ಕೂಡಿ ಬಾಳುವುದೇ ಬಸವ ಸಂಸ್ಕೃತಿ
Team Udayavani, May 16, 2017, 12:35 PM IST
ಪಿರಿಯಾಪಟ್ಟಣ: ಕೂಡಿಬಾಳುವ ಸಂಸ್ಕೃತಿಯೇ ಬಸವ ಸಂಸ್ಕೃತಿಯಾಗಿದೆ ಆದ್ದರಿಂದ ಬಸವತತ್ವ ಇಂದಿಗೂ ಪ್ರಸ್ತುತ ಎಂದು ಬೇಬಿ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ತಾಲೂಕಿನ ರಾವಂದೂರು ಗ್ರಾಮದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಜವಾಗಿ ಬದುಕುವುದನ್ನು ಬಸವಣ್ಣ ಸಿದ್ಧಾಂತಗಳ ತಿರುಳಾಗಿದ್ದು. ಒಂದು ಸಿದ್ಧಾಂತವನ್ನು ಅಳವಡಿಸಿಕೊಂಡರು ಜೀವನ ಸಾರ್ಥಕ. ಚಿಂತೆಗಳಲ್ಲಿ ಜೀವನವನ್ನು ಕಳೆಯುತ್ತಿದ್ದೇವೆ. ಅದರಿಂದ ಹೊರಬಂದು ಚಿಂತನೆ ಮಾಡಬೇಕು. ಸ್ವಾರ್ಥತೆಯಿಂದ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ. ಆದ್ದರಿಂದ ಭಗವಂತನ ಚಿಂತನೆಯೂ ಅಗತ್ಯ ಎಂದರು.
ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬೆಟ್ಟದಪುರ ಮಠ ಸಂಕಷ್ಟವಿದ್ದ ಸಂದರ್ಭದಲ್ಲಿ ಹಲವರು ಕೈ ಹಿಡಿದಿದ್ದಾರೆ. ಧಾರ್ಮಿಕ ಮನೋಭಾವನೆ ಯುಳ್ಳ ಭಕ್ತರಿಂದ ಸರಕಾರದ ಹಣ ಅಪಮೌಲಿÂàಕರಣವಾದರೂ ಕೊಡುಗೈ ದಾನ ಕಡಿಮೆಯಾಗಿಲ್ಲ. ಪ್ರಪಂಚಕ್ಕೆ ಆಧ್ಯಾತ್ಮಕದ ಬೆಳಕು ನೀಡಿರುವುದು ಭಾರತ. ಬಡವರಾಗಲಿ ಶ್ರೀಮಂತರಾಗಲಿ ಆದರಣೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಸವ ಶರಣ ವಿಚಾರಧಾರೆಗಳನ್ನು ನಾಡಿನಾದ್ಯಂತ ಪಸರಿಸಲಿ ಎಂದು ತಿಳಿಸಿದರು.
ಶಾಸಕ ಕೆ.ವೆಂಕಟೇಶ್ ಮಾತನಾಡಿ, ಮಹಾತ್ಮರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಕೊಂಡಾಗ ಮಾತ್ರ ಬದುಕು ಸಾರ್ಧಕತೆ ಕಾಣುತ್ತದೆ ಎಂದರು. ಗುಂಡ್ಲುಪೇಟೆ ಶಾಸಕಿ ಡಾ.ಗೀತಾಮಹದೇವ್ಪ್ರಸಾದ್ ಮಾತನಾಡಿ, ದಯವೇ ಧರ್ಮದ ಮೂಲವೆಂಬ ಸಕಲ ಪ್ರಾಣಿಗಳ ಬಗ್ಗೆ ಮಾತನಾಡಿದವರು ಬಸವಣ್ಣನವರು. ಯಾವ ಧರ್ಮಕ್ಕೆ ಸೀಮಿತ ಸಂಕುಚಿತ ಮನೋಭಾವನೆ ಹೊಂದಿರುತ್ತದೆ ಅದು ಬಹುದಿನ ಉಳಿಯಲಾರದು. ವಿಶಾಲವಾದ ಮನೋಭಾವನೆಯುಳ್ಳದ್ದು ಬಸವ ತತ್ವ ಆದ್ದರಿಂದ ಪ್ರಪಂಚದಾದ್ಯಂದ ಪಸರಿಸಿದೆ ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, 12ನೇ ಶತಮಾನದಲ್ಲಿ ಜಾತಿಯತೆಯ ವಿರುದ್ಧ ಧ್ವನಿಎತ್ತಿದವರು ವಚನಕಾರರು. ದೇವಾಲಯಗಳಲ್ಲಿ ಅನ್ಯಜಾತಿಯವರಿಗೆ ಪ್ರವೇಶ ಇರದ ಸಂದರ್ಭದಲ್ಲಿ ಶರೀರವೇ ದೇವಾಲಯ ಎಂಬ ಪರಿಕಲ್ಪನೆ ನೀಡಿದವರೇ ವಚನಕಾರರು ಎಂದು ಹೇಳಿದರು.
ಮಾಜಿ ಶಾಸಕ ಎಚ್.ಸಿ.ಬಸವರಾಜು, ಎಂಟುನೂರು ವರ್ಷಗಳ ಹಿಂದೆಯೇ ಸಮಾನತೆ ಸಾರಿದವರು ಬಸವಣ್ಣ. ಇದೇ ರೀತಿ ಸಮಾಜದ ಪಿಡುಗಳನ್ನು ಹೋಗಲಾಡಿಸಲು ದುಡಿದವರು ಡಾ.ಬಿ.ಆರ್.ಅಂಬೇಡ್ಕರ್ ಇವರಿಬ್ಬರು ಸಮಾಜದ ಕಣ್ಣುಗಳು, ಜಾತಿ ವ್ಯವಸ್ಥೆ ತೊಲಬೇಕು ರಾಜಕೀಯ ತತ್ವಗಳು ಜಾತಿಯಾದಾರದ ಮೇಲೆ ಹೋಗುವುದು ತಡೆಯಬೇಕು ಎಂದು ತಿಳಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಶಾಸಕಿ ಡಾ.ಗೀತಾಮಹದೇವಪ್ರಸಾದ್, ತಂಬಾಕು ಮಂಡಳಿ ಉಪಾಧ್ಯಕ್ಷ ಪಿ.ವಿ.ಬಸವರಾಜಪ್ಪ, ವೈದ್ಯರಾದ ಡಾ.ಜೆ.ಅರವಿಂದ, ಡಾ.ಆರ್.ಎಸ್.ಪ್ರತಿಮ ಅರವಿಂದ, ಶಿಕ್ಷಕ ಕೆ.ಸಿ.ಸತೀಶ್, ವೀರಯೋಧರನ್ನು ಮತ್ತು ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎರೆಹೊಸಹಳ್ಳಿ ಮಠದ ಡಾ.ಬಸವಕುಮಾರ ಸ್ವಾಮಿ, ದಿಂಡಗಾಡು ಅಪ್ಪಾಜಿಸ್ವಾಮಿ, ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕವನ ಬಸವಕುಮಾರ, ಆರ್.ಟಿ.ಸತೀಶ್, ಬಿಜೆಪಿ ರಾಜ್ಯಪರಿಷತ್ ಸದಸ್ಯ, ಎಚ್.ಡಿ.ಕೋಟೆ ಅಖೀಲಭಾರ ವೀರಶೈವ ಮಹಾಸಭಾದ ಎಚ್.ಡಿ.ಕೋಟೆ ಅಧ್ಯಕ್ಷ ಪಿ.ವಿ.ಬಸವರಾಜು, ಶಶಿಕಲಾ ಗಿರೀಶ್, ಗ್ರಾಪಂ ಅಧ್ಯಕ್ಷೆ ರಾವಂದೂರು, ತಹಶೀಲ್ದಾರ್ ಜೆ.ಮಹೇಶ್, ಪರಿಸರಹೋರಾಟಗಾರ ಕೆ.ಎನ್.ಸೋಮಶೇಖರ್,
ಮುಖ್ಯಮಂತ್ರಿಗಳ ಮಾಜಿ ಪತ್ರಿಕಾಕಾರ್ಯದರ್ಶಿ ಆರ್.ಪಿ.ಜಗದೀಶ್, ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಕೆಪಿಸಿಸಿ ಸದಸ್ಯ ಡಿ.ಟಿ.ಸ್ವಾಮಿ, ನಿವೃತ್ತ ಅಬಕಾರಿ ಆಯುಕ್ತ ಈàರಪ್ಪ, ಬಿಇಒ ಆರ್.ಕರಿಗೌಡ, ಮುಖಂಡರಾದ ಕೆ.ಹೊಲದಪ್ಪ, ಆರ್.ಎಲ್.ಮಣಿ, ಆರ್.ಎಸ್.ವಿಜಯಕುಮಾರ್, ಕುಮಾರವಿಜಯ್, ಆರ್.ಎಸ್. ಮಹೇಶ್, ಬಿ.ವಿ.ಅನಿತಾ, ಬಿ.ಜೆ.ಜಗದೀಶ್, ಎಚ್.ಎನ್.ಪಾಲಾಕ್ಷ, ಶಿವಸ್ವಾಮಿ, ಆನಂದ್, ಮಂಜುಳ ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.