ಆರೆಸ್ಸೆಸ್ ಮೈ.ಚ.ಜಯದೇವ್ ಅಂತ್ಯಸಂಸ್ಕಾರ
Team Udayavani, Feb 22, 2017, 12:27 PM IST
ಮೈಸೂರು: ವಯೋಸಹಜ ಅನಾರೋಗ್ಯದಿಂದ ವಿಧಿವಶರಾದ ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಮೈ.ಚ. ಜಯದೇವ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ನಗರದ ವಿದ್ಯಾರಣ್ಯಪುರಂನಲ್ಲಿ ಇರುವ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ಮಂಗಳವಾರ ನೆರವೇರಿತು.
ಬಿಜೆಪಿ ಸೇರಿದಂತೆ ಸಂಘ ಪರಿವಾರದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಮೃತರ ಅಂತಿಮ ದರ್ಶನ ಪಡೆದರು. ಇದಕ್ಕಾಗಿ ನಗರದ ಅಗ್ರಹಾರದ ರಾಮಾನುಜರಸ್ತೆಯ 9ನೇ ತಿರುವಿ ನಲ್ಲಿರುವ ಮೃತರ ಸ್ವಗೃಹದಲ್ಲಿ ಮಧ್ಯಾಹ್ನ 12.30ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಮಧ್ಯಾಹ್ನ 12.45ಕ್ಕೆ ಮೃತದೇಹವನ್ನು ತೆರೆದ ವಾಹನದಲ್ಲಿ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಗಣ್ಯರಿಂದ ಅಂತಿಮ ನಮನ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್‌ಸಿಂಹ, ಶ್ರೀರಾಮುಲು, ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಸಚಿವರಾದ ಸಿ.ಎಚ್.ವಿಜಯಶಂಕರ್, ಎಸ್.ಎ.ರಾಮದಾಸ್, ಬಿಜೆಪಿ ಮುಖಂಡರಾದ ಗೋ.ಮಧುಸೂದನ್, ಕೆ.ಆರ್.ಮಲ್ಲಿಕಾರ್ಜುನಪ್ಪ, ತೋಂಟದಾರ್ಯ, ಎಚ್.ವಿ.ರಾಜೀವ್, ಪ್ರೊ.ಗುರುನಂಜಯ್ಯ, ಕಾ.ಪು.ಸಿದ್ದಲಿಂಗಸ್ವಾಮಿ, ಸಿ.ರಮೇಶ್, ಚಿಕ್ಕಣ್ಣ, ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಮಂಜುನಾಥ್, ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ಸೇರಿದಂತೆ ನಗರ ಪಾಲಿಕೆ ಸದಸ್ಯರು ಮೃತ ಮೈ.ಚ.ಜಯದೇವ ಅವರ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.
ಇದಲ್ಲದೆ ಆರ್‌ಎಸ್‌ಎಸ್‌ನ ಅನೇಕ ಹಿರಿಯ ಮುಖಂಡರು ಜಯದೇವ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಪ್ರಮುಖವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಮೋದನ್ ವಿಭಾಗದ ಅಖೀಲ ಭಾರತ ಪ್ರಮುಖ ಸು.ರಾಮಣ್ಣ, ರಾಷ್ಟ್ರೀಯ ಸಹ ಕಾರ್ಯದರ್ಶಿ ಮುಕುಂದ್, ರಾಷ್ಟ್ರೋತ್ಥಾನ ಪರಿಷತ್ ಉಸ್ತುವಾರಿ ಚಂದ್ರಶೇಖರ ಭಂಡಾರಿ, ವಿಶ್ವಹಿಂದೂ ಪರಿಷತ್‌ನ ವಲಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಸೇರಿದಂತೆ ಹಲವು ಮಂದಿ ಪ್ರಮುಖರು ಅಗಲಿದ ಹಿರಿಯ ನಾಯಕನಿಗೆ ಅಂತಿಮ ವಿದಾಯ ಹೇಳಿದರು.
ಈ ವೇಳೆ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದ ಜಯದೇವರ ಅವರ ಬಾಲ್ಯದ ಒಡನಾಡಿಗಳು ಅವರೊಂದಿಗಿನ ಒಡನಾಟದ ನೆನಪುಗಳನ್ನು ನೆನೆದು ಕಂಬನಿ ಮಿಡಿದರು. ಇದಕ್ಕೂ ಮುನ್ನ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೃತರ ಅಂತಿಮ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ದುರ್ದುಂಡೇಶ್ವರ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಹ ಮೈ.ಚ. ಜಯದೇವ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಮೃತರ ಸಂತಾಪ ಸಭೆ: ಮೈ.ಚ. ಜಯದೇವರ ಅವರ ನಿಧನದ ಹಿನ್ನೆಲೆಯಲ್ಲಿ ಸುತ್ತೂರು ಶ್ರೀ ಹಾಗೂ ಆರ್‌ಎಸ್‌ಎಸ್ ಕುಟುಂಬ ಪ್ರಮೋದನ್ ವಿಭಾಗದ ಅಖೀಲ ಭಾರತ ಪ್ರಮುಖ ಸು.ರಾಮಣ್ಣ ನೇತೃತ್ವದಲ್ಲಿ ಸಂತಾಪ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸು.ರಾಮಣ್ಣ, ಮೃತ ಮೈ.ಚ.ಜಯದೇವ ಅವರು ಅನೇಕರಿಗೆ ಪ್ರೇರಕ ಶಕ್ತಿಯಾಗಿದ್ದರು. ಸರಳ ಜೀವನಕ್ಕೆ ಒತ್ತು ನೀಡಿದ ಅವರ ಬದುಕು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದ ಅವರು ಸಂಘಕ್ಕಾಗಿ ಜೀವನವನ್ನೇ ಮುಡಿಪಾಗಿರಿಸಿದ್ದರು.
ಧೈರ್ಯದ ಮೇರು, ಹೋರಾಟದಲ್ಲಿ ಮುಂದಿದ್ದ ಜಯದೇವ ಅವರದ್ದು ಯಾರಿಗೂ ಹೆದರುವ ವ್ಯಕ್ತಿತ್ವ ವಾಗಿರಲಿಲ್ಲ. ರಾಷ್ಟ್ರೋತ್ಥಾನ ಪರಿಷತ್‌ನ ಶಿಲ್ಪಿಯಾಗಿದ್ದ ಅವರು ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಮಾತಿನಂತೆ ಬದುಕು ನಡೆಸಿದವರು ಎಂದು ಬಣ್ಣಿಸಿದರು. ಸುತ್ತೂರು ಶ್ರೀಗಳು ಮಾತನಾಡಿ, ಸಂಘದ ಹೊರತಾಗಿ ಬೇರೇನು ಬೇಕಿರದ ಹಾಗೂ ಬೇರೇನನ್ನು ಚಿಂತಿಸದ ಮೈ.ಚ. ಜಯದೇವ ಅವರು ತಮ್ಮ ರಕ್ತದ ಕಣ ಕಣದಲ್ಲೂ ರಾಷ್ಟ್ರಪ್ರೇಮವನ್ನು ತುಂಬಿಕೊಂಡಿದ್ದರು ಎಂದು ಸ್ಮರಿಸಿದರು.
ಜಯದೇವ್ ಅವರು ನನಗೆ ತಂದೆ – ಗುರುವಿನ ಸ್ಥಾನದಲ್ಲಿದ್ದ ಮಾರ್ಗದರ್ಶಕ ರಾಗಿದ್ದರು. ನನ್ನ ಜೀವನದಲ್ಲಿ ದೊರೆತ ಎಲ್ಲಾ ಸ್ಥಾನಗಳಿಗೂ ಅವರೇ ಕಾರಣ ವಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ಅವರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆಯುತ್ತಿದ್ದೆ. ಸಂಘಕ್ಕಾಗಿ ಜೀವನವನ್ನೇ ಮುಡಿಪಾಗಿರಿಸಿದ್ದ ಅವರು ನನ್ನಂತಹ ಹಲವು ನಾಯಕರನ್ನು ದೇಶ ಸೇವೆಗೆ ಕರೆತಂದರು. ಇಂತಹ ಹಿರಿಯ ನನ್ನು ಕಳೆದು ಕೊಂಡು ಎಲ್ಲರೂ ತಬ್ಬಲಿಯಾಗಿದ್ದೇವೆ.
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಜಯದೇವ ಅವರು ರಾಷ್ಟ್ರ ಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿ ಕೊಂಡಿದ್ದರು. ನನ್ನಂತಹ ಹಲ ವಾರು ನಾಯಕರುಗಳನ್ನು ದೇಶ ಸೇವೆಗೆ ಕರೆ ತಂದ ಅವರ ಆದರ್ಶ ಜೀವನ ಅನೇಕರಿಗೆ ಪ್ರೇರಣೆಯಾಗಿದೆ.
-ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.