ಮೈಸೂರು ವಿವಿಯನ್ನು ಸಂಶೋಧನಾ ವಿವಿ ಎಂದು ಪರಿಗಣಿಸಿ
ವಿವಿ ಪರಿಣಿತರು ರಚಿಸಿರುವ "ಕೋವಿಡ್-19'ಕೃತಿ ಬಿಡುಗಡೆ
Team Udayavani, Oct 6, 2020, 12:51 PM IST
ಮೈಸೂರು: ಮೈಸೂರು ವಿಶ್ವವಿದ್ಯಾಲಯ 100 ವರ್ಷದಲ್ಲಿ ಅನೇಕ ಸಂಶೋಧನೆಗಳನ್ನು ಹೊರ ತಂದಿದೆ. ಹೀಗಾಗಿ, ಮೈಸೂರು ವಿವಿಯನ್ನು ಸಂಶೋಧನಾ ವಿವಿ ಎಂದು ಪರಿಗಣಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಹೇಳಿದರು.
ಮೈಸೂರುವಿವಿವಿಜ್ಞಾನಭವನದಲ್ಲಿ ಸೋಮವಾರ ಹಲವು ವಿವಿಗಳ ಪರಿಣಿತರು ಸೇರಿ ಹೊರತಂದ “ಕೋವಿಡ್-19′ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮೈಸೂರು ವಿವಿಯು ಈಗಿರುವ ಶೇ.48 ಸಿಬ್ಬಂದಿಯಲ್ಲಿಯೇ ಸಂಶೋಧನೆಯಲ್ಲಿ 27 ಶ್ರೇಣಿ ಪಡೆದುಕೊಂಡಿದೆ. ಶೇ.100 ಸಿಬ್ಬಂದಿ ನೀಡಿದರೆ ಖಂಡಿತವಾಗಿ ಸಂಶೋಧನೆಯಲ್ಲಿ ಮತ್ತಷ್ಟು ಉತ್ತಮ ಶ್ರೇಣಿಯನ್ನು ಗಳಿಸುತ್ತದೆ ಎಂದರು.
ಸಂಶೋಧನೆಗೆ ಒತ್ತು: ಬೇರೆ ದೇಶಗಳಲ್ಲಿ ವಿಜ್ಞಾನ ಸಂಶೋಧನೆಗೆ ಒತ್ತು ನೀಡಲಾಗಿದೆ. ಆದರೆ, ನಮ್ಮ ದೇಶದಲ್ಲಿ ಸಂಶೋಧನೆಗೆ ಹೆಚ್ಚಿನ ಹಣ ನೀಡಿಲ್ಲ. ಸಂಶೋಧಕರು ಕಡಿಮೆಯಿದ್ದಾರೆ. ಹೀಗಾಗಿಯೂ, ಭಾರತವು ಸಂಶೋಧನೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ಅಗತ್ಯವಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಶೋಧನೆಗೆ ಮತ್ತಷ್ಟು ಒತ್ತು ನೀಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಮೈಸೂರು ವಿವಿ 104ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅನೇಕ ಸಂಶೋಧನೆಗಳನ್ನು ನಡೆಸಿದೆ. ಈ ಎಲ್ಲಾ ಸಂಶೋಧನೆಗಳ ನಡುವೆಯೂ ಕೊರೊನಾ ತಡೆಗಟ್ಟಲು, ಅದರಿಂದ ರಕ್ಷಿಸಿಕೊಳ್ಳುವ ಸಂಶೋಧನೆಯಲ್ಲಿ ವಿಶ್ವವೇ ಸೋತಿದೆ. ಮಾನವರು ವಿಜ್ಞಾನದ ಎಲ್ಲಾ ಅಂಶಗಳನ್ನು ಅರಿಯಬಹುದು. ಆದರೆ, ಅದನ್ನು ನಿಯಂತ್ರಿಸುವುದು ಕಷ್ಟ. ಈ ನಿಟ್ಟಿನಲ್ಲಿ ಯಾವುದೋ ದೈವಿ ಶಕ್ತಿ ನಮ್ಮನ್ನು ನಿಯಂತ್ರಿಸುತ್ತಿದೆ ಎಂಬುದು ಕೋವಿಡ್ ಸಂಕಷ್ಟದಲ್ಲಿ ಜಗತ್ತಿಗೆ ತಿಳಿದಿದೆ ಎಂದು ತಿಳಿಸಿದರು.
ಶಾಸಕ ತನ್ವೀರ್ ಸೇs… ಮಾತನಾಡಿ, ಕೋವಿಡ್ -19 ಕೃತಿಯು ಹಲವು ವಿವಿಗಳ ಪರಿಣಿತರು ಸೇರಿ ಹೊರ ತಂದಿರುವ ಕೃತಿಯಾಗಿದೆ. ನನ್ನ ರಕ್ಷಣೆ ನಾನೇ ಮಾಡಿಕೊಳ್ಳಬೇಕು ಎಂಬ ಸತ್ಯವನ್ನುಈಪುಸ್ತಕ ತಿಳಿಸುತ್ತದೆ ಎಂದು ತಿಳಿಸಿದರು.
ಜೀವನ ಶೈಲಿ: ಕೋವಿಡ್ ವಿಶ್ವವನ್ನು ಬೆಚ್ಚಿಬೀಳಿಸಿದೆ. ಬಿರುಗಾಳಿಯನ್ನು ತಡೆಯುವಂತಹ ತಂತ್ರಜ್ಞಾನ ವಿದ್ದರೂ, ಕೋವಿಡ್ ತಡೆಗಟ್ಟುವಲ್ಲಿ ವಿಫಲರಾಗಿದ್ದೇವೆ. ಧರ್ಮಗಳು ಮನುಷ್ಯರ ಜೀವನಶೈಲಿ ಎನ್ನುವುದಾಗಿದೆ. ವಿಜ್ಞಾನ ಬಹಳ ಮುಖ್ಯವಾಗಿದ್ದು, ಇದು ಪ್ರತಿ ಮನುಷ್ಯರ ಜೀವನ ಶೈಲಿಯಾಗಬೇಕು. ಹೀಗಾದಾಗ ಮಾತ್ರವೇಈರೀತಿಯ ವೈರಸ್ ಗಳನ್ನು ತಡೆಗಟ್ಟಬಹುದು ಎಂದರು.
ವಿಜ್ಞಾನವಿಭಾಗಕ್ಕೆಹೆಚ್ಚುಒತ್ತು ನೀಡುವಮೂಲಕ ವಿದ್ಯಾರ್ಥಿಗಳಿಗೆ ಕೋವಿಡ್ ದಂತಹ ಸಮಸ್ಯೆಗಳು ಎದುರಾದಾಗ ಈ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನು ಮಾಡಬೇಕು ಎಂಬುದಾಗಿ ಅರಿವು ಮೂಡಿಸುವುದು ಬಹಳ ಮುಖ್ಯ. ವೈಯಕ್ತಿಕವಾಗಿ ನಾವು ಸುರಕ್ಷಿತವಾಗಿದ್ದರೆ, ಮತ್ತೂಬ್ಬರ ಸುರಕ್ಷತೆ ಬಯಸಲು ಸಾಧ್ಯ. ಈ ದೃಷ್ಟಿಯಲ್ಲಿ ಎಲ್ಲರೂ ಕೋವಿಡ್ ವಾರಿಯರ್ಸ್ ಗಳು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಷ್ಯಾ ಸಂಶೋಧನಾ ವಿಜ್ಞಾನಿ ಡಾ.ಸಯ್ನಾದ್ ಬೇಕರ್, ಮೈಸೂರು ವಿವಿ ಸೂಕ್ಷ ¾ ಜೀವವಿಜ್ಞಾನ ಪ್ರಾಧ್ಯಾಪಕ ಪ್ರೊ.ಡಾ.ಎಸ್.ಸತೀಶ್, ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ. ಎನ್.ನಾಗೇಂದ್ರ ಪ್ರಸಾದ್ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.