ಮುಂದುವರೆದ ಮಳೆ: ಶಾಲಾ ಆವರಣಕ್ಕೆ ನುಗ್ಗಿದ ನೀರು, ಮರದ ಕೆಳಗೆ ಪಾಠ
Team Udayavani, May 28, 2022, 10:51 AM IST
![3school](https://www.udayavani.com/wp-content/uploads/2022/05/3school-620x372.jpg)
![3school](https://www.udayavani.com/wp-content/uploads/2022/05/3school-620x372.jpg)
ಹುಣಸೂರು: ತಾಲೂಕಿನಲ್ಲಿ ಮತ್ತೆ ಮಳೆಯ ರುದ್ರನರ್ತನ ಮುಂದುವರೆದಿದ್ದು, ಭಾರೀ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಉಯಿಗೊಂಡನಹಳ್ಳಿ, ಧರ್ಮಾಪುರ, ಗುರುಪುರ, ಕೊಯಮತ್ತೂರು ಕಾಲೋನಿ, ವಿನೋಬಾ ಕಾಲೋನಿ, ಬಿಳಿಕೆರೆ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಸಂಜೆ ಮತ್ತೆ ಮಳೆ ಮುಂದುವರೆದಿದ್ದು, ಮತ್ಯಾವ ಅನಾಹುತ ಸೃಷ್ಟಿಸುವುದೋ ಎಂಬ ಆತಂಕ ಎದುರಾಗಿದೆ.
ಶಾಲೆಗೆ ನುಗ್ಗಿದ ನೀರು–ಅಪಾಯದಲ್ಲಿ ಕಟ್ಟಡ
ಉಯಿಗೊಂಡನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಹುಂಡಿಮಾಳದಲ್ಲಿ ಹೆಚ್ಚು ಹಾನಿಯಾಗಿದ್ದು, ಶಾಲಾ ಕೊಠಡಿಗಳಿಗೆ ನೀರು ನುಗ್ಗಿದೆ, ಗೆಂಡೆಕಟ್ಟೆ ಭರ್ತಿಯಾಗಿ ತೋಟ, ಹೊಲಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟ ಉಂಟಾಗಿದೆ. 20ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದೆ. ರಸ್ತೆ-ಮನೆ, ಕೊಟ್ಟಿಗೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಹುಂಡಿಮಾಳದ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಕೊಠಡಿಗಳಿಗೆ ನೀರು ನುಗ್ಗಿ ಜಲಾವೃತವಾಗಿದ್ದರೆ, ಹೈಸ್ಕೂಲ್‌ನ ಕಾಂಪೌಂಡ್ ಬಿದ್ದು ಹೋಗಿದೆ. ಶಾಲೆಯ ಆರು ಕೊಠಡಿಗಳು ಸಂಪೂರ್ಣ ಸೋರುತ್ತಿದ್ದು, ತರಗತಿ ನಡೆಸಲಾಗದ ಸ್ಥಿತಿ ಎದುರಾಗಿದೆ. ಯಾವಾಗ ಕಟ್ಟಡ ಬಿದ್ದು ಹೋಗುತ್ತದೋ ಎನ್ನುವ ಭೀತಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಇದ್ದಾರೆ. ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಹೈಸ್ಕೂಲ್ ಮುಖ್ಯ ಶಿಕ್ಷಕ ರವಿ ಹೇಳಿದ್ದಾರೆ.
ಇದನ್ನೂ ಓದಿ:ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವು
ಅಪಾಯದಲ್ಲಿ ಹುಂಡಿಮಾಳದ ಬುಂಡೆಕಟ್ಟೆ
ಹುಂಡಿಮಾಳದ ಬುಂಡೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ಅಪಾಯ ತಂದೊಡ್ಡಿದೆ. ಈ ಭಾಗದ ಉಯಿಗೊಂಡನಹಳ್ಳಿ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳ ಜಮೀನಿನಲ್ಲಿ ಬೆಳೆದಿದ್ದ ಅರಿಶಿನ, ಹತ್ತಿ, ತಂಬಾಕು, ಚಪ್ಪರದ ಅವರೆ, ಬಾಳೆ ಬೆಳೆ ಸೇರಿದಂತೆ ಅಪಾರ ಬೆಳೆಗೆ ಹಾನಿಯುಂಟಾಗಿದೆ. ಹೊಲಗಳಲ್ಲಿ ಬಿರುಗಾಳಿಗೆ 20ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದೆ. ಮನೆ-ಕೊಟ್ಟಿಗೆಗಳ ಮೇಲ್ಚಾವಣಿ ಹಾರಿ ಹೋಗಿ ರೈತರ ಬದುಕನ್ನೇ ಬರಡಾಗಿಸಿದೆ. ಸರಕಾರ ಹಾನಿಗೆ ಪರಿಹಾರ ನೀಡುವಂತೆ ಹುಂಡಿಮಾಳ ಸುರೇಶ್, ಒಡಿಪಿ ಸಂಸ್ಥೆಯ ಒತ್ತಾಯಿಸಿದ್ದಾರೆ.
ಗುರುಪುರ, ವಾರಂಚಿ ಕಡೆಗಳಲ್ಲಿ ಹೊಲಗಳಿಗೆ ಅಪಾರ ಪ್ರಮಾಣದ ನೀರು ಹರಿದಿದೆ, ಮನೆಗಳಿಗೂ ಹಾನಿಯಾಗಿದೆ. ಬಿಳಿಕೆರೆ, ಧರ್ಮಾಪುರ, ತರಿಕಲ್‌ಗಳಲ್ಲಿ ಮನೆಗಳ ಗೋಡೆಗಳು ಬಿದ್ದು ಹೋಗಿವೆ. ಬನ್ನಿಕುಪ್ಪೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ರಸ್ತೆಗಳು ಕೊಚ್ಚಿ ಹೋಗಿವೆ.
ಶಾಸಕ ಎಚ್.ಪಿ.ಮಂಜುನಾಥರು ಕೊಯಮತ್ತೂರು ಕಾಲೋನಿ, ಧರ್ಮಾಪುರ ಮತ್ತಿತರ ಕಡೆಗಳಿಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ. ತಹಶೀಲ್ದಾರ್ ಡಾ.ಅಶೋಕ್ ಹುಂಡಿಮಾಳ ಶಾಲೆಗಳಿಗೆ ಹಾಗೂ ಧರ್ಮಾಪುರ, ಗುರುಪುರ ಮತ್ತಿತರ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![5-hunsur](https://www.udayavani.com/wp-content/uploads/2025/02/5-hunsur-3-150x90.jpg)
![5-hunsur](https://www.udayavani.com/wp-content/uploads/2025/02/5-hunsur-3-150x90.jpg)
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
![Mys-Udgiri-1](https://www.udayavani.com/wp-content/uploads/2025/02/Mys-Udgiri-1-1-150x90.jpg)
![Mys-Udgiri-1](https://www.udayavani.com/wp-content/uploads/2025/02/Mys-Udgiri-1-1-150x90.jpg)
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
![24](https://www.udayavani.com/wp-content/uploads/2025/02/24-2-150x90.jpg)
![24](https://www.udayavani.com/wp-content/uploads/2025/02/24-2-150x90.jpg)
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
![11](https://www.udayavani.com/wp-content/uploads/2025/02/11-16-150x90.jpg)
![11](https://www.udayavani.com/wp-content/uploads/2025/02/11-16-150x90.jpg)
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
![ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್](https://www.udayavani.com/wp-content/uploads/2025/02/6-17-150x90.jpg)
![ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್](https://www.udayavani.com/wp-content/uploads/2025/02/6-17-150x90.jpg)
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್