ಕೊರೊನಾಜನಕ ಕಥೆಗಳು: ಸೋಂಕಿಗೆ ಬಲಿಯಾದ ಇಬ್ಬರ ಅಂತ್ಯಕ್ರಿಯೆ ನಡೆದಿದ್ದು ಹೀಗೆ.. :

ಮುಸ್ಲಿಂ ಯುವಕರಿಂದ ಮಹಿಳೆ, ವೃದ್ಧನ ಅಂತ್ಯಕ್ರಿಯೆ , ಕಳೆದ ವಾರ ಪತಿ ಕಳೆದುಕೊಂಡಿದ್ದ ಪತ್ನಿಯನ್ನೂ ಬಲಿ ಪಡೆ¨ ‌ಕೋವಿಡ್

Team Udayavani, Apr 27, 2021, 12:16 PM IST

ಕೊರೊನಾಜನಕ ಕಥೆಗಳು: ಸೋಂಕಿಗೆ ಬಲಿಯಾದ ಇಬ್ಬರ ಅಂತ್ಯಕ್ರಿಯೆ ನಡೆದಿದ್ದು ಹೀಗೆ.. :

ಹುಣಸೂರು: ಕೋವಿಡ್ ಕಾಲದ ದಾರುಣಕಥೆಗಳು ಇವು. ಕೋವಿಡ್‌ ಸೋಂಕಿತರಾಗಿಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟ ಇಬ್ಬರ ಶವಗಳು ಅನಾಥವಾಗಿದ್ದವು. ಅವರ ಸಂಬಂಧಿಕರ್ಯಾರೂ ಬಾರದ ಕಾರಣ ಮುಸ್ಲಿಂ ಯುವಕರು ಮುಂದಾಳತ್ವ ವಹಿಸಿ ಅಂತ್ಯಸಂಸ್ಕಾರ ನೆರವೇರಿಸಿ, ಮಾನವೀಯತೆ ಮೆರೆದರು.

ನಗರದ ಗೋಕುಲ ಬಡಾವಣೆ ನಿವಾಸಿ ವತ್ಸಲಾ (53) ಹಾಗೂ ತಾಲೂಕಿನ ಹಬ್ಬನಕುಪ್ಪೆಯ ವೃದ್ಧ ಸಣ್ಣತಿಮ್ಮೇಗೌಡ (80) ಮೃತ ದುರ್ದೈವಿಗಳು.

ವಿಧಿಯಾಟ: ವಿಧಿಯಾಟ ಹೇಗಿತ್ತು ಎಂದರೆ ವತ್ಸಲ ಅವರ ಪತಿ ಗೋವಿಂದರಾಜು (65)ಇತ್ತೀಚೆಗಷ್ಟೇ ಕೋವಿಡ್ ದಿಂದ ಮೃತಪಟ್ಟಿದ್ದರು. ಇದೀಗ ಪತ್ನಿ ಕೂಡ ಪತಿಯನ್ನು ಸೇರಿಕೊಂಡಿದ್ದಾರೆ. ಈ ದಂಪತಿಗೆ 21 ವರ್ಷ ಓರ್ವ ಪುತ್ರಿಯಿದ್ದು, ತಾಯಿಯ ಶವದಮುಂದೆ ಈಕೆ ರೋದಿಸುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣಿನಲ್ಲಿ ನೀರು ಬರಿಸಿತು. ಮತ್ತೂಂದು ಪ್ರಕರಣದಲ್ಲಿ ವೃದ್ಧ ಸಣ್ಣತಿಮ್ಮೇಗೌಡಅವರ ಸಂಬಂಧಿಕರು ಯಾರೂ ಬಾರದ ಕಾರಣ ಅನಾಥವಾಗಿದ್ದರಿಂದ ಮುಸ್ಲಿಂ ಯುವಕರೇ ಅಂತ್ಯಕ್ರಿಯೆ ನಡೆಸಿದರು.

ಸಾರ್ವಜನಿಕ ಆಸ್ಪತ್ರೆಯಕೋವಿಡ್‌ ಕೇಂದ್ರದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವತ್ಸಲಾ (53) ಹಾಗೂ ಹಬ್ಬನಕುಪ್ಪೆಯ ವೃದ್ಧ ಸಣ್ಣತಿಮ್ಮೇಗೌಡ(80) ಭಾನುವಾರ ರಾತ್ರಿ ಸಾವನ್ನಪ್ಪಿದ್ದರು. ವಾರದ ಹಿಂದೆ ಪತಿ ಸಾವು: ವತ್ಸಲಾ ಅವರ ಪತಿ ಗೋವಿಂದರಾಜು (65) ಸಹ ವಾರದಿಂದಷ್ಟೆ ಕೋವಿಡ್ ಸೋಂಕಿನಿಂದ ಮೈಸೂರಿನಲ್ಲಿ ಮೃತಪಟ್ಟಿದ್ದರು. ಅಲ್ಲೇ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಇವರೊಂದಿಗಿದ್ದ ವತ್ಸಲಾ ಅವರಿಗೂ ಸೋಂಕು ತಗುಲಿತ್ತು. ಇದೀಗ ತಾಯಿಯೊಂದಿಗಿದ್ದ ಪುತ್ರಿಯಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ.

ಅನಾಥವಾಗಿದ್ದ ಶವಗಳು: ಮುಂಜಾನೆಯೇ ಸೋಂಕಿತರ ಶವಗಳನ್ನು ಶವಾಗಾರದಲ್ಲಿರಿಸಿಲಾಗಿತ್ತು. ವತ್ಸಲಾ ಅವರ ಪುತ್ರಿ ಶವಾಗಾರದ ಬಳಿ ಒಬ್ಬೊಂಟಿಯಾಗಿ ರೋದಿಸುತ್ತಿದ್ದರೆ, ಸಣ್ಣತಮ್ಮೇಗೌಡರ ಕುಟುಂಬದವರು ಸಹ ಬೆಳಗ್ಗೆ 11ರವರೆಗೂ ಶವ ಕೊಂಡೊಯ್ಯಲು ಬಾರದೆ ಶವಗಳು ಅನಾಥವಾಗಿದ್ದವು.

ಶಾಸಕರ ತರಾಟೆ: ಇಬ್ಬರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಪಡೆದ ಶಾಸಕ ಎಚ್‌.ಪಿ.ಮಂಜುನಾಥ್‌, ಮುಂಜಾನೆಯೇ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಶವವನ್ನು ವಿಲೇವಾರಿ ಮಾಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಗರಸಭೆ ಪೌರಾಯುಕ್ತ ರಮೇಶ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, “ಶವಅಂತ್ಯಸಂಸ್ಕಾರ ಮಾಡಲು ಕೊಂಡೊಯ್ಯಲುಸಿಬ್ಬಂದಿಯನ್ನೇಕೆ ಕಳುಹಿಸಿಲ್ಲ. ಸಾವನ್ನಪ್ಪಿರುವ ಬಗ್ಗೆ ನಗರಸಭೆ ಅಧಿಕಾರಿಗಳು ದೃಢೀರಿಸಬೇಕಲ್ಲವೇ, ಇನ್ನೂ ನಿಮ್ಮ ಅಧಿಕಾರಿಗಳನ್ನು ಏಕೆ ಕಳುಹಿಸಿಲ್ಲ’ ತರಾಟೆ ತೆಗೆದುಕೊಂಡರು. ಈ ವೇಳೆ ಸಮಾಜಾಯಿಸಿ ನೀಡಿದ ಪೌರಾಯುಕ್ತರು, ನಂತರ ಸಿಬ್ಬಂದಿಗಳೊಂದಿಗೆ ಆಗಮಿಸಿ ಸೋಂಕಿತ ಮಹಿಳೆಶವವನ್ನು ಚಿರಶಾಂತಿಧಾಮಕ್ಕೆ ಕೊಂಡೊಯ್ಯಲು ಸೂಚಿಸಿದರು

ಶವ ಸಂಸ್ಕಾರ ನಡೆಸಿದ ಮುಸ್ಲಿಂ ಯುವಕರು :

ಕೋವಿಡ್ ದಿಂದ ಸಾವಿಗೀಡಾದ ಹಿನ್ನೆಲೆಯಲ್ಲಿ ಶವಸಂಸ್ಕಾರ ನಡೆಸಲು ಇಬ್ಬರ ಕಡೆಯವರು ಬಂದಿರಲಿಲ್ಲ, ವಿಷಯ ತಿಳಿದ ಶಾಸಕ ಎಚ್‌.ಪಿ.ಮಂಜುನಾಥ್‌ ಆಸ್ಪತ್ರೆ ಬಳಿಗೆ ಧಾವಿಸಿ, ತಾವೇ ಕೋವಿಡ್ ರೋಗಿಗಳಿಗೆ ಅನುಕೂಲಕ್ಕಾಗಿ ನಿಯೋಜಿಸಿರುವ ಸ್ನೇಹಜೀವಿ ಬಳಗದ ಉಚಿತ ಆ್ಯಂಬ್ಯುಲೆನ್ಸ್‌ ಮೂಲಕ ಚಾಲಕ ಖಾಸಿಫ್‌ಖಾನ್‌, ಅಬ್ರಾರ್‌ ಹಾಗೂ ಇಫ್ತಾರ್‌ನನ್ನು ಕಳುಹಿಸಿಕೊಟ್ಟರು. ಇವರು ಪಿಪಿಟಿ ಕಿಟ್‌ ಧರಿಸಿ ಸಣ್ಣತಿಮ್ಮೇಗೌಡರ ಶವವನ್ನು ತಾಲೂಕಿನ ಹನಗೋಡು ಹೋಬಳಿಯ ಹಬ್ಬನಕುಪ್ಪೆಗೆ ಕೊಂಡೊಯ್ದು, ಅವರ ಕುಟುಂಬದವರ ಸಮ್ಮುಖದಲ್ಲಿ ತಾವೇ ಶವ ಸಂಸ್ಕಾರ ನಡೆಸುವ ಮೂಲಕ ಮಾನವೀಯತೆ ಮೆರೆದರು.

ಇವರ ಸೇವೆಯನ್ನು ಗ್ರಾಮಸ್ಥರು ಸ್ಮರಿಸಿದರು. ಶಾಸಕರು ಸಹ ಸ್ನೇಹಜೀವಿ ಬಳಗದ ಕಾರ್ಯವನ್ನು ಪ್ರಶಂಸಿಸಿದರು. ಹುಣಸೂರಿನ ವತ್ಸಲ ಅವರ ಶವವನ್ನು ನಗರಸಭೆಯ ಸಿಬ್ಬಂದಿ ಶವ ಸಾಗಿಸುವ ವಾಹನದ ಮೂಲಕ ಬೈಪಾಸ್‌ ರಸ್ತೆಯ ಸ್ಮಶಾನಕ್ಕೆ ಕೊಂಡೊಯ್ದು ಕುಟುಂಬದವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಿದರು.

ಟಾಪ್ ನ್ಯೂಸ್

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.