ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಹಣಾಹಣಿ
ಪುರಸಭಾ ಚುನಾವಣೆ ಕೆಲವು ವಾರ್ಡ್‌ಗಳಲ್ಲಿ ಪಕ್ಷೇತರ, ಬಿಜೆಪಿ ಅಭ್ಯರ್ಥಿಗಳಿಂದಲೂ ಪ್ರಬಲ ಸ್ಪರ್ಧೆ
Team Udayavani, May 27, 2019, 9:47 AM IST
ಪಟ್ಟಣದ ಪುರಸಭೆ ಕಾರ್ಯಾಲಯದ ಕಟ್ಟಡ.
ಕೆ.ಆರ್.ನಗರ: ಪುರಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ನಗರದ 23 ವಾಡ್‌ಗಳಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಎಲ್ಲ 23 ವಾರ್ಡ್‌ಗಳಿಂದ ಒಟ್ಟು 92 ಅಭ್ಯರ್ಥಿಗಳು ಕಣದಲ್ಲಿದ್ದು, ಮತ ಗಳಿಕೆಗಾಗಿ ಕಸರತ್ತು ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂದಿ ಅನ್ನಿಸಿದರೂ, ಬಹುತೇಕ ವಾರ್ಡ್‌ಗಳಲ್ಲಿ ಎರಡು ಪಕ್ಷಗಳ ತೀವ್ರ ಹಣಾಹಣಿ ಇದೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ದೋಸ್ತಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆಯೇ ಇಲ್ಲಿನ ಬಹುತೇಕ ವಾರ್ಡ್‌ಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟಿರುವುದು ವಿಶೇಷ.
ಕೆ.ಆರ್.ನಗರ ಪುರಸಭೆಯ ಇತಿಹಾಸ ಗಮನಿಸಿದರೆ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ನಡುವೆಯೇ ಸಾಕಷ್ಟು ಪೈಪೋಟಿ ನಡೆದಿದೆ. ಕೆಲವು ವಾರ್ಡ್ ಗಳಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿಗಳು ಹಾಗೂ ಬಿಜೆಪಿ ಅಭ್ಯರ್ಥಿಗಳು ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ.
•1ನೇ ವಾರ್ಡ್: ಜೆಡಿಎಸ್ ಅಭ್ಯರ್ಥಿ ನಾಗಮ್ಮ, ಕಾಂಗ್ರೆಸ್ ಅಭ್ಯರ್ಥಿ ಪಲ್ಲವಿ ಆನಂದ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಹದೇವಮ್ಮ ಸ್ಪರ್ಧಿಸಿದ್ದು, ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ಕಂಡುಬಂದಿದೆ.
•2ನೇ ವಾರ್ಡ್: ಕೇಶವ್(ಜೆಡಿಎಸ್), ಕೋಳಿ ಪ್ರಕಾಶ್ (ಕಾಂಗ್ರೆಸ್), ಗೋವಿಂದರಾಜು (ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬಸವರಾಜ್, ಮಂಜು ಜಿ.ಪಿ.ಗೌಡ ಸ್ಪರ್ಧಿಸಿ ದ್ದಾರೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಕಾಂಗ್ರೆಸ್ ಬಂಡಾಯ ಬಸವರಾಜ್ ನಡುವೆ ತ್ರಿಕೋನ ಸ್ಪರ್ಧೆ ಕಂಡು ಬಂದರೆ,
•3ನೇ ವಾರ್ಡ್: ಕೆ.ಎಲ್.ಜಗದೀಶ್(ಜೆಡಿಎಸ್), ಹೇಮಂತ್ ಕುಮಾರ್(ಕಾಂಗ್ರೆಸ್), ನಟೇಶ್ (ಬಿಜೆಪಿ) ಸ್ಪರ್ಧಿಸಿದ್ದು, ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ಇದೆ.
•4ನೇ ವಾರ್ಡ್: ಶ್ರುತಿ (ಜೆಡಿಎಸ್), ಅಶ್ವಿನಿ (ಕಾಂಗ್ರೆಸ್), ವನಜ ಸಾ.ರಾ.ರಮೇಶ್ (ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕಮಲಮ್ಮ ಸ್ಪರ್ಧಿಸಿದ್ದು, ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ.
•5ನೇ ವಾರ್ಡ್: ಮಾಗಾಳಿ(ಜೆಡಿಎಸ್), ಶಂಕರ್ (ಕಾಂಗ್ರೆಸ್), ರಂಗಸ್ವಾಮಿ(ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಂಜುಂಡ, ಮುರುಗೇಶ, ರಾಜು ಸ್ಪರ್ಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿ ನಂಜುಂಡ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
•6ನೇ ವಾರ್ಡ್: ರೇಖಾ ಉಮೇಶ್ (ಜೆಡಿಎಸ್), ವಸಂತಮ್ಮ (ಕಾಂಗ್ರೆಸ್), ಎನ್.ಪಿ. ರಂಜಿತ (ಬಿಜೆಪಿ) ಸ್ಪರ್ಧಿಸಿದ್ದು, ಕಾಂಗ್ರೆಸ್ – ಜೆಡಿಎಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ.
•7ನೇ ವಾರ್ಡ್: ಎಂ.ಸಂತೋಷ್ (ಜೆಡಿಎಸ್), ಕೆ.ಎನ್.ಪ್ರಸನ್ನ (ಕಾಂಗ್ರೆಸ್), ರುಕ್ಮಾಂಗದ (ಬಿಜೆಪಿ) ಸ್ಪರ್ಧಿಸಿದ್ದು, ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳ ನಡುವೆ ನಡುವೆಯೇ ನೇರ ಸ್ಪರ್ಧೆ ನಡೆಯುತ್ತಿದೆ.
•8ನೇ ವಾರ್ಡ್: ಎಂ.ಜೆ.ರವಿ(ಜೆಡಿಎಸ್), ಶಿವಕುಮಾರ್(ಕಾಂಗ್ರೆಸ್), ಪುಟ್ಟಸ್ವಾಮಿ(ಬಿಜೆಪಿ) ಸ್ಪರ್ಧಿಸಿದ್ದು, ಕಾಂಗ್ರೆಸ್, ಜೆಡಿಎಸ್ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ.
•9ನೇ ವಾರ್ಡ್: ಭಾಗ್ಯಲಕ್ಷ್ಮೀ ಸುಬ್ರಮಣ್ಯ (ಜೆಡಿಎಸ್), ಶಾರದಾ ನಾಗೇಶ್(ಕಾಂಗ್ರೆಸ್), ಸುನಂದಮ್ಮ(ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ರಾಜಮ್ಮ ಸ್ಪರ್ಧಿಸಿದ್ದು, ಎಂ.ಜೆ.ರವಿ ಮತ್ತು ಶಿವಕುಮಾರ್ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ.
•10ನೇ ವಾರ್ಡ್: ಉಮೇಶ್(ಜೆಡಿಎಸ್), ಕೆ.ಎಲ್.ಜಯರಾಮ್(ಕಾಂಗ್ರೆಸ್), ಮೋಹನ್ ಕುಮಾರ್ (ಬಿಜೆಪಿ) ಸ್ಪರ್ಧಿಸಿದ್ದು, ಉಮೇಶ್ ಮತ್ತು ಕೆ.ಎಲ್.ಜಯರಾಮ್ ನಡುವೆ ಸ್ಪರ್ಧೆ ಎದುರಾಗಿದೆ.
•11ನೇ ವಾರ್ಡ್: ಸಂಜೀವ್ ಕುಮಾರ್(ಜೆಡಿಎಸ್), ಕೆ.ಜಿ. ಸುಬ್ರಮಣ್ಯ(ಕಾಂಗ್ರೆಸ್), ಕೆ.ಎಸ್. ಶಿವಪ್ರಸಾದ್(ಬಿಜೆಪಿ) ಸ್ಪರ್ಧಿಸಿದ್ದು, ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳ ನಡುವೆ ನಡುವೆಯೇ ನೇರ ಸ್ಪರ್ಧೆ ನಡೆಯುತ್ತಿದೆ.
•12ನೇ ವಾರ್ಡ್: ಕೆ.ವಿ.ವಿಜಯ್(ಜೆಡಿಎಸ್), ಶಂಕರ್ (ಕಾಂಗ್ರೆಸ್), ಕೆ.ಎಸ್.ಉಮಾಶಂಕರ್(ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ರಾಜು, ಜಿ.ವಿವೇಕ್‌ಗೌಡ ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿ ವಿವೇಕ್ ಗೌಡ ನಡುವೆ ಚತುಷ್ಕೋನ ಸ್ಪರ್ಧೆ ಕಂಡು ಬಂದಿದೆ.
•13ನೇ ವಾರ್ಡ್: ಜೆಡಿಎಸ್‌ನಿಂದ ಬಿ.ಎಸ್.ತೊಂಟದಾರ್ಯ, ಕಾಂಗ್ರೆಸ್‌ನಿಂದ ಎಂ.ಸುಂದರೇಶ್ ಹಾಗೂ ಬಿಜೆಪಿಯಿಂದ ಶಿವರಾಜು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಇಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬಂದರೂ ಕಾಂಗ್ರೆಸ್ -ಜೆಡಿಎಸ್ ನಡುವೆಯೇ ನೇರ ಹಣಾಹಣಿ ಎದುರಾಗಿದೆ.
•14ನೇ ವಾರ್ಡ್: ಮಂಜುಳ ಚಿಕ್ಕವೀರು (ಜೆಡಿಎಸ್), ನಳಿನಿ(ಕಾಂಗ್ರೆಸ್), ಪದ್ಮಾವತಿ (ಬಿಜೆಪಿ) ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ – ಜೆಡಿಎಸ್ ನಡುವೆ ಸ್ಪರ್ಧೆ ಎದುರಾಗಿದೆ.
•15ನೇ ವಾರ್ಡ್: ಸಿ.ಎನ್.ದೀಪು ಹರೀಶ್(ಜೆಡಿಎಸ್), ಅಂಬಿಕಾ ಮಹದೇವ್(ಕಾಂಗ್ರೆಸ್), ಕೆ.ಬಿ.ವೀಣಾ (ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿ ಗಳಾಗಿ ಕೆ.ವಿ.ಶೀಲ ಸ್ಪರ್ಧಿಸಿದ್ದು, ಇಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿ ಗಳು ನಡುವೆ ತ್ರಿಕೋನ ಸ್ಪರ್ಧೆ ಕಾಣುತ್ತಿದೆ.
•16ನೇ ವಾರ್ಡ್: ಕೆ.ಪಿ.ಪ್ರಭುಶಂಕರ್(ಜೆಡಿಎಸ್), ನಾಗರಾಜು (ಕಾಂಗ್ರೆಸ್), ಕೆ.ವಿ. ಅರವಿಂದ (ಬಿಜೆಪಿ) ಹಾಗೂ ಪುರಸಭೆ ಮಾಜಿ ಅಧ್ಯಕ್ಷೆ ಬಿ.ಎಸ್.ಹರ್ಷಲತಾ ಶ್ರೀಕಾಂತ್ ಪತಿಯೂ ಆದ ಮಾಜಿ ಸದಸ್ಯ ರಾ.ಜ.ಶ್ರೀಕಾಂತ್ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. ಇಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿ ರಾ.ಜ.ಶ್ರೀಕಾಂತ್ ನಡುವೆ ತ್ರಿಕೋನ ಸ್ಪರ್ಧೆ ಕಾಣುತ್ತಿದೆ.
•17ನೇ ವಾರ್ಡ್: ಎಚ್.ಜಿ.ಮಂಜುನಾಥ್(ಜೆಡಿಎಸ್), ನಟರಾಜು ಎಸ್.ಮಾಲೇಗೌಡ (ಕಾಂಗ್ರೆಸ್) ಹಾಗೂ ಪುರಸಭೆ ಮಾಜಿ ಅಧ್ಯಕ್ಷ ತಮ್ಮ ನಾಯಕ, ಎಂ.ಜೆ.ಮನೋಹರ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ತಮ್ಮ ನಾಕಯ ನಡುವೆ ತ್ರಿಕೋನ ಸ್ಪರ್ಧೆ ಕಂಡು ಬಂದಿದೆ.
•18ನೇ ವಾರ್ಡ್: ಮಹೀದಾಬಾನು ಫರೊಖ್ (ಜೆಡಿಎಸ್), ಹಸೀನಾ ಬಾನು (ಕಾಂಗ್ರೆಸ್), ಗುಲಾಷ್ ಬಾನು(ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮುತಾಹಿರ ಬಾನು, ನಜಿಮುನ್ನಿಸಾ ಸ್ಪರ್ಧಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ.
•19ನೇ ವಾರ್ಡ್: ಸೈಯದ್ ಅಸ್ಲಂ (ಜೆಡಿಎಸ್), ಸೈಯದ್ ಸಿದ್ಧಕ್(ಕಾಂಗ್ರೆಸ್), ಅಖ್ಮಲ್ ಪಾಷ್(ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಅಪ್ಸರ್, ಆಯಾಜ್ ಪಾಷ, ಖಾಲೀಫ್ ಪಾಷ, ಕೆ.ಆರ್.ನಾಗರಾಜು, ಮೊಹ ಮ್ಮದ್ ಫೈಯಾಜ್, ಮುಯೀನ್ ಷರೀಫ್ ಸ್ಪರ್ಧಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ಗಳ ನಡುವೆ ನೇರ ಸ್ಪರ್ಧೆ ಕಂಡು ಬಂದಿದೆ.
•20ನೇ ವಾರ್ಡ್: ತಾಹಸೀನ ಬೇಗಂ (ಜೆಡಿಎಸ್), ಅಪ್ರೋಜ್ ಉನ್ನೀಸ(ಕಾಂಗ್ರೆಸ್), ರಿಜ್ವಾನ್ ಬಾನು(ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಶಬೀನಾ ಕೌಸರ್, ಅಮ್ರೀನ್ ಸ್ಪರ್ಧಿಸಿದ್ದು, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ನಡುವೆಯೇ ಸ್ಪರ್ಧೆ ಕಂಡು ಬಂದಿದೆ.
•21ನೇ ವಾರ್ಡ್: ಜಾವೀದ್ ಪಾಷ (ಜೆಡಿಎಸ್), ಜಾಮಿದ್ ಪಾಷ (ಕಾಂಗ್ರೆಸ್), ಸಮೀವುಲ್ಲ ಖಾನ್ (ಬಿಜೆಪಿ) ಸ್ಪರ್ಧಿಸಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷದ ನಡುವೆಯೇ ಸ್ಪರ್ಧೆ ಎದು ರಾಗಿದೆ.
•22ನೇ ವಾರ್ಡ್: ಅನಿತಾ ಮಂಜು (ಜೆಡಿಎಸ್), ಸೌಮ್ಯ ಲೋಕೇಶ್(ಕಾಂಗ್ರೆಸ್), ಎಂ.ಡಿ. ದೀಪಿಕಾ (ಬಿಜೆಪಿ) ಸ್ಪರ್ಧಿಸಿದ್ದು, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ಸ್ಪರ್ಧೆ ಕಂಡು ಬಂದಿದೆ.
•23ನೇ ವಾರ್ಡ್: ಸರೋಜ (ಜೆಡಿಎಸ್), ಪೂರ್ಣಿಮಾ (ಕಾಂಗ್ರೆಸ್), ಪುಟ್ಟ ನವೀನಾ (ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮನ್ ರವಿಕುಮಾರ್ ಕಣದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿ ಸುಮನ್ ರವಿಕುಮಾರ್ ನಡುವೆ ತ್ರಿಕೋನ ಸ್ಪರ್ಧೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.