ಮೈಸೂರು ವಾರಿಯರ್ಸ್‌ನಿಂದ ಕ್ರಿಕೆಟ್ ಟ್ಯಾಲಂಟ್ ಹಂಟ್
Team Udayavani, Jul 21, 2019, 3:00 AM IST
ಮೈಸೂರು: 2019ರ ಕೆಪಿಎಲ್‌ಗೆ ಮೈಸೂರು ವಾರಿಯರ್ಸ್ ಮಾಲೀಕರಾಗಿರುವ ಎನ್.ಆರ್. ಸಮೂಹ ಹಮ್ಮಿಕೊಂಡಿದ್ದ ಕ್ರಿಕೆಟ್ ಪ್ರತಿಭಾನ್ವೇಷಣೆಯ (ಟ್ಯಾಲಂಟ್ ಹಂಟ್) ಆರನೇ ಆವೃತ್ತಿಯಲ್ಲಿ ಟೂ ಲೆಗ್ಸ್ ಆಟಗಾರರಿಂದ 40 ರಿಂದ 50 ಜನ ಆಯ್ಕೆಯಾಗಿದ್ದು, 23ರಂದು ಮಂಡ್ಯದ ಪಿಇಟಿ ಮೈದಾನದಲ್ಲಿ ನಡೆಯಲಿರುವ ಟ್ರಯಲ್ ಪಂದ್ಯಾವಳಿಯಲ್ಲಿ ಆಟಗಾರರು ಭಾಗವಹಿಸಲಿದ್ದಾರೆ.
ಬೆಂಗಳೂರಿನ ಯಲಹಂಕದ ಜಸ್ಟ್ ಕ್ರಿಕೆಟ್ ಅಕಾಡೆಮಿ ಹಾಗೂ ಮೈಸೂರಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ಪ್ರತಿಭಾನ್ವೇಷಣೆಯ ಪಂದ್ಯಗಳು ನಡೆದವು. ಮೈಸೂರಿನಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಸುಮಾರು 215 ಉತ್ಸಾಹಿ ಆಟಗಾರರು ಭಾಗವಹಿಸಿದ್ದರು. ಅವರಲ್ಲಿ 35 ಬ್ಯಾಟ್ಸ್‌ಮನ್‌ಗಳು, 58 ಜನ ಆಲ್‌ರೌಂಡರ್‌ಗಳು 32ಜನ ಸ್ಪಿನರ್‌ಗಳು, 85 ಜನ ಮತ್ತು 5 ಜನ ವಿಕೆಟ್ ಕೀಪರ್‌ಗಳು ಇದ್ದರು.
ಯಲಹಂಕದ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಆಯ್ಕೆ ಪಂದ್ಯಾವಳಿಯಲ್ಲಿ 300 ಯುವ, ಉತ್ಸಾಹಿ ಕ್ರಿಕೆಟ್ ಆಟಗಾರರು ಸ್ಪರ್ಧೆಗಿಳಿದು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದರು. ಅವರಲ್ಲಿ 70 ಜನ ಮಧ್ಯಮ ವೇಗಿ ಬೌಲರ್‌ಗಳು, 50 ಜನ ಸ್ಪಿನರ್‌ಗಳು, 75 ಬ್ಯಾಟ್ಸ್‌ಮನ್‌ಗಳು, 80 ಜನ ಆಲ್ ರೌಂಡರ್‌ಗಳು ಮತ್ತು 25 ಜನ ವಿಕೆಟ್ ಕೀಪರ್‌ಗಳು ಇದ್ದರು.
ಈ ಪೈಕಿ ಟೂ ಲೆಗ್ಸ್ ಆಟಗಾರರಿಂದ 40-50ಜನ ಆಯ್ಕೆಯಾಗಿದ್ದು, ಇದೇ 23ರಂದು ಮಂಡ್ಯದ ಪಿಇಟಿ ಮೈದಾನದಲ್ಲಿ ನಡೆಯಲಿರುವ ಟ್ರಯಲ್ ಪಂದ್ಯಾವಳಿಯಲ್ಲಿ ಆಟಗಾರರು ಭಾಗವಹಿಸಲಿದ್ದಾರೆ. ಆಯ್ಕೆಯಾಗುವ ಆಟಗಾರರು ಸೈಕಲ್ ಪ್ಯೂರ್ ಅಗರಬತ್ತೀಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ 2019ರ ಕೆಪಿಎಲ್‌ನಲ್ಲಿ ಆಡುವ ಅವಕಾಶ ಪಡೆಯುತ್ತಾರೆ.
ಪ್ರತಿಭಾನ್ವೇಷಣೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಮೈಸೂರು ವಾರಿಯರ್ಸ್‌ನ ಮಾಲೀಕ ಅರ್ಜುನ್ ರಂಗ, ಪ್ರತಿಭಾನ್ವೇಷಣೆಗೆ ಕರ್ನಾಟಕದ ಕ್ರಿಕೆಟ್ ಸಮುದಾಯದಿಂದ ಪ್ರತಿವರ್ಷವೂ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಇಷ್ಟು ದೊಡ್ಡ ಸಂಖ್ಯೆಯ ಕ್ರಿಕೆಟ್ ಪ್ರತಿಭೆಗಳ ಉತ್ಸಾಹ ಮತ್ತು ಶ್ರದ್ಧೆ ಕಂಡು ನಮಗೆ ಸಂತೋಷವಾಯಿತು.
ಈ ಪ್ರತಿಭೆಗಳಲ್ಲಿ ಕೆಲವರನ್ನೇ ಆಯ್ಕೆ ಮಾಡುವುದು ಕಷ್ಟವಾದರೂ, ಈ ಪ್ರಕ್ರಿಯೆ ಯಾವಾಗಲೂ ಮೈಸೂರು ವಾರಿಯರ್ಸ್ ತಂಡಕ್ಕೆ ಅದ್ಭುತ ಆಟಗಾರರನ್ನು ನೀಡಿದೆ. ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾಗುವ ಆಟಗಾರರು 2019ರ ಕೆಪಿಎಲ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ
Mulki: ಉಗುಳಿದರೆ ದಂಡ; ಹಾಕುವವರು ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.