ಅಗತ್ಯ ವಸ್ತು ಖರೀದಿಗೆ ಸತತ 4 ದಿನಕಾಯಿಸೋದು ಸರಿನಾ?
Team Udayavani, May 26, 2021, 1:41 PM IST
ಎಚ್.ಬಿ.ಬಸವರಾಜು
ಎಚ್.ಡಿ.ಕೋಟೆ: ಕೊರೊನಾ ಹಾಗೂ ಲಾಕ್‌ಡೌನ್‌ನಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವಪರಿಸ್ಥಿತಿಯಲ್ಲಿ ವಾರದಲ್ಲಿ ಸತತ 4 ದಿನ ಅಂಗಡಿಗಳನ್ನು ಮುಚ್ಚುವ ತೀರ್ಮಾನ ಕೈಗೊಂಡಿರುವುದುಸರಿಯಲ್ಲ. ಇದರಿಂದ ಅಂದಿನ ದುಡಿಮೆಯಲ್ಲೇಅಂದಿನ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುವಕೂಲಿ ಕಾರ್ಮಿಕರಿಗೆ ಹೊಡೆತ ಬೀಳಲಿದೆ.ಮತ್ತೂಂದಡೆ 4 ದಿನ ಬಿಟ್ಟು ಅಂಗಡಿಗಳನ್ನುತೆರೆದಾಗ ಒಮ್ಮೆಲೆ ಜನರು ಮುಗಿ ಬೀಳುವುದರಿಂದ ಜನಜಂಗುಳಿ ನಿರ್ಮಾಣವಾಗಿ ಸೋಂಕು ಹರಡುವ ಸಾಧ್ಯತೆ ಇದೆ.
ಇದು ಅವ್ಯವಸ್ಥೆಯಿಂದ ಕೂಡಿದನಿಯಮವಾಗಿದೆ.ಬಹುತೇಕ ಕೂಲಿ ಕಾರ್ಮಿಕರನ್ನೇಹೊಂದಿರುವ ಪಟ್ಟಣಕ್ಕೆ ಈ ನಿಯಮಪಾಲಿಸುವುದು ಕಷ್ಟವಾಗಿದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.ಪಟ್ಟಣದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲುಭಾನುವಾರ ಸೋಮವಾರ ಮತ್ತು ಮಂಗಳವಾರಮಾತ್ರ ಬೆಳಗಿನ 6ಗಂಟೆಯಿಂದ 10ಗಂಟೆ ತನಕನಿಯಮದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆಅವಕಾಶ ನೀಡಲಾಗಿದೆ.
ಬುಧವಾರ, ಗುರುವಾರ,ಶುಕ್ರವಾರ ಮತ್ತು ಶನಿವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ವೈದ್ಯಕೀಯ ಸೇವೆಗಳಿಗೆಮಾತ್ರ ಅವಕಾಶ ನೀಡಲಾಗಿದ್ದು, ನಾಲ್ಕು ದಿನಅಂಗಡಿಗಳನ್ನು ಸಂಪೂರ್ಣ ಬಂದ್ ಆಗಿರುತ್ತವೆ.ಹಾಲು ಮಾರಾಟದ ಅಂಗಡಿಗೆ ಬೆಳಗಿನ 6ರಿಂದ10ಗಂಟೆ ತನಕ ಮಾತ್ರ ಅವಕಾಶಕಲ್ಪಿಸಲಾಗಿದೆ.ಈ ಕಠಿಣ ನಿರ್ಬಂಧ ಪ್ರಕಾರ, ಮಂಗಳವಾರಅಗತ್ಯ ವಸ್ತುಗಳ ಖರೀದಿಗೆ ಕೊನೆಯ ದಿನ.
ಈ ದಿನಬೆಳಗಿನ 10ಗಂಟೆ ಕಳೆದರೆ ಇನ್ನು ಭಾನುವಾರಬೆಳಗಿನ ತನಕ ಅಂದರೆ ಸತತ ನಾಲ್ಕು ದಿನಯಾವುದೇ ಅಗತ್ಯವಸ್ತುಗಳ ಖರೀದಿಗೆ ಅವಕಾಶಇಲ್ಲ. ಅನಗತ್ಯವಾಗಿ ನಿಯಮ ಉಲ್ಲಂಘಿಸಿವ್ಯಾಪಾರ ವಹಿವಾಟು ನಡೆಸುವ ಅಂಗಡಿಗಳವಿರುದ್ಧ ಕೋವಿಡ್ ಮಾರ್ಗಸೂಚಿ ಅನ್ವಯಕಾನೂನು ಕ್ರಮ ಕೈಗೊಳ್ಳುವುದಾಗಿ ಪುರಸಭೆ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಶಾಸಕ ಅನಿಲ್ ಚಿಕ್ಕಮಾದುಅವರು ತಾಲೂಕು ಅಧಿಕಾರಿಗಳ ಟಾಸ್ಕ್ಫೋರ್ಸ್‌ಸಮಿತಿ ಹಾಗೂ ವರ್ತಕರ ಸಭೆ ನಡೆಸಿ, ಈ ನಿಯಮಜಾರಿಗೆಕಟ್ಟುನಿಟ್ಟಿನ ಆದೇಶ ನೀಡಿದ್ದರು.ಹೀಗಾಗಿ ಪಟ್ಟಣದಲ್ಲಿ ಹೊಸ ನಿಯಮ ಜಾರಿಯಾಗಿದ್ದು, ಮಂಗಳವಾರ ಬಿಟ್ಟರೆ ಅಗತ್ಯ ವಸ್ತುಗಳಖರೀದಿಗೆ4ದಿನ ಕಾಯಬೇಕಾಗುತ್ತದೆ.
ಆದ್ದರಿಂದಗ್ರಾಹಕರು ಮಂಗಳವಾರ ವಸ್ತುಗಳನ್ನು ಕೊಳ್ಳಲುಅಂಗಡಿ, ಮಳಿಗೆಗಳು ಮುಂದೆ ಸಾಲಗಟ್ಟಿ ನಿಂತಿದ್ದರು. ಜನಜಂಗುಳಿ ನಿರ್ಮಾಣವಾಗಿತ್ತು. ಸಾಮಾಜಿಕ ಅಂತರ ಮಾಯವಾಗಿದ್ದು, ಬೇಕಾಬಿಟ್ಟಿಯಾಗಿಮಾಸ್ಕ್ ಧರಿಸಲಾಗಿತ್ತು. ಜೊತೆಗೆ ವಾಹನಗಳಸಂಚಾರಕೂಡ ಅಧಿಕವಾಗಿತ್ತು.
ಗುಂಪುಗೂಡಲು ಸಹಕಾರಿ: ವಾರದಲ್ಲಿ3ದಿನಮಾತ್ರ ವ್ಯಾಪಾರ ನಡೆಸಿ 4 ದಿನ ಬಂದ್ ಮಾಡುವುದರಿಂದ ಭಾನುವಾರ ಅಂಗಡಿಗಳು ಬಾಗಿಲು ತೆರೆಯುತ್ತಿದ್ದಂತೆಯೇ ಅಗತ್ಯ ವಸ್ತುಗಳ ಖರೀದಿಗೆ ಜನಮುಗಿ ಬೀಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ.ಒಮ್ಮೆಲೆ ದಿನಸಿ, ತರಕಾರಿ ಖರೀದಿಗೆ ಜನರುದುಂಬಾಲು ಬೀಳುತ್ತಾರೆ. ಅದರಲ್ಲೂ ಬೆಳಗ್ಗೆ ಮಾತ್ರಅವಕಾಶ ನೀಡಿರುವುದರಿಂದ ಈ ಅವಧಿಯಲ್ಲಿಜನರು ಗುಂಪುಗೂಡುತ್ತಾರೆ. ಜನದಟ್ಟಣೆಉಂಟಾಗುತ್ತದೆ. ಈ ವೇಳೆ ಸೋಂಕು ಹರಡುವಸಾಧ್ಯತೆ ಇರುತ್ತದೆ. ಈ ಹೊಸ ನಿಯಮಅಷ್ಟೊಂದು ಸಮಂಜಸವಾಗಿಲ್ಲ ಎಂಬ ಮಾತುಗಳುಸಾರ್ವಜನಿಕ ವಲಯದಲ್ಲಿಕೇಳಿ ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.