ಸಮಾಜ ಒಳಗೊಂಡಾಗ ರಂಗಭೂಮಿಗೆ ಉಳಿವು: ಡಾ.ಚೌಗಲೆ
Team Udayavani, Jan 16, 2017, 12:27 PM IST
ಮೈಸೂರು: ಸಮಾಜದಲ್ಲಿ ಜಾತಿ, ಧರ್ಮದ ಅಫೀಮು ತುಂಬುವವರಿಗೆ ರಂಗಭೂಮಿ ಪ್ರತ್ಯಸ್ತ್ರವಾಗಬೇಕು ಎಂದು ಡಾ.ಡಿ.ಎಸ್.ಚೌಗಲೆ ಹೇಳಿದರು. ರಂಗಾಯಣದ ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ವರ್ತಮಾನದ ಕರ್ನಾಟಕದಲ್ಲಿ ಕನ್ನಡ ರಂಗಭೂಮಿಯ ಪ್ರಯೋಗಗಳ ಕುರಿತು ಮಾತನಾಡಿದರು.
ಕರ್ನಾಟಕದ ಒಟ್ಟು ರಂಗಭೂಮಿಯ ಪ್ರಾಂತೀಯ ವಿಸ್ತಾರವನ್ನು ನೋಡಿದಾಗ ಇಲ್ಲಿ ಪ್ರಾಯೋಜಿತ ನಾಟಕಗಳಿವೆ. ವೃತ್ತಿ ನಾಟಕ ಕಂಪನಿಗಳಿಗೂ ಸರ್ಕಾರ ವಾರ್ಷಿಕ ಅನುದಾನ ನೀಡುತ್ತಿದೆ. ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಜನಪ್ರಿಯವಾಗಿದ್ದ ಸಣ್ಣಾಟ-ದೊಡ್ಡಾಟಗಳು ದಯನೀಯ ಸ್ಥಿತಿ ತಲುಪಿವೆ ಎಂದರು.
ರಂಗಭೂಮಿಯ ಚಟುವಟಿಕೆ ಸಮಾಜವನ್ನು ಒಳಗೊಳ್ಳಬೇಕು. ಸಮಾಜವನ್ನು ಒಳಗೊಂಡಿರುವ ಕಾರಣಕ್ಕೆ ಇಂದಿಗೂ ಯಕ್ಷಗಾನ ಪ್ರಸಂಗಗಳು ಹೆಚ್ಚು ಪ್ರದರ್ಶನ ಕಾಣುತ್ತವೆ. ರಂಗಭೂಮಿಗೆ ಆ ಪರಿಸ್ಥಿತಿ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಟಕಗಳಿಗೆ ಸಹಾಯಧನ ನೀಡದೆ ಹೋದರೆ ನಾಟಕಗಳು ನಡೆಯುವುದಿಲ್ಲ. ರಂಗಭೂಮಿ ಜನ ಆಶ್ರಿತವಾಗಬೇಕು. ಆಗ ಮಾತ್ರ ರಂಗಭೂಮಿ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಮಹಾರಾಷ್ಟ್ರದಲ್ಲಿ ರಂಗಭೂಮಿಗೆ ಅಲ್ಲಿನ ಜನ ನೀರೆಯುತ್ತಿದ್ದಾರೆ. ಇದರಿಂದ ಇಂದಿಗೂ ಅಲ್ಲಿನ ನಾಟಕ ಕಂಪನಿಗಳು ಪ್ರವರ್ಧಮಾನದಲ್ಲಿವೆ. ತಾಂತ್ರಿಕತೆ ಜತೆಗೆ ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡ ನಾಟಕಗಳನ್ನು ನೋಡಲು ಜನರು ಬರುತ್ತಾರೆ. ಜತೆಗೆ ಅಂತಹ ನಾಟಕಗಳು ಅಂತಾರಾಷ್ಟ್ರೀಯ ಮಟ್ಟಕ್ಕೂ ಹೋಗುತ್ತವೆ ಎಂದು ಹೇಳಿದರು. ಕವಿತಾ ರೈ, ಬಿ.ಎಲ್.ರಾಜು, ಗುಬ್ಬಿಗೂಡು ರಮೇಶ್ ಮಾತನಾಡಿದರು. ಡಾ.ವಿಜಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿಂದಿ ಹೇರಿ ಬಹುಭಾಷೆ ಸಂಸ್ಕೃತಿ ನಾಶಕ್ಕೆ ಹುನ್ನಾರ
ಮೈಸೂರು: ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಮೂಲಕ ಕೇಂದ್ರ ಸರ್ಕಾರ, ಭಾರತದ ಬಹು ಭಾಷಾ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿದೆ ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಭಾಷಾ ಪೀಠದ ನಿರ್ದೇಶಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ರಂಗಾಯಣ ಆಯೋಜಿಸಿರುವ ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿದರು. ಭಾರತದ ಭಾಷೆಗಳಿಗೆ ತನ್ನದೇ ಪರಂಪರೆ ಇದೆ. ಶಿಕ್ಷಣ ನೀತಿ ಮಾರ್ಪಾಡು ಮಾಡುವ ಮೂಲಕ ಈ ಪರಂಪರೆಯ ಮೇಲೆ ಕೇಂದ್ರ ಸರ್ಕಾರ ಗದಾಪ್ರಹಾರಕ್ಕೆ ಮುಂದಾಗಿದೆ.
ವಿವಿಧೆತೆಯಲ್ಲಿ ಏಕತೆ ಕಾಪಾಡಿರುವ ಭಾರತದಲ್ಲಿ ಭಾಷೆಗಳು ಉಳಿಯಬೇಕಾದರೆ ರಂಗಭೂಮಿಯ ಅಗತ್ಯತೆ ಇದೆ. ಆದ್ದರಿಂದ ಭಾಷೆಗಳನ್ನು ಉಳಿಸಿ-ಬೆಳೆಸಲು ಪ್ರಬಲ ಮಾಧ್ಯಮವಾದ ರಂಗಭೂಮಿಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. ರಂಗ ನಿರ್ದೇಶಕ ಸುರೇಶ್ ಅನಗಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಾನೂ ದೇಶಭಕ್ತ, ಆದರೆ ಉಗ್ರ ರಾಷ್ಟ್ರವಾದಿಯಲ್ಲ: ಚಂಪಾ
ಮೈಸೂರು: ನಾನು ಕೂಡ ದೇಶಭಕ್ತ. ನನಗೂ ದೇಶದ ಬಗ್ಗೆ ಭಕ್ತಿ, ಗೌರವ ಇದೆ. ಆದರೆ, ಯಾರೋ ಹೇಳಿಕೊಟ್ಟದ್ದನ್ನು ಪ್ರತಿಪಾದಿಸುವ ಉಗ್ರ ರಾಷ್ಟ್ರವಾದಿಯಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದರು. ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ ಅಂಗವಾಗಿ ಏರ್ಪಡಿಸಿದ್ದ ರಂಗಭೂಮಿ ಮತ್ತು ತಂತ್ರಜಾnನ; ಸಾಮಾಜಿಕ ಜಾಲತಾಣ ಮತ್ತು ರಂಗಭೂಮಿ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಎಂಟಿಸಿ ಬಸ್‌ಗಳಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವುಳ್ಳ ದೊಡ್ಡ ಜಾಹಿರಾತು ಫಲಕ ಅವಳಡಿಸಲಾಗಿದೆ. ಆ ಫಲಕದಲ್ಲಿ ನನ್ನ ಹಣ ಸುರಕ್ಷಿತವಾಗಿದೆ ಎಂದು ಘೋಷಣೆ ಇರುವುದು, ಯಾರ ಹಣ ಸುರಕ್ಷಿತವಾಗಿದೆ ಎಂಬ ಪ್ರಶ್ನೆಗಳೇಳುವಂತೆ ಮಾಡಿದೆ. ಮೋದಿ ಅವರ ಸರಳತೆ ನೋಡಿದರೆ, ಅವರ ಶರ್ಟಿಗೆ ಜೇಬು ಕೂಡ ಇದ್ದಂತಿಲ್ಲ. ಅವರ ಹತ್ತಿರ ಇರುವುದ್ಯಾವುದೂ ಸ್ವಂತದ್ದಲ್ಲ. ಎಲ್ಲವೂ ಅಂಬಾನಿ, ಅದಾನಿ, ಕಾರ್ಪೊರೇಟ್ ಕಪ್ಪು ಕುಳಗಳು, ಮಠ, ದೇವಸ್ಥಾನಗಳ ಹಣ. ಜತೆಗೆ ದೇಶವೇ ನಾನು ಎಂದು ತಿಳಿದುಕೊಂಡಿದ್ದಾರೆ. ಇದರಿಂದ ಅವರ ಹಣ ಸುರಕ್ಷಿತವಾಗಿದೆ ಎಂದು ಲೇವಡಿ ಮಾಡಿದರು.
ಇಂದಿರಾರಂತೆ ಮೋದಿ: ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿ ತಾವು ಬರೆದಿದ್ದ ಕವನವನ್ನು ನೆನಪಿಸಿಕೊಂಡರು. ಸರ್ವಾಧಿಕಾರಿ ನೆಲೆಯಲ್ಲಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಂತೆ ನರೇಂದ್ರ ಮೋದಿ ಕೂಡ ನೋಟು ಅಮಾನ್ಯಿàಕರಣದ ಮೂಲಕ ಆರ್‌ಬಿಐ, ವಿತ್ತ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ತುರ್ತು ಪರಿಸ್ಥಿತಿ ಹೇರಲು ಹೊರಟಂತಿದೆ ಎಂದು ಹೇಳಿದರು.
ನಾವು ಸಾಮಾಜಿಕ ಜಾಲ ತಾಣಗಳನ್ನು ಬಳಸಬೇಕಾ? ಸಾಮಾಜಿಕ ಜಾಲ ತಾಣಗಳೇ ನಮ್ಮನ್ನು ಬಳಸಬೇಕಾ? ಎಂಬ ಪ್ರಶ್ನೆ ಎದ್ದಿದೆ. ನಾವು ಜಾಗೃತರಾಗಿದ್ದರೆ, ಸಾಮಾಜಿಕ ಜಾಲ ತಾಣಗಳಿಂದ ಅನಾಹುತ ಆಗುವುದಿಲ್ಲ. ರಂಗಭೂಮಿಯಲ್ಲಿ ಮುಖಾಮುಖೀ ಬೆರೆಯುತ್ತೇವೆ. ಹೀಗಾಗಿ ಸೋಷಿಯಲ್ ಮೀಡಿಯಾ ಬಳಕೆಯನ್ನು ಕಲಿತಿಲ್ಲ. ಯುವ ಪೀಳಿಗೆಯ ಕವಿಗಳಂತು ಹಾಳೆಯ ಮೇಲೆ ಬರೆದುಕೊಂಡು ಬಂದು ಓದಿದ್ದನ್ನು ನಾನು ನೋಡಿಲ್ಲ.
ಎಲ್ಲವನ್ನೂ ಮೊಬೈಲ್‌ನಲ್ಲೇ ಮಾಡಿಕೊಂಡು ಬಂದಿರುತ್ತಾರೆ. ಹಾಗೆಂದು ನಮ್ಮಲ್ಲಿ ರಾಜಕೀಯ, ಜಾತೀ, ಧರ್ಮ, ಅಹಂಕಾರ, ಪ್ರತಿಷ್ಠೆ ಮನೆ ಮಾಡಿರುವಂತೆಯೇ ಸೋಶಿಯಲ್ ಮೀಡಿಯಾದಲ್ಲೂ ಅದಕ್ಕಿಂತ ದೊಡ್ಡ ನಿಗೂಢತೆಗಳಿವೆ. ಅಂತಹ ಭೂಗತ ನನ್ನಂತವರಿಗೆ ಒಗ್ಗಲ್ಲ ಎಂದು ಹೇಳಿದರು. ಮೇಟಿ ಮಲ್ಲಿಕಾರ್ಜುನ, ಪೊ›.ಮುಜಾಫರ್ ಅಸ್ಸಾದಿ, ಪ್ರತಿಭಾ ಸಾಗರ ಮಾತನಾಡಿದರು.ಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.