ಕಿರಿಯ ವೈದ್ಯರಿಂದ ಮುಂದುವರಿದ ಪ್ರತಿಭಟನೆ
Team Udayavani, Nov 13, 2021, 2:50 PM IST
ಮೈಸೂರು: ಕೋವಿಡ್ ಅಪಾಯದ ನಡುವೆ ಸೇವೆ ಸಲ್ಲಿಸಿದ್ದರೂ, ತಮ್ಮ ಸಂಬಳ ಮತ್ತು ಭತ್ಯೆವನ್ನು ಪೂರ್ಣವಾಗಿ ಪಾವತಿಸಿಲ್ಲ ಎಂದು ಆರೋಪಿಸಿ ಕೆ.ಆರ್.ಆಸ್ಪತ್ರೆಯ ಸ್ಥಾನಿಕ ವೈದ್ಯರು, ಕಿರಿಯ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಇಂಟರ್ನಿಗಳು ಆರಂಭಿಸಿರುವ ಮುಷ್ಕರ ಶುಕ್ರವಾರ 2ನೇ ದಿನಕ್ಕೆ ಕಾಲಿಟ್ಟಿತು.
ಶುಕ್ರವಾರವೂ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ ನೇತೃತ್ವದಲ್ಲಿ ಧರಣಿ ಮುಂದುವರಿಸಿದ ಪ್ರತಿಭನಾಕಾರರು ಕೆ.ಆರ್.ಆಸ್ಪತ್ರೆ ಆಸ್ಪತ್ರೆ ಆವರಣದಿಂದ ಇರ್ವಿನ್ ರಸ್ತೆ, ಜೆಎಲ್ಬಿ ರಸ್ತೆ, ವಿನೋಬ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೋವಿಡ್ ಭತ್ಯೆ ಪಾವತಿಸಬೇಕು.
ಇದನ್ನೂ ಓದಿ:- ಕಲಬುರಗಿ ಪಾಲಿಕೆಯಲ್ಲಿ ವಾಮಮಾರ್ಗದಿಂದ ಆಡಳಿತ ಬರಲು ಬಿಜೆಪಿ ತಂತ್ರ: ಕಾಂಗ್ರೆಸ್
ಬಾಕಿ ವೇತನ ಪಾವತಿಸಬೇಕು. ಎರಡನೇ ವರ್ಷದ ಪಿಜಿಗಳಿಗೆ ಜುಲೈ ತಿಂಗಳಿಗೆ ಬಾಕಿ ಇರುವ 5,000 ಸ್ಟೈಫಂಡ್ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು ಪ್ರತಿಭಟನೆಯಲ್ಲಿ ಅಸೋಸಿಯೇ ಷನ್ ಅಧ್ಯಕ್ಷ ಡಾ.ವಿಜಯ್ ಕುಮಾರ್, ಉಪಾ ಧ್ಯಕ್ಷ ಡಾ.ಕೆ.ಕೆ.ಅಬ್ದುಲ್ಲಾ, ಡಾ.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಡಾ.ವಿಶಾಲ್ ಹುಬ್ಬಳ್ಳಿ, ಡಾ. ಸಂದೀಪ್ ಗಂಗಾ, ಡಾ.ಎ.ಪೂರ್ಣಿಮಾ, ಸಲಹೆಗಾರ ರಾದ ಡಾ.ಶಿವಾನಂದ, ಡಾ.ಕಿಶೋರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.