದ್ದು, ಬಿ.ಎ.ಫಾರೂಕ್ ಸೋಲಿಸಿ ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಂಡಿದ್ದೇ ಅಹಿಂದವೇ ಎಂದು ಪ್ರಶ್ನೆ ಮಾಡಿದರು. ಹೈದ್ರಾಬಾದ್ ಕರ್ನಾಟಕ ಭಾಗದ ಮುಖಂಡರಾಗಿದ್ದ ಖಮರುಲ್ಲಾ ಇಸ್ಲಾಂ ಅವರನ್ನು ಯಾವ ರೀತಿ ನಡೆಸಿಕೊಂಡಿರೀ, ನಿಮ್ಮ ನಡವಳಿಕೆಯಿಂದ ಅವರು ಸಾವನ್ನಪ್ಪಿದರು ಎಂದು ಹೇಳಿದರು.
ವೈಯಕ್ತಿಕ ಟೀಕೆ ಮಾಡಿಲ್ಲ: ನಾನು ವಿಷಯಾಧಾರಿತ, ಸೈದ್ಧಾಂತಿಕವಾಗಿ ಮಾತನಾಡುತ್ತೇನೆಯೇ ಹೊರತು ವೈಯಕ್ತಿಕವಾಗಿ ಮಾತನಾಡಲ್ಲ. ನೀವು ಧಮಕಿ ಹಾಕಿಸಿ ನನ್ನ ಮಾತನ್ನು ನಿಲ್ಲಿಸುತ್ತೇನೆ ಅನ್ನುವುದೆಲ್ಲ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು. ನಾನು ಮತ್ತು ಸಿದ್ದರಾಮಯ್ಯ ಅವರು ಒಂದೇ ಸಮಾಜದವರು.
ಕೆಲವು ನಿವೃತ್ತ ಅಧಿಕಾರಿಗಳು ಸಿದ್ದರಾಮಯ್ಯ ಅವರ ವಿರುದ್ಧ ಏಕೆ ಮಾತಾಡುತ್ತೀರಾ ಎಂದು ಕೇಳುತ್ತಾರೆ, ನಾನು ವಿಷಯಾಧಾರಿತವಾಗಿ ಮಾತನಾಡುತ್ತೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ನಾನು ಏನು ಹೇಳಬೇಕು ಅಂದು ಕೊಂಡಿದ್ದೇನೋ,ಅದನ್ನು ಹೇಳಿಯೇ ಹೇಳುತ್ತೇನೆ ಎಂದರು.
ಬೆಲೆಯಿಲ್ಲ: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡಿದ್ದಾರೆ. ಅವರ ದರ್ಬಾರಿಗೆ ಎಲ್ಲವು ಸತ್ತು ಹೋಗಿದೆ ಎಂದರು.
ಬಿಎಸ್‌ವೈ ಗುಣಗಾನ: ರಾಜಕೀಯದಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಬಹುದು. ಬಿ.ಎಸ್.ಯಡಿಯೂರಪ್ಪ ಮುಕ್ತ ಮನಸ್ಸಿನವರು, 2008ರ ಚುನಾವಣೆಯಲ್ಲಿ ಸೋತರೂ ಎಂ.ಮಹದೇವ್ ಅವರನ್ನು ಆಹಾರ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದರು. ವಿ.ಸೋಮಣ್ಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿದರು. ಸಿ.ಎಚ್.ವಿಜಯಶಂಕರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಅರಣ್ಯ ಸಚಿವರನ್ನಾಗಿ ಮಾಡಿದ್ದರು, ಅದಕ್ಕಿಂತ ಇನ್ನೇನು ಮಾಡಬೇಕಿತ್ತು ಎಂದು ಮಾರ್ಮಿಕವಾಗಿ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.