ಹಳ್ಳಿಗಳಿಗೆ ಆತಂಕ ತಂದ ವಲಸಿಗರು
Team Udayavani, May 5, 2021, 3:24 PM IST
ಮೈಸೂರು: ರಾಜ್ಯಾದ್ಯಂತ ಸರ್ಕಾರ ಕೊರೊನಾ ಕರ್ಫ್ಯೂಜಾರಿ ಮಾಡಿದ ನಂತರ ತಂಡೋಪ ತಂಡವಾಗಿ ತಮ್ಮ ತಮ್ಮಊರುಗಳಿಗೆ ಜನರು ಹಿಂದಿರುಗಿದ ಪರಿಣಾಮ ಜಿಲ್ಲೆಯ ಬಹುಪಾಲು ಗ್ರಾಮಗಳು ಕೊರೊನಾ ಸೋಂಕಿನಿಂದ ನರಳಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ 2ನೇ ಅಲೆ ಆರಂಭದಲ್ಲಿ ಗ್ರಾಮೀಣ ಭಾಗದ ಪಟ್ಟಣ ಹಾಗೂ ಹೋಬಳಿ ಮಟ್ಟದಲ್ಲಿ ಮಾತ್ರ ಕಾಣಿಸಿಕೊಂಡಿತ್ತು. ಇದೇ ಸಮಯದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾದ ಹಿನ್ನೆಲೆ ಸರ್ಕಾರಜಾರಿ ಮಾಡಿದ ಕೊರೊನಾ ಕರ್ಫ್ಯೂನಿಂದಾಗಿ ನಗರ ಪ್ರದೇಶದಲ್ಲಿ ನೆಲೆ ನಿಂತಿದ್ದ ಗ್ರಾಮೀಣಭಾಗದ ಜನರು ತಮ್ಮ ತಮ್ಮ ಊರುಗಳಿಗೆ ವಲಸೆಬಂದ ಪರಿಣಾಮ ಇಂದು ಬಹುಪಾಲು ಹಳ್ಳಿಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಯಾಗಿವೆ.
ಮುಳುವಾದ ಹೋಂ ಐಸೋಲೇಷನ್: ಹಳ್ಳಿಯಲ್ಲಿರುವ ಸೋಂಕಿತರಿಗೆ ಮನೆಯಲ್ಲೇ ಹೋಂ ಐಸೋಲೇಷನ್‌ನಲ್ಲಿರುವಂತೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸೂಚನೆನೀಡುತ್ತಿರುವುದರಿಂದ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.ಸೋಂಕಿತರು ಮನೆಯಲ್ಲೇ ಇರದೆ ಜಾನುವಾರು ಮೇಯಿಸುವುದು, ಕೃಷಿ ಕೆಲಸ ಸೇರಿದಂತೆ ಇತರರೊಂದಿಗೆ ಬೆರೆಯುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಸೋಂಕು ಒಬ್ಬರಿಂದ ಮತ್ತೂಬ್ಬರಿಗೆ ವೇಗವಾಗಿ ಹರಡಲು ಕಾರಣವಾಗಿದೆ.
ಕ್ಲಿನಿಕ್‌ಗಳಲ್ಲಿ ನಿಲ್ಲದ ಚಿಕಿತ್ಸೆ: ಸೋಂಕು ಹರಡಿದ ಬಹುಪಾಲು ಮಂದಿ ಯಾರಿಗೂ ತಿಳಿಯದಂತೆ ಖಾಸಗಿ ಕ್ಲಿನಿಕ್‌ಗಳಿಗೆ ತೆರಳಿ ಇಂಜೆಕ್ಷನ್ ಮತ್ತು ಔಷಧ ಪಡೆದು ಸುಮ್ಮನಾಗುತ್ತಿರುವುದರಿಂದ ಸೋಂಕು ಹೆಚ್ಚಳಕ್ಕೆ ಕಾರಣವಾದರೆ, ಮತ್ತೂಂದೆಡೆ ಸೂಕ್ತ ಚಿಕಿತ್ಸೆ ಸಿಗದೆ ಹಲವರು ಮೃತಪಡುತ್ತಿದ್ದಾರೆ.
6064 ಮಂದಿ ಐಸೋಲೇಷನ್‌ನಲ್ಲಿ: ಜಿಲ್ಲೆಯ ಏಳುತಾಲೂಕಿನಿಂದ ಒಟ್ಟು 6064 ಮಂದಿ ಸೋಂಕಿತರು ಹೋಂಐಸೋಲೇಷನ್‌ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್.ಡಿ.ಕೊಟೆ ತಾಲೂಕಿನಲ್ಲಿ 523, ಹುಣಸೂರಿನಲ್ಲಿ 613, ಕೆ.ಆರ್.ನಗರದಲ್ಲಿ 525, ನಂಜನಗೂಡು ತಾಲೂಕಿನಲ್ಲಿ 1013,ಪಿರಿಯಾಪಟ್ಟಣದಲ್ಲಿ 479, ತಿ.ನರಸೀಪುರದಲ್ಲಿ 1292ಹಾಗೂ ಮೈಸೂರು ತಾಲೂಕಿನಲ್ಲಿ 1619 ಮಂದಿಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಸೂಕ್ತ ಚಿಕಿತ್ಸೆಗೆ ಸಜ್ಜು: ಗ್ರಾಮಿಣ ಭಾಗದ ಸೋಂಕಿತರಿಗೆ ತಾಲೂಕು ಮಟ್ಟದಲ್ಲೇ ಸಮರ್ಪಕ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಜ್ಜಾಗಿದ್ದು, ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 40ರಿಂದ 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಎ ಸಿಮrಮ್ಯಾಟಿಕ್ ಇರುವವರಿಗೆ ಚಿಕಿತ್ಸೆ ನೀಡಲು ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಗ್ರಾಮೀಣ ಭಾಗದಲ್ಲಿ 6277 ಸೋಂಕಿತರು ಮೈಸೂರಿನಎಲ್ಲ ಏಳು ತಾಲೂಕುಗಳ ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 26,858 ಸೋಂಕಿತರಲ್ಲಿ 20,326 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 6277 ಮಂದಿ ಸಕ್ರಿಯ ಸೋಂಕಿತರಿದ್ದು,ಈವರೆಗೆ 255 ಮಂದಿ ಗ್ರಾಮೀಣ ಭಾಗದ ಸೋಂಕಿತರು ಮೃತಪಟ್ಟಿದ್ದಾರೆ.16 ಗ್ರಾಮಗಳು ಸೀಲ್‌ಡೌನ್ ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರು ಕಂಡು ಬಂದ 16ಗ್ರಾಮಗಳನ್ನು ಕಂಟೈನ್ಮೆಂಟ್ ವಲಯಗಳ ನ್ನಾಗಿ ಮಾಡಿ ಇತರರು ಆ ಗ್ರಾಮಗಳಿಗೆ ತೆರಳದಂತೆ ಹಾಗೂಅಲ್ಲಿಯವರು ಬೇರೆಡೆ ಹೋಗದಂತೆ ಸೀಲ್‌ಡೌನ್ ಮಾಡಲಾಗಿದೆ. ಎಚ್.ಡಿ.ಕೋಟೆಯ 02 ಗ್ರಾಮ,ಹುಣಸೂರು ತಾಲೂಕಿನ 05, ಕೆ.ಆರ್. ನಗರದ 04,ಪಿರಿಯಾಪಟ್ಟಣದಲ್ಲಿ 01 ಹಾಗೂ ಮೈಸೂರು ತಾಲೂಕಿನಲ್ಲಿ 04 ಗ್ರಾಮಗಳನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.
ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.