ಶುಂಠಿ ಬೆಳೆಗಾರರ ಮೇಲೆ ಕೋವಿಡ್ ಕರಿನೆರಳು


Team Udayavani, Mar 24, 2021, 6:12 PM IST

ಶುಂಠಿ ಬೆಳೆಗಾರರ ಮೇಲೆ ಕೋವಿಡ್  ಕರಿನೆರಳು

ಪಿರಿಯಾಪಟ್ಟಣ: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು, ನಂತರ ಸ್ಥಾನದಲ್ಲಿ ಶುಂಠಿಗೆ ಇದೆ. ತಂಬಾಕು ಮೀರಿಸುವ ಮಟ್ಟಿಗೆ ಧಾರಣೆ ಏರಿಸಿಕೊಂಡಿದ್ದ ಶುಂಠಿ ಬೆಳೆ ಮೇಲೆ ಈಗ ಕೊರೊನಾ ಕರಿನೆರಳು ಬಿದ್ದಿದ್ದೆ. ಉತ್ತಮ ದರದ ನಿರೀಕ್ಷೆಯಲ್ಲಿದ್ದ ರೈತ ನಿರೀಕ್ಷಿತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಶುಂಠಿ ಒಂದು ಅದೃಷ್ಟದಬೆಳೆ, ಆ ಕಾರಣಕ್ಕೆ ಇದನ್ನು ಬಂಪರ್‌ ಬೆಳೆ ಎಂತಲೂ ಕರೆಯುತ್ತಾರೆ. ಶುಂಠಿ 15ವರ್ಷಗಳ ಹಿಂದೆ ತಾಲೂಕಿಗೆ ಲಗ್ಗೆ ಇಟ್ಟಿತ್ತು. ಅಲ್ಲಿಯ ವರೆಗೂ ಬಹುತೇಕ ರೈತರಿಗೆ ವಾಣಿಜ್ಯ ಬೆಳೆಯಾಗಿಗೋಚರಿಸಿದ್ದು ತಂಬಾಕು ಮತ್ತು ಮುಸುಕಿನ ಜೋಳಮಾತ್ರ. ಯಾವಾಗ ಶುಂಠಿ ತಾಲೂಕಿಗೆ ಲಗ್ಗೆ ಇಟ್ಟಿತ್ತೋ, ಅಂದಿನಿಂದ ಅದೃಷ್ಟ, ಲಾಭದಾಯಕ ಬೆಳೆಯಾಗಿ ರೈತರ ಕೈ ಹಿಡಿದು, ಸಾಲ ಮುಕ್ತರನ್ನಾಗಿ ಮಾಡಿತ್ತು.2020ರವರೆಗೂ ರೈತರಿಗೆ ಲಾಭದಾಯಕವಾಗಿದ್ದಶುಂಠಿ, ಈ ಬಾರಿ ಕೈಸುಡುವಂತೆ ಮಾಡಿದೆ. ಹಳೆ ಮೈಸೂರು ಪ್ರಾಂತ್ಯದ ಪಿರಿಯಾಪಟ್ಟಣ, ಕೆ.ಆರ್‌.ನಗರ, ಎಚ್‌.ಡಿ.ಕೋಟೆ, ಹುಣಸೂರು,ಕೊಡಗಿನ ಭಾಗಕ್ಕೆ ಸೀಮಿತವಾಗಿದ್ದ ಶುಂಠಿಯನ್ನುರಾಜ್ಯದ ಮೂಲೆಮೂಲೆಯಲ್ಲಿಯೂ ಬೆಳೆಯಲು ಪ್ರಾರಂಭಿಸಿದ್ದಾರೆ.

ಬಂಪರ್‌ ಬೆಲೆಯ ಬೆಳೆ: ತಾಲೂಕಿನಲ್ಲಿ 2006ರಲ್ಲಿ ಪ್ರಾರಂಭವಾದ ಶುಂಠಿ ಬೆಳೆ 2011-12ರಲ್ಲಿ ಉತ್ತಮಸ್ಥಿತಿಗೆ ತಲುಪಿ, 60 ಕೆ.ಜಿ. ಶುಂಠಿಗೆ 1500 ರೂ. ನಿಂದ 3 ಸಾವಿರ ರೂ., 2014 ರಿಂದ 2019ರವರೆಗೆ 3500ರೂ.ನಿಂದ 7200 ರೂ.ವರೆಗೂ ಮಾರಾಟವಾಗಿತ್ತು. ತಾಲೂಕಿನಲ್ಲಿ ರೈತನ ಕೈಹಿಡಿಯಬಲ್ಲ ಏಕೈಕ ವಾಣಿಜ್ಯಬೆಳೆ ತಂಬಾಕು ಮೀರಿ ಸಾಲ ಮುಕ್ತ ಮತ್ತು ಆದಾಯ ನೀಡಬಲ್ಲ ಬೆಳೆ ಶುಂಠಿ ಎನ್ನುವಂತೆ ಆಗಿತ್ತು. ಇದುರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.

ಜಮೀನಿಗೆ ಡಿಮ್ಯಾಂಡ್‌: ಯಾವಾಗ ಶುಂಠಿಗೆ ಬೇಡಿಕೆ ಹೆಚ್ಚಾಯಿತೋ ಆಗ ನೆರೆಯ ಕೇರಳದ ರೈತ ಉದ್ಯಮಿಗಳು ಪಿರಿಯಾಪಟ್ಟಣ ಹಾಗೂ ಹೆಗ್ಗಡದೇವನ ಕೋಟೆಗೆ ದಾವಿಸಿ ಜಮೀನನ್ನು ಗುತ್ತಿಗೆಆಧಾರದ ಪಡೆದು ಶುಂಠಿ ಬೆಳೆಯಲು ಪ್ರಾರಂಭಿಸಿದರು. ಒಮ್ಮೆ ಶುಂಠಿ ಬೆಳೆದರೆ ಅದೇ ಜಮೀನಿನಲ್ಲಿ 3 ವರ್ಷದವರೆಗೆ ಶುಂಠಿ ಬೆಳೆಯುವುದಿಲ್ಲ. ಇದರಿಂದ ಜಮೀನಿಗೆ ಡಿಮ್ಯಾಂಡ್‌ಹೆಚ್ಚುತ್ತಾ ಹೋಯಿತು. ಕೇವಲ ಮಳೆಯನ್ನೇ ನಂಬಿ ಆಹಾರ ಧಾನ್ಯ, ಅಲ್ಪಸ್ಪಲ್ಪ ತಂಬಾಕು ಬೆಳೆಯುತ್ತಿದ್ದಇಲ್ಲಿನ ರೈತರು ಶುಂಠಿ ಬೆಳೆಯಲು ಕೇರಳಿಗರಿಗೆಗುತ್ತಿಗೆ ಆಧಾರದಲ್ಲಿ ಭೂಮಿ ನೀಡಿದ ಮೇಲೆ ಪ್ರತಿ ಎಕರೆಗೆ 30 ರಿಂದ 35 ಸಾವಿರ ರೂ.ಗೆ ಹೆಚ್ಚುಹಣ ಹಾಗೂ ಬರಡು ಭೂಮಿಗೆ ಬೋರ್‌ವೆಲ್‌ಕೊರೆಯಿಸಿ ಜಮೀನಿನ ಸುತ್ತ ಸಿಲ್ವರ್‌, ತೆಂಗು, ಅಡಕೆಸೇರಿ ಇನ್ನಿತರ ಮರಗಳನ್ನು ಬೆಳೆಯಲು ಪ್ರಾರಂಭಿಸಿದರು.

ದಾಖಲೆ ಉತ್ಪಾದನೆ, ಮಾರಾಟ: ಕಳೆದ 15 ವರ್ಷದ ಬಂಪರ್‌ ಬೆಲೆ ಕಂಡ ರೈತರು, ಈ ಬಾರಿಪಿರಿಯಾಪಟ್ಟಣ ತಾಲೂಕಿನಲ್ಲೇ 4,800 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದಾರೆ. ಬಿತ್ತನೆ ಶುಂಠಿ ಪ್ರತಿ 60 ಕೆ.ಜಿ.ಗೆ 5,800 ರೂ.ನಿಂದ 7000 ರೂ.ವರೆಗೂ ಬೆಲೆ ಇತ್ತು. ಅಲ್ಲದೆ, ಶುಂಠಿಗೆ ಸಿಂಪಡಿಸುವ ಔಷಧ, ಕೀಟನಾಶಕ, ರಸಗೊಬ್ಬರ ಬೆಲೆಯೂ ಹೆಚ್ಚಾಗಿದ್ದು,ಉತ್ಪಾದನಾ ವೆಚ್ಚ ದುಬಾರಿಯಾಗಿದೆ. ಕಳೆದ ನಾಲ್ಕುವರ್ಷಗಳಿಂದ ನಿಗದಿತ ಸಮಯಕ್ಕೆ ಮಳೆ ಬರುತ್ತಿರುವ ಕಾರಣ ಶುಂಠಿ ಬೆಳೆಗೆ ವರದಾನವಾಗಿ ಪರಿಣಮಿಸಿದ್ದಲ್ಲದೆ, ಇಳುವರಿ ಪ್ರಮಾಣ ಹೆಚ್ಚಾಗಿದೆ. ಕಾಲಕಾಲಕ್ಕೆ ಔಷಧ, ಕೀಟನಾಶಕಗಳ ಸಿಂಪಡಣೆಯಿಂದ ರೋಗದ ಸಮಸ್ಯೆ ಕಡಿಮೆಯಾಗಿದೆ.

ಕೋವಿಡ್ ಕರಿ ನೆರಳು, ಕುಸಿದ ಬೆಲೆ: ಕಳೆದ 15 ವರ್ಷಗಳಿಂದ ದಾಖಲೆ ಬೆಲೆ ಕಂಡ ರೈತ, 2019ನೇ ಸಾಲಿನಲ್ಲಿ ಅದೃಷ್ಟ ಪರೀಕ್ಷೆಗಿಳಿದು 2020ರಲ್ಲಿ ಪ್ರತಿಕ್ವಿಂಟಲ್‌ ಶುಂಠಿಗೆ 4 ಸಾವಿರ ರೂ. ವರೆಗೆ ಇದ್ದ ಬೆಲೆ1,200 ರೂ. ಹಾಗೂ 2021ಸಾಲಿನಲ್ಲಿ 700 ರೂ.ಗೆಕುಸಿತ ಕಂಡಿರುವುದರಿಂದ ಕಂಗಲಾಗಿದ್ದಾರೆ.ವ್ಯವಸಾಯಕ್ಕೆ ಮಾಡಿದ್ದ ಖರ್ಚೂ ಸಿಗದಷ್ಟು ನಷ್ಟವಾಗುತ್ತಿದೆ.

ಸೂಕ್ತ ಮಾರುಕಟ್ಟೆ ಒದಗಿಸಿ: ಶುಂಠಿ ಖರೀದಿಗೆ ಕಂಪನಿಗಳು, ವರ್ತಕರು ಹೆಚ್ಚು ಮಧ್ಯವರ್ತಿಗಳನ್ನೇ ಅವಲಂಬಿಸುತ್ತಾರೆ. ಹಲವು ಹಂತಗಳಲ್ಲಿ ಕಮಿಷನ್‌ಗಾಗಿ ಕೆಲಸ ಮಾಡುವ ನೂರಾರು ಮಂದಿ ಹುಟ್ಟಿಕೊಂಡಿದ್ದಾರೆ. ಇದರಿಂದ ರೈತನಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಸಾಲದಕ್ಕೆ ಶುಂಠಿಗೆ ಬೆಂಬಲ ಬಲೆಯಾಗಲಿ, ಮಾರುಕಟ್ಟೆ ವ್ಯವಸ್ಥೆಯಾಗಲಿ ಇಲ್ಲ. ಸರಕಾರ ಈ ಬಗ್ಗೆ ಗಮನ ಹರಿಸಿ ಶುಂಠಿಬೆಳೆಗೆಸೂಕ್ತ ಮಾರುಕಟ್ಟೆ ಮತ್ತು ಬೆಂಬಲ ಬೆಲೆ ಒದಗಿಸಲು ಮುಂದಾಗಬೇಕಿದೆ ಎಂಬುದು ರೈತನ ಆಶಯ.

ಮೂರು ಎಕರೆ ಜಮೀನಿನಲ್ಲಿ 7 ಲಕ್ಷ ರೂ. ಖರ್ಚುಮಾಡಿ ಶುಂಠಿ ಬೆಳೆದಿದ್ದೇನೆ, ಏಕಾಏಕಿ ಬೆಲೆ ಕುಸಿತದಿಂದ ಖರ್ಚುಮಾಡಿದಷ್ಟೂ ಹಣ ಸಿಕ್ಕಿಲ್ಲ, ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. -ಬಿ.ಎಸ್‌.ರಾಮಕೃಷ್ಣ, ರೈತ, ಬೆಕ್ಕರೆ ಗ್ರಾಮ

ಎರಡು ಎಕರೆ ಯಲ್ಲಿ ಶುಂಠಿ ಬಿತ್ತನೆ ಮಾಡಿದ್ದೆ. ರೋಗಬಾಧೆಗೆ ತುತ್ತಾಗಿ ಇಳುವರಿ ಕಡಿಮೆ ಯಾಗಿದೆ. 600 ಕ್ವಿಂಟಲ್‌ ಬದಲುಕೇವಲ 350 ಕ್ವಿಂಟಲ್‌ ಇಳುವರಿ ಬಂದಿದೆ. ಇದರ ನಡುವೆ ಕೊರೊನಾದಿಂದ ಅಂತಾರಾಜ್ಯ ಮಾರುಕಟ್ಟೆ ಕುಸಿತ ಕಂಡು, ಇತ್ತ ಕೈಗೆ ಬಂದಿರುವ ಶುಂಠಿ ಕೀಳಲು ಆಗದೇ, ಅತ್ತ ಜಮೀನಿನಲ್ಲಿ ಬಿಡಲೂ ಆಗದೇ ಪರದಾಡುವಂತಾಗಿದೆ. -ಬಾಲಚಂದ್ರ, ಶುಂಠಿ ಬೆಳೆಗಾರ, ಸುಂಡವಾಳು ಗ್ರಾಮ

 

-ಪಿ.ಎನ್‌.ದೇವೇಗೌಡ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.