ಆನೆ ಮಾವುತ,ಕಾವಾಡಿಗರಿಗೆ ಕೋವಿಡ್ ಟೆಸ್ಟ್
Team Udayavani, Oct 4, 2020, 1:16 PM IST
ಅರಮನೆ ಆವರಣದಲ್ಲಿ ಆನೆಗಳ ಮಾವುತರು,ಕಾವಾಡಿಗಳಿಗೆಕೋವಿಡ್ ಟೆಸ್ಟ್ ನಡೆಸಲಾಯಿತು.
ಮೈಸೂರು: ಗಜಪಡೆಯೊಂದಿಗೆ ಅರಮನೆಯಂಗಳಕ್ಕೆ ಆಗಮಿಸಿದ ಮಾವುತ ಮತ್ತು ಕಾವಾಡಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು. ಈ ಬಾರಿಯ ದಸರಾ ಆನೆಗಳೊಂದಿಗೆ ಬಂದಿರುವ 15 ಮಂದಿ ಮಾವುತರು ಮತ್ತು ಕಾವಾಡಿಗರಿಗೆ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸಲಾಯಿತು.
ಜೊತೆಗೆ ಸ್ಥಳದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಸೇರಿ 19 ಮಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ನೇತೃತ್ವದಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಯಿತು. ಬಳಿಕ ಎಲ್ಲಾ ವರದಿಯೂ ನೆಗೆಟಿವ್ ಬಂದಿದ್ದು, ಆರ್‌ಟಿಪಿಸಿಆರ್ ಪರೀಕ್ಷೆಗೆ ಎಲ್ಲರ ಗಂಟಲು ದ್ರವವನ್ನು ಕ ಳುಹಿಸಲಾಯಿತು. ಇದಕ್ಕೂ ಮುಂಚೆ ಕೆಲವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಎಲ್ಲರ ಮನವೊಲಿಸಿ ಪರೀಕ್ಷೆಗೆ ಒಪ್ಪಿಸಿ, ಸ್ವ್ಯಾಬ್ ಪಡೆದರು. ಈ ಸಂದರ್ಭ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
ಶೀಘ್ರವೇ ಭಾರ ಹೊರುವ ತಾಲೀಮು: ಶನಿವಾರ ಮುಂಜಾನೆ ಗಜಪಡೆಗೆ ಅರಮನೆಯ ಆವರಣದಲ್ಲಿ ಮೊದಲ ದಿನವಾಗಿ ಮೆರವಣಿಗೆ ತಾಲೀಮು ನೀಡಲಾಗಿದ್ದು, ಇನ್ನೆರೆಡು ದಿನಗಳಲ್ಲಿ ಅಭಿಮನ್ಯು ಆನೆಗೆ ಭಾರ ಹೊರುವ ತಾಲೀಮು ಆರಂಭವಾಗಲಿದೆ. ಅದಕ್ಕಾಗಿ ನಮ್ದಾ ಗಾದಿ ಸಿದ್ಧವಾಗಿದ್ದು, ಅಭಿಮನ್ಯು ಹೆಗಲಿಗೆ ನಮ್ದಾ, ಗಾದಿ ಕಟ್ಟಿ ಅದರ ಮೇಲೆ ತೊಟ್ಟಿಲು ಇಟ್ಟು ಭಾರ ಮೂಟೆಗಳನ್ನು ಹೊರಿಸಿ ಭಾರ ಹೊರುವುದನ್ನು ಅಭ್ಯಾಸ ಮಾಡಿಸ ಲಾಗುತ್ತದೆ.
ಔಷಧ ಸಿಂಪಡಣೆ: ಕೋವಿಡ್-19 ಹಿನ್ನಲೆ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶನಿವಾರ ಬೆಳಗ್ಗೆ ಆನೆಗ ಳು ಉಳಿದುಕೊಂಡಿರುವ ಶೆಡ್ ಹಾಗೂ ಓಡಾಡುವ ಸ್ಥಳ ಗಳಲ್ಲಿ ಸಿಬ್ಬಂದಿ ಸೋಂಕು ನಿವಾರಕ ಔಷಧವನ್ನು ಸಿಂಪಡಿಸಿದರು. ಜೊತೆಗೆ ಎಲ್ಲಾ ಮಾವುತರು ಹಾಗೂ ಕಾವಾಡಿಗಳಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಯಿತು.
ಆನೆಗಳತ್ತ ನೋ ಎಂಟ್ರಿ: ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮಾವುತರು, ಕಾವಾಡಿಗರು ಹಾಗೂ ಆನೆಗಳ ಆರೋಗ್ಯದ ದೃಷಿ rಯಿಂದ ಸಾರ್ವಜನಿಕರು, ಅರಮನೆಗೆ ಭೇಟಿ ನೀಡುವ ಪ್ರವಾಸಿಗರನ್ನು ಆನೆಗಳು ಹಾಗೂ ಮಾವುತ ಮತ್ತು ಕಾವಾಡಿಗಳನ್ನು ಸುಳಿದಾಡಲು ನಿಷೇಧಿಸಲಾಗಿದೆ. ಈ ಹಿನ್ನೆಲೆ ಯಾರನ್ನೂ ಆನೆಗಳು ಹಾಗೂ ಮಾವುತರು ಶೆಡ್ ಬಳಿ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ.
ಅರಮನೆಯಲ್ಲಿ ಸ್ವಚ್ಛತೆ: ಶುಕ್ರವಾರ ಗಜಪಡೆಯನ್ನು ಬರಮಾಡಿಕೊಂಡ ಕಾರ್ಯಕ್ರಮದ ಹಿನ್ನೆಲೆ ಆವರಣದಲ್ಲಿ ಹೂವು, ಮತ್ತಿತರ ಕಸದ ರಾಶಿ ಬಿದ್ದಿತ್ತು. ಶನಿವಾರ ಪೌರಕಾರ್ಮಿಕರು ಅರಮನೆ ಆವರಣವನ್ನು ಸ್ವಚ್ಛಗೊಳಿಸಿದರು. ಜೊತೆಗೆ ಇತರ ತಯಾರಿ ಚಟುವಟಿಕೆಗಳು ಎಂದಿನಂತೆ ನಡೆದಿದೆ.
ಆನೆಗಳಿಗೆ ಕೋವಿಡ್ ಟೆಸ್ಟ್? : ಆನೆಗಳಿಗೆ ಕೋವಿಡ್ ಪರೀಕ್ಷೆ ಮಾಡಲು ಸರಿಯಾದ ಸಾಧನ ಇಲ್ಲದ ಕಾರಣ ಸದ್ಯಕ್ಕೆ ಪರೀಕ್ಷೆ ಮಾಡಿಲ್ಲ. ಆನೆಗಳಿಗೆ ಈ ಸೋಂಕಿನಿಂದ ಹೆಚ್ಚು ಅಪಾಯವಿಲ್ಲ. ಆದ್ದರಿಂದ ಅವುಗಳಿಗೆ ಪರೀಕ್ಷೆಮಾಡುವ ಬಗ್ಗೆ ಇನ್ನೂ ಯೋಚಿಸಿಲ್ಲ. ಇಂದು ಅಥವಾ ನಾಳೆ ಆನೆಗಳಿಗೆ ಭಾರ ಹೊರುವ ತಾಲೀಮು ಆರಂಭಿಸಲಾಗುವುದು ಎಂದು ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.