ಕಾಂಗ್ರೆಸ್‌ನಿಂದ ಕಳಲೆ ಕೇಶವಮೂರ್ತಿ
Team Udayavani, Mar 21, 2017, 1:19 PM IST
ನಂಜನಗೂಡು: ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಅತ್ಯಂತ ಪ್ರತಿಷ್ಠೆಯಾಗಿರುವ ನಂಜನ ಗೂಡಿನ ಉಪಚುನಾವಣೆಗೆ ಸೋಮವಾರ ಎರಡೂ ಪಕ್ಷಗಳ ಅಭ್ಯರ್ಥಿಗಳಾದ ವಿ. ಶ್ರೀನಿವಾಸ ಪ್ರಸಾದ್ ಹಾಗೂ ಕಳಲೆ ಕೇಶವ ಮೂರ್ತಿ ನಾಮಪತ್ರ ಸಲ್ಲಿಸಿದರು.
ಸೋಮವಾರ ಬೆಳಗ್ಗೆ ನಗರದ ಊಟಿ ರಸ್ತೆಯಲ್ಲಿರುವ ಚಿಂತಾಮಣಿ ಗಣಪತಿ ದೇವಾಲಯಕ್ಕೆ ಬೆಳಗ್ಗೆ 11ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಕೇಶವ ಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ಸಂಸದ ಆರ್ ಧ್ರುವನಾರಾಯಣ ಹಾಗೂ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶಗುಂಡುರಾವ್ ಅವರೊಂದಿಗೆ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ನಂತರ ಕಾಂಗ್ರೆಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸುತ್ತಾ ವಿಶ್ವೇಶ್ವರಯ್ಯ ವೃತ್ತವನ್ನೂ ಹಾದು ಮಹಾತ್ಮ ಗಾಂಧಿ ರಸ್ತೆಯ ಮೂಲಕ ತಾಲೂಕು ಕಚೇàರಿಯತ್ತ ಕೇಶವ ಮೂರ್ತಿ ಹಾಗೂ ಪಕ್ಷದ ನಾಯಕರೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ತೆರದ ವಾಹನದಲ್ಲಿ ನಾಯಕರು: ಕೈ ಅಭ್ಯರ್ಥಿ ಕೇಶವ ಮೂರ್ತಿ ಹಾಗೂ ಮುಖಂ ಡರು ತೆರದ ವಾಹನದಲ್ಲಿ ಬುರುತ್ತಿರು ವಾಗಲೇ ಗುಂಡುರಾವ್ ಹಾಗೂ ಎಚ್.ಸಿ ಮಹದವೇಪ್ಪ ಪಕ್ಷಕ್ಕೆ ಬೆಂಬಲ ಕೋರಿದರು.
100 ಮೀ. ದೂರದಲ್ಲೆ ಮೆರವಣಿಗೆ ತಡೆದರು: ಮೆರವಣಿಗೆ ಎಂಜಿಎಸ್ ರಸ್ತೆಯಲ್ಲಿ ತಾಲೂಕು ಕಚೇರಿಯ ಬಳಿ ಬುರುತ್ತಿದ್ದಾಗ 100 ದೂರದಲ್ಲೆ ಪೊಲೀಸರು ತಡೆದು ಮುಂದೆೆ ಮೆರವಣಿಗೆಗೆ ಅವಕಾಶವಿಲ್ಲ ಎಂದು ಹೇಳಿ ಮುಖಂಡರನ್ನು ಮಾತ್ರ ಒಳ ಬಿಟ್ಟರು.
ಜಿಲ್ಲಾ ಪೊಲೀಸ್ ಅಧಿಕಾರಿ ರವಿ ಚೆನ್ನಣ್ಣನವರ್ ಹಾಜರಿದ್ದು ನಾಮಪತ್ರ ಸಲ್ಲಿಸಲು ಕೇವಲ ಐದು ಜನರಿಗೆ ಮಾತ್ರ ಅವಕಾಶ ಎಂದು ಹೇಳಿದಾಗ ಅಭ್ಯರ್ಥಿ ಕೇಶವಮೂರ್ತಿ, ಉಸ್ತುವಾರಿ ಸಚಿವ ಡಾ ಎಚ್.ಸಿ ಮಹದೇವಪ್ಪ, ದಿನೇಶ ಗುಂಡುರಾವ್ ಹಾಗೂ ಕಾಗಲಾವಾಡಿ ಮಾದಪ್ಪ ಒಳಹೋಗಿ ಚುನಾವಣಾಧಿಕಾರಿ ಜಗದೀಶ್ ಅವರಿಗೆ ನಾಮ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಗೆಲ್ಲುವ ವಿಶ್ವಾಸ: ನಂತರ ಡಾ ಎಚ್.ಸಿ ಮಹದೇವಪ್ಪ ಮಾತನಾಡಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಗಳಿಸಲಿದೆ ಎಂದರು. 8 ವರ್ಷದ ಅಧಿಕಾರದ ಕೆಲಸ ಹಾಗೂ 6 ತಿಂಗಳಿನ ಅಭಿವೃದ್ಧಿ ಕ್ಷೇತ್ರದ ಜನತೆಯ ಮುಂದಿದೆ ಇದನ್ನು ಮುಂದಿಟ್ಟುಕೊಂಡೆ ತಾವು ಹಾಗೂ ಸಂಸದ ಆರ್ ಧ್ರುವ ನಾರಾಯಣ ಎರಡೆರಡು ಬಾರಿ ತಾಲೂಕನ್ನು ಸುತ್ತಿದ್ಧೇವೆ. ಜನತೆಗೆ ಕೆಲಸ ಮಾಡುವವರು ಯಾರು ಸೋಮಾರಿಗಳು ಯಾರು ಎನ್ನುವುದು ತಿಳಿದಿದೆ.
ಜನತೆ ಕಾಂಗ್ರೆಸ್‌ನ್ನೆ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು. ಕಳಲೆ ಕೇಶವಮೂರ್ತಿ ಮಾತನಾಡಿ, 2 ಬಾರಿ ಜೆಡಿಎಸ್ ನಿಂದ ನಿಂತು ಸೋತು ಬಳಲಿದ್ದೆœàನೆ ಇದೊಂದು ಬಾರಿ ಅಧಿಕಾರ ಬೇಡುತ್ತಿದ್ದೆœàನೆ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಚಾಮರಾಜನಗರ ಉಸ್ತುವಾರಿ ಸಚಿವ ಯು.ಟಿ ಖಾದರ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ವಾಸು, ಸೋಮಣ್ಣ, ಪುಟ್ಟರಂಗಶೆಟ್ಟಿ, ಕಾಂಗ್ರೆಸ್ ಯುವ ಮುಖಂಡ ಸುನಿಲ್ ಬೋಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ|ವಿಜಯ್ ಕುಮಾರ್, ಮುಖಂಡರಾದ ಕೆ.ಮರಿಗೌಡ, ಮೂಗಶೆಟ್ಟಿ, ಕೆ.ಮಾರುತಿ, ಸೀತಾರಾಮ್, ಇಂಧನ್ ಬಾಬು, ಗುರುಪಾದಸ್ವಾಮಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.