ಬಿಜೆಪಿ ನಡೆ ಖಂಡಿಸಿ ಕಾರ್ಯಕರ್ತರ ಆಕ್ರೋಶ


Team Udayavani, Aug 21, 2022, 3:05 PM IST

ಬಿಜೆಪಿ ನಡೆ ಖಂಡಿಸಿ ಕಾರ್ಯಕರ್ತರ ಆಕ್ರೋಶ

ಕೆ.ಆರ್‌.ನಗರ: ನೆರೆ ಪ್ರವಾಹ ವೀಕ್ಷಣೆಗಾಗಿ ಕೊಡಗು ಜಿಲ್ಲೆಗೆ ಭೆಟಿ ನೀಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಗುರುವಾರ ಮೊಟ್ಟೆ ಎಸೆದು ಕಪ್ಪು ಬಟ್ಟೆ ಪ್ರದರ್ಶಿಸಿ ಅಗೌರವ ತೋರಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರ ನಡೆ ಖಂಡಿಸಿ ಮತ್ತು ಸರ್ಕಾರದ ಭದ್ರತಾ ವೈಫ‌ಲ್ಯದ ವಿರುದ್ಧ ಸಾಲಿಗ್ರಾಮ ಮತ್ತು ಕೆ.ಆರ್‌.ನಗರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪುರಸಭೆ ವೃತ್ತದಲ್ಲಿ ಎರಡೂ ಬ್ಲಾಕ್‌ ಗಳ ಪದಾಧಿಕಾರಿಗಳು, ವಿವಿಧ ಚುನಾಯಿತ ಜನಪ್ರತಿನಿಧಿಗಳು, ಮುಖಂಡರು, ಕಾರ್ಯ ಕರ್ತರು ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಿ.ರವಿಶಂಕರ್‌ ನೇತೃತ್ವದಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಬಿಜೆಪಿ ಕಾರ್ಯಕರ್ತರ ಗೂಂಡಾ ವರ್ತನೆಯನ್ನು ಖಂಡಿಸಿದರು. ಆ ನಂತರ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ರಸ್ತೆತಡೆ ನಡೆಸಿದ ಪ್ರತಿಭಟಿಸಿದರು.

ಇದರಿಂದ ರಸ್ತೆಯುದ್ದಕ್ಕೂ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಕೆಲಹೊತ್ತು ಪಟ್ಟಣದ ವಾಣಿ ವಿಲಾಸ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತು.  ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್‌ ಮಾತನಾಡಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಜನ ಪ್ರಿಯತೆಯನ್ನು ಸಹಿಸದ ಆರ್‌ಎಸ್‌ಎಸ್‌ ಮತ್ತು ಕೆಲ ಹಿಂದೂಪರ ಸಂಘಟನೆಗಳ ಮುಖಂಡರ ಕುತಂತ್ರದಿಂದ ಈ ಅಮಾನವೀಯ ಕೃತ್ಯ ನಡೆದಿದ್ದು, ಇದನ್ನು ತಡೆಯುವಲ್ಲಿ ವಿಫ‌ಲರಾಗಿರುವ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಸಿದ್ದರಾಮಯ್ಯನವರ ಮೇಲೆ ನಡೆಸಿರುವ ಘಟನೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ಸರ್ಕಾರ ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಜತೆಗೆ ಪೊಲೀಸರ ವೈಫ‌ಲ್ಯವೇ ಘಟನೆಗೆ ಪ್ರಮುಖ ಕಾರಣವಾಗಿದ್ದು, ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಇನ್ನಿತರ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್‌ಸ್ವಾಮಿ, ಸದಸ್ಯರಾದ ಶಿವಕುಮಾರ್‌, ಸೈಯದ್‌ಸಿದ್ದಿಕ್‌, ಜಾವೀದ್‌ಪಾಷಾ, ಮಾಜಿ ಅಧ್ಯಕ್ಷರಾದ ತಮ್ಮನಾ ಯಕ, ಗೀತಾಮಹೇಶ್‌, ಜಿಪಂ ಮಾಜಿ ಸದಸ್ಯ ರಾದ ಮಾರ್ಚಹಳ್ಳಿಶಿವರಾಮು, ಜಿ.ಆರ್‌. ರಾಮೇ ಗೌಡ, ತಾಪಂ ಮಾಜಿ ಉಪಾಧ್ಯಕ್ಷ ಉಮೇಶ್‌, ಎಪಿಎಂಸಿ ಮಾಜಿ ನಿರ್ದೇಶಕರಾದ ಎಚ್‌.ಪಿ.ಪ್ರಶಾಂತ್‌ಜೈನ್‌, ಎಚ್‌.ಎಚ್‌ .ನಾಗೇಂದ್ರ, ಟಿಎಪಿಸಿಎಂಎಸ್‌ ನಿರ್ದೇಶಕ ಎಸ್‌. ಸಿದ್ದೇಗೌಡ, ಕಾಂಗ್ರೆಸ್‌ ಮುಖಂಡರಾದ ಮಹೇಶ್‌, ಸಿ.ಪಿ. ರಮೇಶ್‌ಕುಮಾರ್‌, ಜೆ.ಶಿವಣ್ಣ, ಹೊಸೂರುಕಲ್ಲ ಹಳ್ಳಿಶ್ರೀನಿವಾಸ್‌, ರಾಮಾಚಾರಿ, ಮಹದೇವ, ನಂದೀಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಉದ ಯಶಂಕರ್‌, ಎಂ.ಎಸ್‌.ಮಹದೇವ, ತಾಲೂಕು ವಕ್ತಾರ ಸೈಯದ್‌ಜಾಬೀರ್‌, ಸಾಲಿಗ್ರಾಮ ತಾ. ಕಾನೂನು ಸಲಹಾ ಸಮಿತಿ ಅಧ್ಯಕ್ಷ ವಕೀಲ ಬಿ.ಎಂ. ಮೂರ್ತಿ, ಸಾಮಾಜಿಕ ಜಾಲತಾಣದ ಪದಾಧಿಕಾರಿಗಳಾದ ಸರಿತಾಜವರಪ್ಪ, ಪುನೀತ್‌, ಹರಂಬಳ್ಳಿನವೀನ್‌ಕುಮಾರ, ಬೆನಕದ್ದರು.

ಟಾಪ್ ನ್ಯೂಸ್

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

18ನೇ ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ

Odisha: ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

3

Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ

2

Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.