ಕಾಂಗ್ರೆಸ್ ವಿಧೇಯರಿಗೆ ಮಾತ್ರ ಅಧಿಕಾರ
Team Udayavani, Dec 31, 2018, 12:45 AM IST
ಮೈಸೂರು: “ಕಾಂಗ್ರೆಸ್‌ನಲ್ಲಿ ಅಧಿಕಾರ ಬೇಕೆಂದರೆ ವಿಧೇಯರಾಗಿರಬೇಕು. ಹೈಕಮಾಂಡ್‌ಅನ್ನು ಹೊಗಳದಿದ್ದರೆ ಪಕ್ಷದಲ್ಲಿ ಉಳಿಯುವುದೇ ಕಷ್ಟ’ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಟೀಕಿಸಿದರು.
ಅಖೀಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಘಟಕ, ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಎರಡನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನೆಹರು ಪ್ರಧಾನಿಯಾಗಿದ್ದಾಗ, ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಹನುಮಂತಯ್ಯ ಅವರು ಎಐಸಿಸಿ ಅಧಿವೇಶನ ಮುಗಿಸಿ ಹೊರ ಬಂದಾಗ ನೆಹರು ನಂತರ ಪ್ರಧಾನಿ ಯಾರೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ ನಾನೇಕೆ ಆಗಬಾರದು ಎಂದಿದ್ದರು. ಅದಾದ ಕೆಲವೇ ತಿಂಗಳಲ್ಲಿ ಹನುಮಂತಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು.
ಅದೇ ಹನುಮಂತಯ್ಯ, ಇಂದಿರಾ ಗಾಂಧಿ ಅವರಿಗೆ ವಿಧೇಯತೆ ತೋರಿಸಿದ್ದರ ಫಲವಾಗಿ ರೈಲ್ವೆ ಖಾತೆ ನೀಡಲಾಯಿತು. ಆದ್ದರಿಂದ ಯುವಕರು ಯಾವುದೇ ಅಪೇಕ್ಷೆಯಿಲ್ಲದೆ ಸತ್ಯವನ್ನು ಹುಡುಕುವುದು ನಿಮ್ಮ ಆದರ್ಶವಾಗಬೇಕು. ಸತ್ಯಾನ್ವೇಷಣೆಗೆ ಅಧ್ಯಯನದ
ಬಲ ಬೇಕಾಗುತ್ತದೆ. ಅಧ್ಯಯನ ಇಲ್ಲದಿದ್ದರೆ ಲೇಖಕನಾಗಲು ಸಾಧ್ಯವಾಗುವುದಿಲ್ಲ ಎಂದರು.
ಭಾರತದಲ್ಲಿ ಜವಾಹರಲಾಲ್ ನೆಹರು ಅವರಿಂದ ಆರಂಭವಾದ ವಂಶಪಾರಂಪರ್ಯ ಆಡಳಿತ, ಪ್ರಸ್ತುತ ದೇಶದ ಹಲವು ರಾಜ್ಯಗಳಿಗೆ ವ್ಯಾಪಿಸಿದೆ ಎಂದು ಭೈರಪ್ಪ ಟೀಕಿಸಿದರು. “ನೆಹರು ನಂತರ ಪ್ರಧಾನಿ ಯಾರು’ ಎಂಬ ಮಾಧ್ಯಮಗಳ ಸಹಜವಾದ ಪ್ರಶ್ನೆಗೆ ಉತ್ತರವಾಗಿ ನೆಹರು ತಾನು ಪ್ರಧಾನಿ ಆಗಿರುವಾಗಲೇ ಮಗಳು ಇಂದಿರಾರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಿ ನನ್ನ ಉತ್ತರಾಧಿಕಾರಿ ಯಾರು ಎಂಬುದನ್ನು ಸಾರಿದ್ದರು ಎಂದು ಹೇಳಿದರು.
ನೆಹರು ಭಿತ್ತಿದ ಈ ವಂಶಪಾರಂಪರ್ಯ ಆಡಳಿತದ ಪರಿಣಾಮ ಇಂದು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಅವರವರ ಕುಟುಂಬದವರೇ ಅಧಿಕಾರ ಹಿಡಿಯುತ್ತಿದ್ದಾರೆ ಎಂದರು.
ಎಲ್ಲೆಡೆ ಪಂಥಗಳಿವೆ: ಎಡ-ಬಲ ಪಂಥಗಳು ರಾಜಕೀಯ ಕ್ಷೇತ್ರ ಮಾತ್ರವಲ್ಲ, ಸಾಮಾಜಿಕ, ಸಾಹಿತ್ಯ ಕ್ಷೇತ್ರದಲ್ಲೂ ಇವೆ. ಮೈಸೂರಿಗೆ ವರ್ಗಾವಣೆ ಮಾಡಿಸಿಕೊಂಡು ಬಂದ ಹೊಸತರಲ್ಲಿ ಕೆಲವರು ನನಗೆ ಭಾಷಣ ಮಾಡಲು ಕರೆಯುತ್ತಿದ್ದರು. ನಾನು ಹೋದಲ್ಲೆಲ್ಲ ಸರ್ಕಾರಿ ಉದ್ಯೋಗಕ್ಕೆ ಕಾಯದೆ, ಸ್ವಂತ ಉದ್ಯಮ ಆರಂಭಿಸಿ, ನಾಲ್ಕಾರು ಮಂದಿಗೆ ನೀವೇ ಕೆಲಸ ಕೊಡಿ ಎಂದು ಹೇಳುತ್ತಿದ್ದೆ. ಇದೇ ಕಾರಣಕ್ಕೆ ನನ್ನನ್ನು ಕ್ಯಾಪಿಟಲಿಸ್ಟ್ ಎಂದು ಕರೆದರು. ನೈಜವಾಗಿ ಬಲಪಂಥ ಸಾಹಿತಿಗಳು ಎಂಬುವವರು ಇಲ್ಲ. ಆದರೆ
ಎಡಪಂಥೀಯರು ಯಾರನ್ನು ವಿರೋಧಿಸುತ್ತಾರೋ ಅವರನ್ನು ಬಲಪಂಥೀಯರು ಎಂದು ಗುರುತಿಸಲಾಗುತ್ತಿದೆ. ಇದು ಸಾಹಿತ್ಯದ ಒಳ್ಳೆಯ ಲಕ್ಷಣವಲ್ಲ. ಎಲ್ಲಾ ನೀತಿ ಬೋಧನೆ ಮಾಡುವ ಎಡಪಂಥೀಯರು ಧೂಮಪಾನ ಮಾಡಬಾರದು, ಮದ್ಯಪಾನ ಮಾಡಬಾರದು ಎಂದರೆ, ಅದು ವೈಯಕ್ತಿಕ ಎನ್ನುತ್ತಾರೆ.
ರಷ್ಯಾದ ಮಾವೋತ್ಸೆ ತುಂಗ್ ಸರ್ವಾಧಿಕಾರಿಯಾಗಿದ್ದ. ಆತ ತನ್ನ ಸೇವೆಗಾಗಿ 19 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ನೇಮಿಸಿಕೊಂಡಿದ್ದ. ಇಂತಹ ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಅನ್ಯಾಯ ನಡೆಯುವುದೇ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನೆಹರು ಓದುವಾಗ ಕಮ್ಯುನಿಸ್ಟ್ ಸಿದಾಟಛಿಂತದಿಂದ ಆಕರ್ಷಿತರಾದರು. ರಷ್ಯಾದ ಸ್ಟಾಲಿನ್ ಅನೇಕರನ್ನು ಕೊಂದರೂ ನೆಹರು ಟೀಕಿಸಲಿಲ್ಲ. ಕಮ್ಯುನಿಸ್ಟ್ ಸಿದಾಟಛಿಂತವು ಬಡವರನ್ನು ಶ್ರೀಮಂತರನ್ನಾಗಿಸುತ್ತದೆ ಎಂದು ನೆಹರು ನಂಬಿದ್ದರು.
ಏಕೆಂದರೆ ಇವರೆಲ್ಲ ಶ್ರೀಮಂತರೇ. ಭಾರತಕ್ಕೆ ಸ್ವಾತಂತ್ರ್ಯ ಕೊಡುವಾಗ ಬ್ರಿಟೀಷರು ಯಾರು ಕಾಂಗ್ರೆಸ್‌ನ ಅಧ್ಯಕ್ಷರಾಗಿರುತ್ತಾರೆ ಅವರಿಗೆ ಸ್ವಾತಂತ್ರ್ಯವನ್ನು ನೀಡೋಣ ಎಂದು ತೀರ್ಮಾನಿಸಿದ್ದರು. ಈ ವೇಳೆ ದೇಶದಲ್ಲಿನ 15 ಪ್ರಾಂತ್ಯಗಳ ಅಭಿಪ್ರಾಯ ಕೇಳಿದಾಗ
12 ಪ್ರಾಂತ್ಯಗಳು ನೆಹರು ವಿರೋಧಿಸಿ, ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೆ ಬೆಂಬಲ ಸೂಚಿಸಿದ್ದವು. ಗಾಂಧೀಜಿ, ಪಟೇಲರು ನಾಮಪತ್ರ ಹಿಂಪಡೆಯುವಂತೆ ಮಾಡಿ ನೆಹರು ಅವರನ್ನು ಸಮಾಧಾನಪಡಿಸಿದ್ದರು ಎಂದು ಹೇಳಿದರು.
ಇದರಿಂದ ಮುನಿಸಿಕೊಂಡ ನೆಹರು ಅವರನ್ನು ಗಾಂಧೀಜಿ ಸಮಾಧಾನಪಡಿಸಿದರು. ಜತೆಗೆ ಪಟೇಲರು ತಮ್ಮ ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡುವಲ್ಲಿಯೂ ಯಶಸ್ವಿಯಾದರು. ಗಾಂಧೀಜಿ ಕೃಪಾ ಕಟಾಕ್ಷದಿಂದ ಪ್ರಧಾನಿಯಾದ ನೆಹರು ಮೂಲಕ ಭಾರತಕ್ಕೆ ಕಮ್ಯುನಿಸ್ಟ್ ಸಿದಾಟಛಿಂತ ಬಂತು. ಇಂದಿರಾ ಗಾಂಧಿ ಕೂಡ ಕಮ್ಯುನಿಸ್ಟ್‌ರ ಪರವಾಗಿಯೇ ಇದ್ದರು.
ಇಂದಿರಾಗಾಂಧಿ ಅವಧಿಯಲ್ಲಿ ಶೇ.97 ರಷ್ಟು ತೆರಿಗೆ ವಿಧಿಸಲಾಗಿತ್ತು. ವಿಶ್ವದಲ್ಲಿಯೇ ಹೆಚ್ಚು ತೆರಿಗೆ ವಿಧಿಸುತ್ತಿದ್ದ ಏಕೈಕ ರಾಷ್ಟ್ರ ಭಾರತವಾಗಿತ್ತು. ಹೀಗಾಗಿ ಉದ್ಯಮಿಗಳು ತೆರಿಗೆಯಿಂದ ತಪ್ಪಿಸಿಕೊಳ್ಳಲು ಕಳ್ಳಲೆಕ್ಕವನ್ನಿಡಲು ಮುಂದಾದರು. ಕಪ್ಪು ಹಣವನ್ನು ಸ್ವಿಸ್‌ಬ್ಯಾಂಕ್‌ನಲ್ಲಿಟ್ಟರು. ಇದನ್ನು ಪತ್ತೆಹಚ್ಚಿದ ಸರ್ಕಾರ ಪಕ್ಷದ$ನಿಧಿ ಹೆಸರಿನಲ್ಲಿ ಕಪ್ಪುಹಣ ಸಂಗ್ರಹಿಸಿ ತಾನೂ ಸ್ವಿಸ್‌ಬ್ಯಾಂಕ್‌ನಲ್ಲಿ ಹಣವನ್ನಿರಿಸಿತು. ಇದೇ ಕಪ್ಪು ಹಣವನ್ನು ತರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದಟಛಿ ಪ್ರತಿಪಕ್ಷಗಳು ತಿರುಗಿಬಿದ್ದಿವೆ ಎಂದರು.
ಅತ್ಯುತ್ತಮ ಲೇಖಕರಾಗಿದ್ದ ಅರುಣ್‌ಶೌರಿ ಅವರುತನಗೆ ಹಣಕಾಸು ಖಾತೆ ನೀಡಲಿಲ್ಲ ಎಂಬ ಕಾರಣಕ್ಕೆ ರಫೇಲ್ ಯುದಟಛಿ ವಿಮಾನ ಖರೀದಿ ಸಂಬಂಧ ಮೋದಿ ವಿರುದಟಛಿ ತಿರುಗಿ ಬಿದ್ದಿದ್ದಾರೆ ಎಂದು ಟೀಕಿಸಿದರು.ಇದೇ ವೇಳೆ ರಂಗಕರ್ಮಿ ಪ್ರೇಮಾ ಗುಳೇದಗುಡ್ಡ,ಪಿ. ಶಿವಣ್ಣ ಮತ್ತು ಡಾ.ಆರ್.ನಿಂಗರಾಜು ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನಾಧ್ಯಕ್ಷ ಪ್ರೊ.ಪ್ರೇಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ಞಾಪ್ರವಾಹ ಅಖೀಲ ಭಾರತ ಸಂಯೋಜಕ ಜೆ.ನಂದಕುಮಾರ್, ಅಭಾಸಾಪ ರಾಜ್ಯ ಅಧ್ಯಕ್ಷರಾದ ಕವಿ ಡಾ.ದೊಡ್ಡರಂಗೇಗೌಡ, ಮೈಸೂರು ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜ್ ಗೌಡ ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
MUST WATCH
ಹೊಸ ಸೇರ್ಪಡೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.