ಪುನರ್ವಸತಿ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಆದಿವಾಸಿಗಳನ್ನು ಸೇರಿಸಲು ಆಗ್ರಹ


Team Udayavani, Feb 16, 2022, 7:18 PM IST

ಪುನರ್ವಸತಿ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಆದಿವಾಸಿಗಳನ್ನು ಸೇರಿಸಲು ಆಗ್ರಹ

ಹುಣಸೂರು: ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತಕ್ಕಲು ಹಾಡಿಯಲ್ಲಿ ಗದ್ದಿಗೆ ಪ್ರಾಂತ್ಯದ ಆದಿವಾಸಿ ಹಾಡಿಗಳ ಅರಣ್ಯ ಹಕ್ಕುಸಮಿತಿ ಹಾಗೂ ಹಾಡಿ ಅಭಿವೃದ್ದಿ ಸಮಿತಿ ಸದಸ್ಯರುಗಳೊಡನೆ ಡೀಡ್ ಸಂಸ್ಥೆಯ ಡಾ.ಎಸ್.ಶ್ರೀಕಾಂತ್ ನೇತೃತ್ವದಲ್ಲಿ ಹೈಕೋರ್ಟ್ ಸಮಿತಿಯ ಪುನರ್ವಸತಿ ಶಿಫಾರಸ್ಸುಗಳ ಕುರಿತು ಆದಿವಾಸಿಗಳೊಂದಿಗೆ ಸಂವಾದ ನಡೆಯಿತು.

ತೆಕ್ಕಲು ಹಾಡಿಯ ಮುಖ್ಯಸ್ಥ ಶಿವಣ್ಣರ ಅಧ್ಯಕ್ಷತೆಯಲ್ಲಿ ನಡೆದ ಸಂವಾದದಲ್ಲಿ ಹೈಕೋರ್ಟ್ ಸಮಿತಿ ವರದಿಯಲ್ಲಿ ಕೈಬಿಟ್ಟು ಹೋಗಿರುವ ತಕ್ಕಲುಹಾಡಿ, ಮಾದಯ್ಯನಕಟ್ಟೆ ಹಾಡಿ ಹಾಗೂ ಸೋನಹಳ್ಳಿಹಾಡಿಗಳ 150 ಕುಟುಂಬಗಳನ್ನು ಹೈಕೋರ್ಟ್ ಪುನರ್ವಸತಿ ಸಮಿತಿಯ ಪಟ್ಟಿಗೆ ಹಾಡಿ ಗ್ರಾಮಸಭೆಗಳಿಂದ ಪ್ರಾಂತೀಯ ವಿಭಾಗಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಆದಾರದ ಮೇಲೆ ಸೇರಿಸಬೇಕೆಂದು ಸರಕಾರವನ್ನು ಕೋರಬೇಕೆಂದು ನಿರ್ಣಯಿಸಿದರು.

ತಕ್ಕಲುಹಾಡಿ ಹಾಗೂ ಮಾದಯ್ಯನಕಟ್ಟೆ ಹಾಡಿಯ 106ಆದಿವಾಸಿ ಕುಟುಂಬಗಳ ಸ್ವಾಧೀನದಲ್ಲಿರುವ 150 ಎಕರೆ ಕೃಷಿಭೂಮಿಗೆ ಸಾಗುವಳಿಪತ್ರ ನೀಡಬೇಕು, ಈ ಹಾಡಿಗಳಿಗೆ ಸಮುದಾಯ ಭವನ, ಅಂಗನವಾಡಿ ಕಟ್ಟಡ ಹಾಗೂ 70 ವಾಸದ ಮನೆಗಳು, ಒಂದು ಆಶ್ರಮಶಾಲೆ ಮಂಜೂರು ಮಾಡಲು ಸಭೆ ಆಗ್ರಹಿಸಿದೆ. ಈ ಪ್ರದೇಶದ ಆದಿವಾಸಿ ಕುಟುಂಬಗಳ ಶೈಕ್ಷಣಿಕ ಪ್ರಗತಿಗೆ  ಆಶ್ರಮ ಶಾಲೆ ಅನಿವಾರ್ಯತೆ ಬಗ್ಗೆ ಚರ್ಚಿಸಲಾಯಿತು.

ಡೀಡ್ ನಿರ್ದೇಶಕ ಡಾ.ಶ್ರಿಕಾಂತ್ ಹೈಕೋರ್ಟ್ ಸಮಿತಿಯ ಪುನರ್ವಸತಿ ಕುರಿತ 24 ಶಿಫಾರಸ್ಸುಗಳನ್ನು ಸಭೆಗೆ ವಿವರಿಸಿ, ಜಾರಿಯಾಗುವಂತೆ ಹಾಡಿಯ ಅರಣ್ಯ ಹಕ್ಕುಸಮಿತಿಗಳು ಹಾಗೂ ಅಭಿವೃದ್ದಿ ಮಂಡಳಿಗಳು ಜಂಟಿಯಾಗಿ ಸರ್ಕಾರವನ್ನು ಒತ್ತಾಯಿಸಬೇಕೆಂದರು. ಸಂಯೋಜಕ ಪ್ರಕಾಶ್ ಗ್ರಾಮಸಭೆಯಿಂದ ನಾಮಕರಣಗೊಂಡಿರುವ ಹಾಡಿಯ ಮುಂದಾಳುಗಳು ತಮ್ಮ ಹಾಡಿಗಳಲ್ಲಿ ಸೌಲಭ್ಯ ಪಡೆದುಕೊಳ್ಳಲು ಮುಂದಾಳತ್ವವಹಿಸಿಕೊಳ್ಳಬೇಕೆಂದರು. ಮಕ್ಕಳು ಹಕ್ಕುಗಳು ಮತ್ತು ಶಿಕ್ಷಣದ ಪ್ರಾಮುಖ್ಯತೆ ಕುರಿತು ಮಕ್ಕಳ ಹಕ್ಕುಗಳ ಕಾರ್ಯಕರ್ತ ಅನಂತ್ ಮಾತಾನಾಡಿದರು.

ಬುಡಕಟ್ಟು ಕೃಷಿಕರ ಸಂಘದ ಅದ್ಯಕ್ಷ ಪಿ.ಕೆ.ರಾಮು ಮಾತನಾಡಿ ಅಧಿಕಾರಿಗಳು ಸಭೆಗೆ ಕರೆದರೂ ಹಾಜರಾಗಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲಾ,ಪರಿಸ್ಥಿತಿ ಹೀಗಿರುವಾಗ ಅರಣ್ಯಹಕ್ಕು ಸಮಿತಿಗಳು ಹಾಗೂ ಹಾಡಿ ಅಭಿವೃದ್ದಿಮಂಡಳಿಗಳು ಕನಿಷ್ಟ ಕಚೇರಿಗಳಿಗೆ ಭೇಟಿ ನೀಡಿ, ಪಡೆದುಕೊಳ್ಳುವ ಪರಿಪಾಠ ಮೈಗೂಡಿಸಿಕೊಳ್ಳಬೇಕೆಂದರು. ಸಂಘದ ಕಾರ್ಯದರ್ಶಿ ಜಯಪ್ಪ ಆದಿವಾಸಿಗಳು ನಮಗೆ ಸಂವಿದಾನಬದ್ದವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಲು ಶಿಕ್ಷಣವನ್ನೇ ದೊಡ್ಡ ಅಸ್ತçವಾಗಿ ಬಳಸಿಕೊಳ್ಳಬೇಕೆಂದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ವಿಠಲನಾಣಚ್ಚಿ ಮಾತನಾಡಿ ಆದಿವಾಸಿ ಪಾರ್ಲಿಮೆಂಟ್‌ನ ಮನವಿಪತ್ರವನ್ನು ಪರಿಶೀಲಿಸಲು ಹಾಗೂ ಕಾಡಿನಿಂದ ಹೊರಹಾಕಿರುವ ಕುಟುಂಬಗಳಿಗೆ ನೀಡಬೇಕಾದ ಪುನರ್ವಸತಿ ವಿಳಂಬದ ಕಾರಣಗಳನ್ನು ಅರಿಯಲು ಹೆಚ್.ಡಿ.ಕೋಟೆ ನ್ಯಾಯಾಲಯದ ನ್ಯಾಯಾಧೀಶರು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಪ್ರಕ್ರಿಯೆ ಮುಗಿದ ಮೇಲೆ ಹೈಕೋರ್ಟ್ಗೆ ವರದಿ ಸಲ್ಲಿಸುವ ಸಾದ್ಯತೆಗಳಿವೆ ಎಂದರು. ಆದಿವಾಸಿ ಮಹಿಳಾ ಪ್ರತಿನಿಧಿ ಬೊಮ್ಮಿಯವರು ಸಂವಾದ ನಿರೂಪಿಸಿದರು.

ಟಾಪ್ ನ್ಯೂಸ್

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

Jammu: Union Minister Jitendra Singh’s brother, BJP MLA Devendra Singh Rana passed away

Jammu: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋದರ, ಬಿಜೆಪಿ ಶಾಸಕ ದೇವೇಂದ್ರ ಸಿಂಗ್‌ ರಾಣಾ ನಿಧನ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

6-shivaraja

Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Prathap-Simha

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

15

New Delhi: ರಷ್ಯಾಗೆ ನೆರವು ಆರೋಪ; 19 ಭಾರತೀಯ ಸಂಸ್ಥೆಗಳಿಗೆ ಅಮೆರಿಕದಿಂದ ನಿರ್ಬಂಧ

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

14

Fadnavis: ಶೀಘ್ರವೇ ಮತ್ತಷ್ಟು ಕಾಂಗ್ರೆಸಿಗರು ಬಿಜೆಪಿ ಸೇರ್ಪಡೆ

13

TTD: ತಿರುಪತಿಯಲ್ಲಿ ಕೆಲಸ ಮಾಡುವವರೆಲ್ಲ ಹಿಂದೂ ಆಗಿರಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.