![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Dec 4, 2019, 4:01 PM IST
ಮೈಸೂರು: ಮೈಸೂರಿನ ಕೆ.ಆರ್. ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗಳಲ್ಲಿನ ಮೂಲ ಸೌಲಭ್ಯಗಳ ಕೊರತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಕರುನಾಡ ಸೇವಕರು ಸಂಘಟನೆ ಯಿಂದ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು.
ಈ ಭಾಗದ ದೊಡ್ಡ ಆಸ್ಪತ್ರೆಗಳಾದಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಸ್ಯಾನಿಟೋರಿಯಂ ಆಸ್ಪತ್ರೆಗಳಿಗೆ ರೋಗಿಗಳ ಆರೈಕೆಗೆಂದು ಬಂದ ಜನರಿಗೆ ಕುಳಿತು ಊಟ ಮಾಡಲು, ಕಾಯಲು ಸರಿಯಾದ ವ್ಯವಸ್ಥೆಇಲ್ಲ. ಅತ್ಯಂತ ಕೊಳಕಾದ ಜಾಗದಲ್ಲಿ ಕುಳಿತುಊಟ ಮಾಡಬೇಕಾದ ಪರಿಸ್ಥಿತಿ ರೋಗಿಗಳಸಹಾಯಕರದ್ದಾಗಿದೆ. ಇಷ್ಟು ದೊಡ್ಡ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಕನಿಷ್ಠ ಅವಶ್ಯಕತೆಗಳನ್ನೂ ಪೂರೈಸಿಲ್ಲ. ಕೂಡಲೇ ಚೆಲುವಾಂಬ ಹಾಗೂ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಅವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಿ ರೋಗಿಗಳು ಹಾಗೂ ಅವರ ಸಹಾಯಕರಿಗೆ ಕೂರಲು ಹಾಗೂ ಕಾಯಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಲಾಯಿತು. ಅಲ್ಲದೇ, ಆಸ್ಪತ್ರೆಯ ರೋಗಿಗಳಿಗೆ ಪೂರೈಸುವ ಹಾಲು, ಬ್ರೆಡ್ ಹಾಗೂ ಆಹಾರದಲ್ಲೂ ತಾರತಮ್ಯ ಎಸಗಲಾಗುತ್ತಿದೆ.
ಪ್ರತಿಯೊಂದು ಪರೀಕ್ಷೆಗೂ ಹೊರಗಿನ ರೋಗ ಪತ್ತೆ ಪರೀಕ್ಷೆ ಕೇಂದ್ರಗಳಿಗೆ ಚೀಟಿ ಬರೆದುಕೊಡಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ. ಆಯುಷ್ಮಾನ್ ಯೋಜನೆಯಡಿ ಉನ್ನತ ಚಿಕಿತ್ಸೆ ಅಗತ್ಯವಿರುವವರಿಗೆ ಉನ್ನತ ಚಿಕಿತ್ಸಾ ಕೇಂದ್ರ ಗಳಿಗೆ ರೋಗಿಗಳನ್ನು ಕಳುಹಿಸಿಕೊಡಲು ಶಿಫಾರಸು ಮಾಡಲು ವೈದ್ಯರು ಅನಗತ್ಯವಾಗಿಅಲೆಸುತ್ತಿದ್ದಾರೆ ಎಂದು ದೂರಿದರು. ಚೆಲುವಾಂಬ ಆಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಭದ್ರತೆ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದ ಕಾರ್ಮಿಕರನ್ನು ಕೆಲಸ ದಿಂದ ಕಿತ್ತು ಹಾಕುವ ಬೆದರಿಕೆ ಒಡ್ಡಲಾಗಿದೆ.
ಈ ಹೊರಗುತ್ತಿಗೆ ಸಂಸ್ಥೆಯನ್ನು 2018 ರಲ್ಲಿಯೇ ಕಾರ್ಮಿಕ ಇಲಾಖೆಯ ಕಾರ್ಯ ದರ್ಶಿಗಳು ಕಪ್ಪು ಪಟ್ಟಿಗೆ ಸೇರಿಸಿ ಯಾವುದೇ ನೀಡದಂತೆ ಹಾಗೂ ಯಾವುದೇ ಒಪ್ಪಂದ ಮಾಡಿಕೊಳ್ಳದಂತೆ ಆದೇಶ ಹೊರಡಿಸಿದ್ದರೂ ಸ್ಥಳೀಯ ಸಹಾಯಕ ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ಮೌನ ವಹಿಸಿ ಈ ಅಕ್ರಮಕ್ಕೆ ಬೆಂಬಲವಾಗಿ ನಿಂತಿದೆ. ಚೆಲುವಾಂಬ ಆಸ್ಪತ್ರೆಯಲ್ಲಿ ಕಪ್ಪು ಪಟ್ಟಿಗೆ ಸೇರಿರುವ ಈ ಏಜೆನ್ಸಿಯನ್ನು ಮುಂದುವರಿಸಲಾಗಿದೆ. ತಕ್ಷಣದಿಂದ ಈ ಏಜೆನ್ಸಿ ಯನ್ನು ವಜಾಗೊಳಿಸಿ ಕಾರ್ಮಿಕರ ಬಾಕಿ ಹಣ ಪಾವತಿಯಾಗುವವರೆಗೂ ಯಾವುದೇ ಇಎಂಡಿ ಹಣ ಬಿಡುಗಡೆಯಾಗದಂತೆ ಕ್ರಮ ವಹಿಸುವಂತೆ ಹಾಗೂ ಇದರಲ್ಲಿ ಭಾಗಿ ಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಮನವಿ ಸ್ವೀಕರಿಸಿ, 15 ದಿನಗಳೊಳಗೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಕರುನಾಡ ಸೇವಕರು ಸಂಘಟನೆಯ ಮುಖಂಡರಾದ ಎಂ.ಬಿ.ನಾಗಣ್ಣಗೌಡ, ಮೈಸೂರು ಜಿಲ್ಲಾಧ್ಯಕ್ಷ ವಿನಯ್, ರಾಕೇಶ್ ಗೌಡ, ಸಂಪತ್‌ಕುಮಾರ್, ಮಂಡ್ಯ ಜಿಲ್ಲಾ ಧ್ಯಕ್ಷ ರವಿಗೌಡ, ಮೈಸೂರು ಜಿಲ್ಲಾ ಹೃದಯವಂತ ಕನ್ನಡಿಗರ ಬಳಗದ ಬಿ.ಸಿ.ಕೆ. ಪರಮೇಶ್, ಅವಿನಾಶ್‌ಗೌಡ ಭಾಗವಹಿಸಿದ್ದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.