ಹಾಡಿಗಳ ಗಿರಿಜನರತ್ತ ಸುಳಿಯದ ಕೊರೊನಾ ಸೋಂಕು!

Team Udayavani, May 6, 2021, 3:41 PM IST

Corona infection!

ಎಚ್‌.ಡಿ.ಕೋಟೆ: ಕೊರೊನಾ ಮೊದಲ ಅಲೆನಗರ, ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿತ್ತು.ಅಲ್ಲೊಂದು ಇಲ್ಲೊಂದು ಸೋಂಕಿನ ಪ್ರಕರಣಗಳುಹಳ್ಳಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇದೀಗ2ನೇ ಅಲೆ ವ್ಯಾಪಕವಾಗಿ ಹರಡಿ ಹಳ್ಳಿಗಳಿಗೂತಗುಲಿದರೂ ಹಾಡಿಗಳಿಗೆ ಮಾತ್ರ ಯಾರೊಬ್ಬರಿಗೂಸೋಂಕು ಹರಡಿಲ್ಲ.

ಜಿಲ್ಲೆಯಲ್ಲಿ ಎಚ್‌.ಡಿ.ಕೋಟೆ, ಹುಣಸೂರು,ಪಿರಿಯಾಪಟ್ಟಣ ತಾಲೂಕುಗಳಲ್ಲಿ ಸಾಕಷ್ಟುಹಾಡಿಗಳು ಇವೆ. ಕೋಟೆ ತಾಲೂಕಿನಲ್ಲಿ ಸುಮಾರು120 ಆದಿವಾಸಿಗರ ಹಾಡಿಗಳಿವೆಯಾದರೂ ಇಲ್ಲಿಯತನಕ ಯಾವುದೇ ಹಾಡಿಯಿಂದಯಾವೊಬ್ಬ ಆದಿವಾಸಿಗೂ ಕೊರೊನಾ ಸೋಂಕುತಗುಲಿರುವುದು, ಅದರಿಂದ ಮೃತಪಟ್ಟಿರುವುದು ವರದಿಯಾಗಿಲ್ಲ. ಹಾಡಿಗಳ ಯಾರೊಬ್ಬರೂ ಕೂಡ ಲಸಿಕೆಬೇಕೆಂದು ಆಸ್ಪತ್ರೆಗೆ ಕಾಲಿಟ್ಟಿಲ್ಲ.

ಅಧಿಕಾರಿಗಳ ತಂಡಹಾಡಿಗಳಿಗೆ ಭೇಟಿ ನೀಡಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ದರೂ ಅದಕ್ಕೆ ಕ್ಯಾರೇ ಎಂದಿಲ್ಲ. “ನಮಗೆಯಾವ ಕೊರೊನಾ ಗಿರಾನಾವೂ ಇಲ್ಲ, ನಮಗ್ಯಾಕೆಲಸಿಕೆ, ಸಿಟಿ ಜನರಿಗಷ್ಟೇ ಕೊರೊನಾ ಬರುತ್ತದೆ’ಎಂದು ಅಧಿಕಾರಿಗಳನ್ನೇ ಬೈದು ಕಳುಹಿಸಿದ್ದಾರೆ.ಅಷ್ಟರ ಮಟ್ಟಿಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ಸೋಂಕುಹರಡದಂತೆ ಆರೋಗ್ಯ ಕಾಪಾಡಿಕೊಂಡಿದ್ದಾರೆ.

ಜನರೊಟ್ಟಿಗೆ ಬೆರೆಯಲ್ಲ: ಆದಿವಾಸಿವರು ವಿನಾಕಾರಣ ನಗರ ಪ್ರದೇಶಗಳಿಗೆ ಸಂಚರಿಸುವುದು ವಿರಳ. ಇನ್ನು ವಾಹನಗಳಲ್ಲಿ ಆದಿವಾಸಿಗರ ಸಂಚಾರ ತೀರ ಕಡಿಮೆ. ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಹಾಡಿಗಳಲ್ಲೇ ಉಳಿಯುವುದರಿಂದ ಆದಿವಾಸಿಗರಿಗೆ ಸೋಂಕುಹರಡಿಲ್ಲ. ಇಡೀ ವಿಶ್ವವೇ ಸೋಂಕಿನಿಂದ ನಲುಗಿಹೋಗಿದ್ದರೆ ಆದಿವಾಸಿಗರು ಯಾವುದೇ ಭಯಭೀತಿ ಇಲ್ಲದೇ ಹಾಡಿಗಳಲ್ಲಿ ಮಕ್ಕಳೊಟ್ಟಿಗೆ ಸಹಜಜೀವನ ನಡೆಸುತ್ತಾ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಭಾರತ ಸೇರಿದಂತೆ ವಿಶ್ವವೇ ಕೊರೊನಾಸೋಂಕು, ಸಾವು ನೋವುಗಳಿಂದ ಬೆಚ್ಚಿ ಬಿದ್ದಿದ್ದರೆಹಾಡಿಗಳ ಜನರಿಗೆ ಮಾತ್ರ ಕೊರೊನಾ ಎಂದರೇನುಎಂಬುದೇ ತಿಳಿದಿಲ್ಲ. ಅದರ ಪರಿವೇ ಇಲ್ಲ.

ರೋಗ ನಿರೋಧಕ ಶಕ್ತಿ ವೃದ್ಧಿ: ಗಿರಿಜನರುಹೊರಗಡೆ ತಿರುಗಾಡುವುದು ಬಹಳ ಕಡಿಮೆ. ಕೆಲಹಾಡಿಗಳಲ್ಲಿ ಕೂಲಿ ಕೆಲಸಕ್ಕಾಗಿ ಕೊಡಗು,ಮೈಸೂರು, ಕೇರಳ ರಾಜ್ಯದ ಶುಂಠಿ, ಕಾಫಿ ತೋಟಕ್ಕೆಹೋಗುತ್ತಾರೆ. ತೋಟಗಳ ಮಾಲಿಕರೇ ಅವರನ್ನುತಮ್ಮ ತಮ್ಮ ವಾಹನಗಳಲ್ಲಿ ಕರೆದೊಯ್ದು ಕೆಲಸಮುಗಿದ ನಂತರ ಹಾಡಿಗಳಿಗೆ ವಾಪಸ್‌ ತಂದುಬಿಡುತ್ತಾರೆ. ಹೊರಗಡೆ ಸುತ್ತಾಡಿದರೂ ಇದುವರೆಗೂ ಯಾರಿಗೂ ಸೋಂಕು ಹರಡಿಲ್ಲ.

ಇದಕ್ಕೆಮುಖ್ಯ ಕಾರಣ ಆದಿವಾಸಿಗಳಲ್ಲಿ ರೋಗನಿರೋಧಕ ಶಕ್ತಿ ಗುಣ ಇರುವುದು. ಅರಣ್ಯದಲ್ಲಿದೊರೆಯುವ ಪೌಷ್ಟಿಕ ಆಹಾರಗಳಾದ ಗೆಡ್ಡೆಗೆಣಸು,ನಾರು ಬೇರುಗಳ ಕಷಾಯ, ಸೊಪ್ಪು ಸೇವನೆಯಿಂದಆದಿವಾಸಿಗರ ರೋಗ ನಿರೋಧಕ ಶಕ್ತಿ ಹೆಚ್ಚಾಗಿಸೋಂಕು ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ತಿಳಿದು ಬಂದೆ. ಪ್ರಕೃತಿ ಮಧ್ಯದಲ್ಲಿಕಾಡಿಂಚಿನಲ್ಲಿರುವ ಆದಿವಾಸಿಗರು ಮೊದಲಿನಂತೆಯೇ ಯಾವ ರೋಗ ರುಜನಿಗಳಿಲ್ಲದೇಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಒಂದುವೇಳೆ ಕಾಯಿಲೆ, ಜ್ವರ ಕಾಣಿಸಿಕೊಂಡರೆ ಮನೆಮದ್ದನ್ನೇ ಬಳಸಿಕೊಂಡು ಗುಣಮುಖರಾಗಿ, ತಮ್ಮತಮ್ಮ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ಮಕ್ಕಳಿಗೆ ಅರಣ್ಯಪರಿಸರವೇ ಪಾಠಶಾÇಪ್ರಸ್ತುತ ಕೊರೊನಾ ಹಾಗೂ ಕರ್ಫ್ಯೂಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆಇರುವುದರಿಂದ ಆನ್‌ಲೈನ್‌ ಕ್ಲಾಸ್‌ಗಳುನಡೆಯುತ್ತಿವೆ. ಆದರೆ, ಹಾಡಿಗಳ ಮಕ್ಕಳಿಗೆಆನ್‌ಲೈನ್‌ ಕ್ಲಾಸ್‌ ಪದದ ಅರ್ಥವೇ ತಿಳಿದಿಲ್ಲ.ಸ್ಥಳೀಯ ಶಾಲೆಗಳು ಆರಂಭವಾದರೆ ಮಾತ್ರತರಗತಿಗಳಿಗೆ ಹಾಜರಾಗುತ್ತಾರೆ. ಇಲ್ಲದಿದ್ದರೆಹಾಡಿಯ ಪರಿಸರ, ಅರಣ್ಯ, ಗಿಡಮರಗಳೇಅವರಿಗೆ ಪಾಠಶಾಲೆಯಾಗಿರುತ್ತದೆ.ಕಾಡುಕುಡಿಗಳು ಮರಕೇತಿ ಹಾಡುತ್ತಾ, ಸಾಕುಪ್ರಾಣಿಗಳೊಂದಿಗೆ ಬೆರೆಯುತ್ತಾ, ಗೆಡ್ಡೆ ಗೆಣಸುಹುಡುಕುತ್ತಾ ರಜೆ ದಿನಗಳನ್ನುಸಂಭ್ರಮಿಸುತ್ತಿದ್ದಾರೆ.

ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.