Coombing: ಮಳೆ ನಡುವೆಯೇ ಹುಲಿ ಪತ್ತೆಗೆ ಕೂಂಬಿಂಗ್!
Team Udayavani, Sep 10, 2023, 3:08 PM IST
ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಂಚಿನ ಹುಣಸೂರು ತಾಲೂಕಿನ ಮುದಗನೂರು ಹಾಗೂ ಶೆಟ್ಟಹಳ್ಳಿ ಲಕ್ಕಪಟ್ಟಣ ಪ್ರದೇಶದಲ್ಲಿ ಕಾಣಿಸಿಕೊಂಡು ಉಪಟಳ ನೀಡುತ್ತಿದ್ದ ಹುಲಿ ಸೆರೆಗೆ ವೀರನಹೊಸಹಳ್ಳಿ, ಹುಣಸೂರು ವನ್ಯಜೀವಿ ವಲಯದ ಅರಣ್ಯ ಸಿಬ್ಬಂದಿ ಶುಕ್ರವಾರದಿಂದ ಕೂಂಬಿಂಗ್ ಆರಂಭಿಸಿದ್ದಾರೆ. ಕಳೆದೆರಡು ದಿನಗಳಿಂದ ಮುದಗನೂರು ಗ್ರಾಮದ ಕಾಡಂಚಿನ ಜಮೀನಿನಲ್ಲಿ ಹುಲಿ ಹೆಜ್ಜೆ ಪತ್ತೆಯಾದ ಹಿನ್ನೆಲೆ ಸಿಬ್ಬಂದಿ ಹುಲಿ ಹೆಜ್ಜೆ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದರು. ಆದರೆ, ಎಲ್ಲಿಯೂ ಹುಲಿ ಸುಳಿವು ಸಿಕ್ಕಿಲ್ಲವಾದ್ದರಿಂದ ಜಮೀನು, ಅರಣ್ಯದಂಚಿನಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿದ್ದಾರೆ.
ಮಳೆ ಅಡ್ಡಿ: ಶುಕ್ರವಾರ ಹುಲಿ ಪತ್ತೆಗೆ ಅರಣ್ಯ ಇಲಾಖೆ ಹುಣಸೂರು ಮತ್ತು ವೀರನಹೊಸಹಳ್ಳಿ ವನ್ಯಜೀವಿ ವಿಭಾಗದ ಸಿಬ್ಬಂದಿ ಕೂಂಬಿಂಗ್ ನಡೆಸಿದರಾದರೂ ಆಗಾಗ್ಗೆ ಬಿಟ್ಟು ಬಿಟ್ಟು ಬರುತ್ತಿರುವ ತುಂತುರು ಮಳೆ ಕಾರ್ಯಾಚರಣೆಗೆ ಅಡಚಣೆಯಾಗಿದೆ. ಚಳ್ಳೆಹಣ್ಣು ತಿನ್ನಿಸುತ್ತಿರುವ ಹುಲಿ: ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಕಾಡು ಸೇರುವ ಹುಲಿ, ವಾರದ ನಂತರ ಪಕ್ಕದ ಗ್ರಾಮದ ಹೊಲ-ಗದ್ದೆಗಳಲ್ಲಿ ಓಡಾಟ ಆರಂಭಿಸುತ್ತದೆ. ಸಿಕ್ಕ ಬೀದಿ, ಸಾಕುನಾಯಿ, ಮತ್ತಿತರ ಸಾಕು ಪ್ರಾಣಿ ತಿಂದು ಹೊಟ್ಟೆ ತುಂಬಿ ಸಿಕೊಳ್ಳುತ್ತಾ ಲಕ್ಷ್ಮಣತೀರ್ಥ ನದಿಯಂಚಿನ ಗ್ರಾಮಗಳಲ್ಲಿ ತನ್ನ ಇರುವಿಕೆ ಪ್ರಸ್ತುತ ಪಡಿಸುತ್ತಾ, ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ.
ಎಚ್ಚರ ವಹಿಸಿ: ರೈತರು ರಾತ್ರಿ ವೇಳೆ ಜಮೀನುಗಳಲ್ಲಿ ಜಾಗರೂಕತೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಎಚ್ಚರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೀರನಹೊಸಹಳ್ಳಿ ವನ್ಯಜೀವಿ ವಿಭಾಗದ ನವೀನ್, ದೇವರಾಜ್, ಹುಣಸೂರು ವಲಯದ ಕೃಷ್ಣಮಾದರ್, ಅಕ್ಷಯ್ ಕುಮಾರ್, ಹಲವಾರು ಸಿಬ್ಬಂದಿ ಇದ್ದರು.
2 -3 ಹುಲಿ: ಅನುಮಾನ: ಹನಗೋಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಹುಲಿ ಒಂದೇ ಇದೆಯೋ ಅಥವಾ 2-3 ಇದೆಯೇ ಎಂಬುದು ಸ್ಥಳೀಯರಲ್ಲಿ ಅನುಮಾನಕ್ಕೆಡೆ ಮಾಡಿದೆ. ಹಾಗೆಯೇ ಕೂಂಬಿಂಗ್ ಆರಂಭಿಸುವ ವೇಳೆ ನಾಪತ್ತೆಯಾಗುವ ಹುಲಿ ಮತ್ತು ಪಕ್ಕದ ಗ್ರಾಮದ ಹೊಲಗಳಲ್ಲಿ ಓಡಾಡಿ ತನ್ನ ಇರುವಿಕೆ ತೋರಿಸುತ್ತಿರುವು ದರಿಂದ ಒಂದೇ ಹುಲಿಯೋ ಅಥವಾ ಇತರೆ ಹುಲಿಗಳಿವೆ ಯೋ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.