ಗೆಲ್ಲುವ ಕುದುರೆಗೆ ಕಾಂಗ್ರೆಸ್ ಟಿಕೆಟ್
Team Udayavani, Dec 29, 2017, 1:14 PM IST
ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಇನ್ನೊಮ್ಮೆ ಬರಬೇಕಿದ್ದು ಅದಕ್ಕಾಗಿ ಪ್ರತಿ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಗೆ ಮಾತ್ರ ಟಿಕೆಟ್ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ನಗರದ ಕೆಎಚ್‌ಬಿ ಕಾಲೋನಿಯ ತಮ್ಮ ಗೃಹ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರು, ತಮ್ಮ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದರು.
ಬದಲಾಗುತ್ತಿರುವ ಸ್ಥಿತಿಯಲ್ಲಿ ಬಿಜೆಪಿ ಪ್ರಭಾವ ಕ್ಷೀಣಿಸುತ್ತಿದ್ದು ಕಾಂಗ್ರೆಸ್ ಟಿಕೆಟ್ ಪಡೆಯಲು ಗೆಲುವೇ ಮಾನದಂಡ. ತಾನೂ ಸೇರಿದಂತೆ ರಾಜ್ಯದ ಯಾವ ನಾಯಕರಿಗೂ ನಿರ್ದಿಷ್ಟವಾದ ಕ್ಷೇತ್ರ ಘೋಷಣೆಯಾಗಿಲ್ಲ. ವರಿಷ್ಠರು ಗೆಲ್ಲ ಬಹುದಾದ ಅಭ್ಯರ್ಥಿಗಳಿಗಾಗಿ ತಮ್ಮದೇ ಮೂಲಗಳಿಂದ ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ಯಾರೂ ನಾನೇ ಅಭ್ಯರ್ಥಿ ಎಂದು ಹೇಳುವ ಸ್ಥಿತಿ ಈಗಿಲ್ಲ ಎಂದರು.
ನಂಜನಗೂಡಿನಲ್ಲಿ ನೀವೇ ನಿಲ್ಲಿ ಎಂದ ಕಾರ್ಯಕರ್ತರ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ನಂಜನಗೂಡು ಸೇರಿದಂತೆ ನಾಗಮಂಗಲ, ಸಿ.ವಿ.ರಾಮನ್ ನಗರ, ಹಾಗೂ ರಾಜ್ಯದ ಹಲವು ಕಡೆಗಳಿಂದ ಸ್ಪರ್ಧಿಸಲು ಕಾರ್ಯಕರ್ತರು ಒತ್ತಾಯಿಸುತ್ತಿರುವುದು ಸತ್ಯ. ಆದರೆ, ಪಕ್ಷದ ಅಣತಿಯಂತೆ ಟಿಕೆಟ್ ಹಂಚಿಕೆಯಾಗಲಿದೆ. ನಂಜನಗೂಡು ಆಗಬಹುದು, ಅಥವಾ ಬೇರಾವುದಾದರೂ ಆಗಬಹುದು ಎನ್ನುತ್ತಾ ಹಾಲಿ ಶಾಸಕ ಕಳಲೆಕೇಶವ ಮೂರ್ತಿ ಅವರ ತಲೆ ಬಿಸಿಗೆ ಕಾರಣವಾದರು.
ಕಾಂಗ್ರೆಸ್ ಈ ಬಾರಿ 132 ರಿಂದ 135 ಸ್ಥಾನ ಗೆಲ್ಲಲಿದ್ದು ಮತ್ತೂಮ್ಮೆ ಅಧಿಕಾರ ನಮ್ಮದೇ. ಚುನಾವಣಾ ಪೂರ್ವ ವರದಿಗಳು ಕಾಂಗ್ರೆಸ್ ಗೆಲ್ಲಲು ಉತ್ತಮ ಅವಕಾಶವಿರುವುದಾಗಿ ತಿಳಿಸಿವೆ. ಇದನ್ನು ಪರಿಗಣಿಸಿರುವ ಹೈಕಮಾಂಡ್ ಶೀಘ್ರದಲ್ಲೇ ಟಿಕೆಟ್ ಹಂಚಿಕೆ ಮಾಡಲಿದೆ ಎಂದು ಹೇಳಿದರು. ಯುವ ಮುಖಂಡ ಇಂಧನ್ ಬಾಬು, ಕೆಪಿಸಿಸಿ ಸದಸ್ಯ ಅಕರ್ ಅಲಿ,
ಜಿಪಂ ಮಾಜಿ ಸದಸ್ಯರಾದ ಕೆ.ಬಿ.ಸ್ವಾಮಿ, ಶಶಿರೇಖಾ, ಪುಟ್ಟಸ್ವಾಮಿ, ಕುರಿ ಹುಂಡಿ ಮಹೇಶ್, ದೇಬೂರು ಸಿದ್ದಲಿಂಗಪ್ಪ, ಗಿರೀಶ್, ಕೃಷ್ಣ ಮತ್ತಿತರರಿದ್ದರು. ಈ ವೇಳೆ ಶಾಸಕ ಕಳಲೆ ಕೇಶವಮೂರ್ತಿ ಹಾಗೂ ಸಂಸದ ಆರ್.ಧ್ರುವನಾರಾಯಣರೊಂದಿಗೆ ಗುರುತಿಸಿಕೊಂಡಿರುವವರ್ಯಾರೂ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಮಗನಿಗೆ ಟಿಕೆಟ್, ಈ ಬಾರಿ ನೋಡೋಣ…: ನೀವೇ ಇಲ್ಲಿ ಚುನಾವಣೆ ಎದುರಿಸಿ ಇಲ್ಲವಾದರೆ ಪುತ್ರ ಸುನಿಲ್‌ಬೋಸ್‌ರಿಗಾದರೂ ಅವಕಾಶ ಮಾಡಿಕೊಡಿ ಎಂದು ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದರು. ಈ ವೇಳೆ ಸಚಿವರು ಮಾತನಾಡಿ, ತಮ್ಮ ಮಗ ಸುನಿಲ್ ಬೋಸ್ ಚುನಾವಣೆಗೆ ಸ್ಪರ್ಧಿಸಲು ಎಲ್ಲಾ ಸಿದ್ಧತೆಗಳನ್ನು ಆರಂಭಿಸಿದ್ದಾರೆ.
ಟಿಕೆಟ್ ಘೋಷಣೆಯಾಗುವುದೊಂದೇ ಬಾಕಿ ಎಂದು ಹೇಳಿದರು. ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದ. ಆದರೆ, ಆಗ ಬದಲಾದ ಸನ್ನಿವೇಶದಲ್ಲಿ ಹಿರಿತನ-ಕಿರಿತನವೆಂಬ ಜಿಜಾnಸೆ ಉಂಟಾಗಿ ಅಂತಿಮವಾಗಿ ಟಿಕೆಟ್ ಬೇರೊಬ್ಬರಿಗೆ ನೀಡಲಾಯಿತು. ಈ ಬಾರಿ ನೋಡೋಣ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ
Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು
Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!
Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.