ದಲಿತ-ರೈತ ಸಂಘಟನೆಗಳು ಒಂದಾಗಲಿ  


Team Udayavani, Mar 2, 2018, 12:31 PM IST

m5-dalita.jpg

ಮೈಸೂರು: ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಆಶಯದಂತೆ ದಲಿತ ಹಾಗೂ ರೈತ ಸಂಘಟನೆಗಳು ಒಂದಾಗಿ ಸಾಗಬೇಕಿದೆ ಎಂದು ಹಿರಿಯ ಸಮಾಜವಾದಿ ಪ.ಮಲ್ಲೇಶ್‌ ಅಭಿಪ್ರಾಯಪಟ್ಟರು.

 ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ ಸಂಘಟನೆಗಳು ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ರೈತ ಮುಖಂಡ ಕೆ.ಎಸ್‌.ಪುಟ್ಟಣ್ಣಯ್ಯ ಅವರ ನುಡಿನಮನದಲ್ಲಿ ಮಾತನಾಡಿದರು.

ಸಂಘಟನೆಗಳು ಒಂದಾಗಲಿ: ಜಾತೀಯತೆ ಎಂಬುದು ಮೀತಿ ಮೀರಿರುವ ಈ ಸಂದರ್ಭದಲ್ಲಿ ಕೋಮುವಾದ ಎಲ್ಲರ ಮನೆ ಬಾಗಿಲಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಕೋಮುವಾದ ಹೋಗಲಾಡಿಸಲು ಕೆ.ಎಸ್‌.ಪುಟ್ಟಣ್ಣಯ್ಯ ಅವರ ಅವಶ್ಯಕತೆ ಇತ್ತು. ಇದೀಗ ಕೋಮುವಾದದ ವಿರುದ್ಧ ನಾವೆಲ್ಲರೂ ಒಂದಾಗಿ ಸಂಘಟಿತರಾಗಿ ಹೋರಾಡಬೇಕಿದೆ.

ಈ ಹಿಂದೆ ರೈತಸಂಘ ಮತ್ತು ದಸಂಸ ಸದಸ್ಯರು ಒಂದಾಗಿ ಕೆಲಸ ಮಾಡಲು ಪುಟ್ಟಣ್ಣಯ್ಯ ತಯಾರಾಗಿದ್ದರು. ಆದರೆ, ಇಂದಿಗೂ ಈ ಎರಡು ಸಂಘಟನೆಗಳು ಒಂದಾಗಿ ಸಾಗಲಿಲ್ಲ, ಆದರೆ ಪುಟ್ಟಣ್ಣಯ್ಯ ಅವರ ನಿರೀಕ್ಷೆಯಂತೆ 2 ಸಂಘಟನೆಗಳು ಈಗಲಾದರೂ ಒಂದಾಗಿ ಮುನ್ನಡೆಯಬೇಕಿದೆ ಎಂದು ಹೇಳಿದರು.

ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ರೈತ ಸಂಘದ ಮೆದುಳು ಪೊ›.ನಂಜುಂಡಸ್ವಾಮಿ, ಹೃದಯ ಸುಂದರೇಶನ್‌ ಆಗಿದ್ದು, ಇವರೆಡರ ಸಮ್ಮಿಲನವಾಗಿ ಪುಟ್ಟಣ್ಣಯ್ಯ ಇದ್ದರು. ಹೀಗಾಗಿ ಪುಟ್ಟಣ್ಣಯ್ಯ ಅನುಭವದಿಂದ ಹುಟ್ಟಿದ ಬುದ್ಧಿಜೀವಿಯಾಗಿದ್ದು, ಯಾವುದೇ ಭಿನ್ನಾಭಿಪ್ರಾಯ, ಮನಸ್ಸುಗಳು ಹೊಡೆದರೂ, ಪುಟ್ಟಣ್ಣಯ್ಯ ರೈತ ಚಳವಳಿಯಲ್ಲಿ ಗಟ್ಟಿಯಾಗಿ ನಿಂತಿದ್ದರು ಎಂದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ವಿಶಾಲ ದೃಷ್ಟಿಕೋನ ಹೊಂದಿದ್ದ ಪುಟ್ಟಣ್ಣಯ್ಯ, ದುಡಿಯುವ ವರ್ಗಗಳ ಜನರ ಮೇಲೆ ಪ್ರಭಾವ ಬೀರಿದ್ದರು. ಪುಟ್ಟಣ್ಣಯ್ಯ ಅವರ ಅಗಲಿಕೆಗೆ ನಾಡು ಕಂಬನಿ ಮಿಡಿದಿದ್ದು, ಸಾಗರೋಪಾದಿಯಲ್ಲಿ ಆಗಮಿಸಿದ ಜನರು ಅಂತಿಮ ನಮನ ಸಲ್ಲಿಸಿದರು ಎಂದು ಹೇಳಿದರು. 

ವಿಧಾನಸಭಾ ಮಾಜಿ ಅಧ್ಯಕ್ಷ ಕೃಷ್ಣ ಮಾತನಾಡಿ, ಪುಟ್ಟಣ್ಣಯ್ಯ ಅವರು ಪ್ರಬುದ್ಧ ಹೋರಾಟಗಾರರಾಗಿದ್ದು, ತಮ್ಮ ಮಾತಿನ ಮೂಲಕ ಜನರ ಹೃದಯ ಮುಟ್ಟುತ್ತಿದ್ದರು. ಹೀಗಾಗಿ ಈ ಕಷ್ಟವನ್ನು  ಪರಿಹರಿಸುವುದು ತಮ್ಮ ಕರ್ತವ್ಯವೆಂದು ನಂಬಿ ಬದುಕಿದ್ದರು. ಹೀಗಾಗಿ ಎಲ್ಲಾ ಸಂಘಟನೆಗಳು ಬಲಿಷ್ಠವಾಗಲು ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಎಲ್ಲರೂ ಒಂದಾಗಿ ಜನಪರ ವಿಚಾರಗಳೊಂದಿಗೆ ಮುನ್ನೆಡೆಯಬೇಕು.

ಮೈಸೂರು ವಿವಿ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ವಿಶ್ರಾಂತ ನಿರ್ದೇಶಕ ಡಾ.ಸಿ.ಕೃಷ್ಣ, ಪೊ›.ಕೆ.ಎಸ್‌.ಭಗವಾನ್‌, ಹರವು ದೇವೇಗೌಡ, ರಂಗಾಯಣದ ಮಾಜಿ ನಿರ್ದೇಶಕ ಎಚ್‌.ಜನಾರ್ಧನ್‌, ಎಸ್‌ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯ ಎಂ.ಶಶಿಧರ, ರೈತ ಸಂಘದ ಎಂ.ಎಸ್‌.ಅಶ್ವತ್ಥನಾರಾಯಣರಾಜೇ ಅರಸ್‌, ಆಲಗೂಡು ಶಿವಕುಮಾರ್‌, ಶಂಭುಲಿಂಗಸ್ವಾಮಿ,

ನಂಜುಂಡಸ್ವಾಮಿ, ಸ್ವರಾಜ್‌ ಇಂಡಿಯಾದ ಎಚ್‌.ಎ.ನಂಜುಂಡಸ್ವಾಮಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಸವರಾಜು, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಷಾದ್ರಿ, ಪೊ›.ಶಬೀರ್‌ ಮುಸ್ತಾಫ‌, ಒಡನಾಡಿ ಸ್ಟಾನ್ಲಿ, ಸರಗೂರು ನಟರಾಜ್‌, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಹೊಸಕೋಟೆ ಬಸವರಾಜು, ಡಿ.ಹೊಸಳ್ಳಿ ಶಿವು ಮತ್ತಿತರರಿದ್ದರು.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.