ನ್ಯಾಯಾಂಗ ವ್ಯವಸ್ಥೆ ಮೇಲೆ ನಿಯಂತ್ರಣ ಸರಿಯಲ್ಲ: ನ್ಯಾ| ಸಂತೋಷ ಹೆಗ್ಡೆ ಅಭಿಮತ
Team Udayavani, Jan 25, 2023, 10:02 PM IST
ಮೈಸೂರು: ಕೊಲೆಜಿಯಂನಲ್ಲೂ ತಮ್ಮ ಪ್ರತಿನಿಧಿಯನ್ನಿರಿಸಿ, ನ್ಯಾಯಾಂಗ ವ್ಯವಸ್ಥೆಯನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಶಾಸಕಾಂಗ ಹವಣಿಸುತ್ತಿರುವುದು ತಪ್ಪು. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದಕ್ಕೆ ನನ್ನ ವಿರೋಧವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್ ಹೆಗ್ಡೆ ಹೇಳಿದರು.
ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಶಾಸಕಾಂಗ ತನ್ನ ಕಾರ್ಯ ವ್ಯಾಪ್ತಿ ಮೀರಿ ಕಾರ್ಯಾಂಗವನ್ನು ನಿಯಂತ್ರಿಸುತ್ತಿದೆ. ಈಗೀಗ ನ್ಯಾಯಾಂಗ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ನ್ಯಾಯಾಧೀಶರ ನೇಮಕಕ್ಕೆ ಇರುವ ಕೊಲೆಜಿಯಂನಲ್ಲಿ ಸರಕಾರ ತನ್ನ ಪ್ರತಿನಿಧಿಯೂ ಇರಬೇಕು ಎಂದು ಹೇಳುತ್ತಿದೆ. ಇದು ಯಾವುದೇ ಕಾರಣಕ್ಕೂ ಆಗಬಾರದು ಎಂದು ಸ್ಪಷ್ಟಪಡಿಸಿದರು.
ಶಕ್ತಿ ಕುಂದಿಸುವ ಕೆಲಸ
ಲೋಕಾಯುಕ್ತಕ್ಕೆ ಈಗಲೂ ಪರ ಮಾಧಿಕಾರವಿದೆ. ಅದರ ಜವಾ ಬ್ದಾರಿ ವಹಿಸಿಕೊಳ್ಳುವವರು ಅಧಿ ಕಾರವನ್ನು ಚಲಾಯಿಸಬೇಕು. ಸರಕಾರ ತನ್ನ ಮಾತು ಕೇಳುವ ಅಧಿಕಾರಿ ಗಳನ್ನು ನೇಮಕ ಮಾಡಿದರೆ, ನ್ಯಾಯಾಲಯಕ್ಕೆ ಹೋಗಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಈ ಹುದ್ದೆಯಲ್ಲಿರುವವರು ಭ್ರಷ್ಟಾಚಾರದಿಂದ ದೂರ ಇರಬೇಕು. ಯಾವುದೇ ಸರಕಾರ ಹಾಗೂ ಸರಕಾರಿ ನೌಕರನಿಗೂ ಬಲಿಷ್ಠ ಲೋಕಾಯುಕ್ತ ಬೇಕಾಗಿಲ್ಲ. ಹಾಗಾಗಿಯೇ ಅದರ ಶಕ್ತಿ ಕುಂದಿಸುವ ಕೆಲಸ ಶಾಸಕಾಂಗದಿಂದ ನಡೆಯುತ್ತಾ ಬಂದಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.