Congress ಶಾಸಕರಿಂದ ಪರೋಕ್ಷವಾಗಿ ಬಿಜೆಪಿಗೆ ಪ್ರಚಾರ :ಮಾಜಿ ಶಾಸಕ ಹರ್ಷವರ್ಧನ್
Team Udayavani, Dec 24, 2023, 4:42 PM IST
ನಂಜನಗೂಡು: ಹಾಲಿ ಶಾಸಕರು (ದರ್ಶನ್ ಧ್ರುವ ನಾರಾಯಣ್) ಪರೋಕ್ಷವಾಗಿ ನಮ್ಮ ಅಭ್ಯರ್ಥಿಯ ಪರವಾಗಿ ಮತ ಯಾಚನೆ ಮಾಡುತ್ತಿದ್ದು, ನೂರಕ್ಕೆ ನೂರು ನಾವು ಗೆಲ್ಲುತ್ತೇವೆ ಎಂದು ಮಾಜಿ ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ.
ಭಾನುವಾರ ತಮ್ಮ ಕಾರ್ಯಕರ್ತರು ಮತ್ತು ಬೆಂಬಲಗಳೊಂದಿಗೆ 20ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಅತ್ತಿಖಾನೆ ಪರವಾಗಿ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾತನಾಡಿದರು. ವ್ಯಕ್ತಿ ಮತ್ತು ವ್ಯಕ್ತಿತ್ವ ನೋಡಿಕೊಂಡು ಮತ ನೀಡಿ. ಹಾಲಿ ಶಾಸಕರು 20ನೇ ವಾರ್ಡ್ ನಲ್ಲಿ ಮತಯಾಚನೆ ಸಮಯದ ನಮ್ಮಅಭ್ಯರ್ಥಿ ಮಹೇಶ್ ಅತ್ತಿ ಖಾನೆಯ ವ್ಯಕ್ತಿತ್ವ ಬಹಳ ಚೆನ್ನಾಗಿದೆ ಎಂದಿದ್ದಾರೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಷನ್ ನೀಡುತ್ತಾರೆ, ವಕೀಲರಾಗಿ ಹಲವು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಅಭ್ಯರ್ಥಿಯ ಪರವಾಗಿ ಪರೋಕ್ಷವಾಗಿ ಹಾಲಿ ಶಾಸಕರು ಪ್ರಚಾರ ಮಾಡುತ್ತಿದ್ದು, ನಾವು ಈಗಾಗಲೇ ಗೆದ್ದಿದ್ದೇವೆ. ಅಂತರ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಕಾಯುತ್ತಿದ್ದೇವಷ್ಟೇ ಎಂದರು.
ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ನಾನು ತಂದಿದ್ದ 800 ಕ್ಕೂ ಅಧಿಕ ಕೋಟಿ ರೂಗಳ ಕಾಮಗಾರಿಗಳ ಉದ್ಘಾಟನೆ ಈಗ ನಡೆಯುತ್ತಿದೆ. ಬಹಳ ಸಂತೋಷವಾಗಿದೆ ಇನ್ನು 2 ವರ್ಷಗಳು ನಾನು ತಂದಿದ್ದ ಅನುದಾನದ ಕಾರ್ಯಗಳು ನಡೆಯುತ್ತಿದೆ ಮತ್ತು ಉದ್ಘಾಟನೆಗೊಳ್ಳುತ್ತಿದೆ. ಇತ್ತೀಚೆಗೆ ಕೌಲಂದೆಯಲ್ಲಿ ಉದ್ಘಾಟನೆಗೊಂಡ ಪೊಲೀಸ್ ಠಾಣೆಯೂ ನಾನು ನೀಡಿದ ಅನುದಾನದಲ್ಲೇ ನಿರ್ಮಾಣಗೊಂಡಿದ್ದು ಎಂದರು.
ಹಿಜಾಬ್ ವಿಚಾರ ಶಾಲೆಯಲ್ಲಿ ಓದುವ ಮಕ್ಕಳಿಗೆ ಜಾತಿ, ಧರ್ಮಗಳನ್ನು ಮೇಲು- ಕೀಳು, ಬಡವ- ಸಾಹುಕಾರ ಎಂಬ ಬೇದ ಭಾವ ಇರಬಾರದು. ಎಲ್ಲರೂ ಸಮಾನರು ಎಂಬುದನ್ನು ನಾವು ಅವರಿಗೆ ಹೇಳಿಕೂಡಬೇಕು ಎಂದರು.
ಪ್ರಾಚಾರದ ಸಂದರ್ಭದಲ್ಲಿ ನಂಜನಗೂಡು ಮಹೇಶ್ ಅತ್ತಿಖಾನೆ, ಬಿಜೆಪಿ ಪಟ್ಟಣ ಅಧ್ಯಕ್ಷ ಶ್ರೀನಿವಾಸ್ ರೆಡಿ, ಮದುರಾಜ್, ಎನ್ ಸಿ ಬಸವಣ್ಣ, ಅನಂದ, ಮಹೇಶ್ ಕುಮಾರ್, ವಿನಯ್ ಕುಮಾರ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.