ಮಳೆಗೆ 67 ಎಕರೆ ಬೆಳೆ ನಷ್ಟ, 405 ಮನೆಗೆ ಹಾನಿ


Team Udayavani, Apr 26, 2019, 2:06 PM IST

mys-1

ಹುಣಸೂರು: ತಾಲೂಕಿನಲ್ಲಿ ಮಂಗಳವಾರ ಬಿರುಗಾಳಿ ಸಹಿತ ಮಳೆಗೆ 19 ಗ್ರಾಮಗಳಲ್ಲಿ ಈವರೆಗೆ 405 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು 67 ಎಕರೆಯಲ್ಲಿ ಬೆಳೆ ಹಾನಿಯಾಗಿ ಒಂದು ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿರ ಬಹುದೆಂದು ಅಂದಾಜಿಸಲಾಗಿದೆ ಎಂದು ತಹಶೀಲ್ದಾರ್‌ ಬಸವರಾಜು ತಿಳಿಸಿದರು.

ಹಾನಿ ಬಗ್ಗೆ ಪ್ರಥಮ ಮಾಹಿತಿ ಪಡೆದು ಮಾಹಿತಿ ನೀಡಿರುವ ತಹಶೀಲ್ದಾರ್‌ ಅವರು ಮನೆಗಳಿಗೆ ಹಾನಿಯಾಗಿರುವ ಪೈಕಿ ಹನಗೋಡು ಹೋಬಳಿ ಯಲ್ಲಿ ಅತಿ ಹೆಚ್ಚು ಅಂದರೆ 395, ಗಾವಡಗೆರೆಯಲ್ಲಿ 10 ಮನೆಗಳ ಚಾವಣಿ ಸೇರಿದಂತೆ ಹೆಂಚು, ಕಲ್ನಾರ್‌ಶೀಟ್‌ಗಳು ಹಾನಿಗೊಳಗಾಗಿವೆ. ಹುಣಸೇಗಾಲ ವೊಂದರಲ್ಲೇ 147 (ತೀವ್ರ ಹಾನಿ-25), ಕಲ್ಲಹಳ್ಳಿ ಯಲ್ಲಿ 94, (ತೀವ್ರ ಹಾನಿ-7), ಆಡಿಗನಹಳ್ಳಿಯಲ್ಲಿ 75 (ತೀವ್ರ ಹಾನಿ-9) ಹಾನಿಯಾಗಿದೆ.

ಸುಮಾರು 67 ಎಕರೆಗೂ ಹೆಚ್ಚು ಪ್ರದೇಶದ ಬೆಳೆ ಹಾನಿಯಲ್ಲಿ ಬಾಳೆ ಬೆಳೆಗೆ ಹೆಚ್ಚು ಹಾನಿಯಾಗಿದೆ. ತೆಂಗು, ಅಡಕೆ, ಮಾವು, ಸಪೋಟ ಅಲ್ಲಲ್ಲಿ ಜೋಳ, ತಂಬಾಕು ಸಸಿಮಡಿ ಸೇರಿದಂತೆ ಇತರೆ ಬೆಳೆಗಳು ನಷ್ಟ ಉಂಟಾಗಿದೆ. ಹಾನಿ ಪ್ರಮಾಣ, ನಷ್ಟದ ಅಂದಾಜು ತಯಾರಿಸಲಾಗುತ್ತಿದ್ದು, ಮತ್ತಷ್ಟು ಹಾನಿ ಬಗ್ಗೆ ವರದಿ ಬರುತ್ತಲೇ ಇದೆ ಎಂದರು.

8 ತಂಡ ರಚನೆ: ತ್ವರಿತಗತಿಯಲ್ಲಿ ಮಳೆ ಹಾನಿ ನಿಖರ ಪ್ರಮಾಣ ತಿಳಿಯುವ ಸಲುವಾಗಿ ನುರಿತ ತಲಾ ಇಬ್ಬರಂತೆ ಗ್ರಾಮಲೆಕ್ಕಿಗರ 8 ತಂಡ ರಚಿಸಲಾಗಿದ್ದು, ಹಾನಿ ಪ್ರದೇಶಕ್ಕೆ ತೆರಳಿ ನಿಖರ ವರದಿ ನೀಡಲಿದ್ದಾರೆ. ಕೃಷಿ ಮತ್ತು ತೋಟಕಾರಿಕೆ ಇಲಾಖೆಯಿಂದಲೂ ಹಾನಿ ಬಗ್ಗೆ ವರದಿ ಆಯಾ ಇಲಾಖೆಗಳಿಂದ ಬರಬೇಕಿದೆ ಎಂದು ಹೇಳಿದರು.

90 ಲಕ್ಷರೂ., ಹಾನಿ: ಪ್ರಕೃತಿ ವಿಕೋಪ ನಿಧಿಯಡಿ 25 ಲಕ್ಷ ರೂ.ಗಳಿದ್ದು, ಜಿಲ್ಲಾಕಾರಿಗಳ ಕಚೇರಿಯಿಂದ 53 ಲಕ್ಷರೂ. ಬರಲಿದೆ. ಉಳಿದಂತೆ ಪರಿಹಾರಕ್ಕಾಗಿ 90 ಲಕ್ಷರೂ.ಗಳ ಬೇಡಿಕೆ ಸಲ್ಲಿಸಲಾಗಿದೆ. ಮನೆ ಹಾನಿಗೊಳಗಾದವರಿಗೆ ತಾಲೂಕಿನ ಸಾಮಿಲ್, ಚಿನ್ನಬೆಳ್ಳಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ವಾಣಿಜ್ಯೋದ್ಯಮಿಗಳ ಸಭೆ ನಡೆಸಿ ಸಂತ್ರಸ್ಥರಿಗೆ ಸಿಮೆಂಟ್, ಹೆಂಚು, ಚಾವಣಿಯ ಮರಗಳು, ಕಲ್ನಾರ್‌ ಶೀಟ್ ನೀಡಿ ಸಹಕರಿಸುವಂತೆ ಕೋರ ಲಾಗುವುದೆಂದು ತಿಳಿಸಿದರು.

ಗಾವಡಗೆರೆ ಹೋಬಳಿಯಲ್ಲಿ ಹಾನಿ: ಬಿರುಗಾಳಿ ಮಳೆಗೆ ಮೋದೂರು ಎಂ.ಕೊಪ್ಪಲಿನಲ್ಲಿ 7, ತಿಪ್ಪಲಾ ಪುರದಲ್ಲಿ 2, ಚಿಟ್ಟಕ್ಯಾತನಹಳ್ಳಿಯಲ್ಲಿ 1 ಮನೆಗಳಿಗೆ ಹಾಗೂ ಅಲ್ಲಲ್ಲಿ 10ಕ್ಕೂ ಹೆಚ್ಚು ತಂಬಾಕು ಬ್ಯಾರನ್‌ಗಳ ಚಾವಣಿ ಹೆಂಚುಗಳಿಗೂ ಹಾನಿಯಾಗಿದೆ. ಜಮೀನಿನಲ್ಲಿದ್ದ ಹತ್ತಾರು ಮರಗಳು ನೆಲಕ್ಕುರುಳಿವೆ.

ಬಾಳೆ, ಪರಂಗಿ ಬೆಳೆ ನಷ್ಟ: ಮೋದೂರಿನ ಮಾದೇಗೌಡರಿಗೆ ಸೇರಿದ 2 ಎಕರೆ, ಬಾಳೆ ಬೆಳೆ, ತಿಪ್ಲಾಪುರದ ಮರಿಸ್ವಾಮಿಗೌಡರಿಗೆ ಸೇರಿದ ಪಪ್ಪಾಯಿ, ಬಾಳೆಗಿಡ, ರಾಮೇನಹಳ್ಳಿಯಲ್ಲಿಯಲ್ಲೂ ಹಲವರ ಬಾಳೆ ಬೆಳೆ ಬಿರುಗಾಳಿಗೆ ಬಿದ್ದು ಹೋಗಿದೆ. ಹಾನಿಗೀಡಾದ ಪ್ರದೇಶಗಳಿಗೆ ಉಪ ತಹಶೀಲ್ದಾರ್‌ ಲೋಕೇಶ್‌, ಗ್ರಾಮ ಲೆಕ್ಕಾಧಿಕಾರಿ ನಾಗರಾಜ್‌ ಭೇಟಿ ನೀಡಿ, ಹಾನಿ ಬಗ್ಗೆ ವರದಿ ಮಾಡಿದ್ದಾರೆ.

ಇಟ್ಟಿಗೆ ಕಾರ್ಖಾನೆಗೆ ಹಾನಿ: ಹುಣಸೂರು – ಮಡಿಕೇರಿ ಹೆದ್ದಾರಿ ಕಲ್ಬೆಟ್ಟ ಜಂಕ್ಷನ್‌ ಬಳಿಯ ದಿನೇಶ್‌ರಿಗೆ ಸೇರಿದ ಹೊರ ವಲಯದಲ್ಲಿನ ಶ್ರೀ ಸಾಯಿ ಬ್ರಿಕ್ಸ್‌ ಇಟ್ಟಿಗೆ ಫ್ಯಾಕ್ಟರಿ ಚಾವಣಿಗೆ ಹಾಸಿದ್ದ ತಗಡಿನ ಶೀಟ್‌ಗಳು ಬಿರುಸಿನ ಗಾಳಿ-ಮಳೆಗೆ ಹಾರಿ ಹೋಗಿ ಅನತಿ ದೂರದಲ್ಲಿ ಬಿದ್ದಿವೆ. ಗಾಳಿ-ಮಳೆ ವೇಳೆ ಕಾರ್ಮಿಕರು ಒಳಗೆ ಕೆಲಸ ನಿರ್ವಹಿಸುತ್ತಿದ್ದರು. ತಕ್ಷಣವೇ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ಬಾರಿ ಅನಾಹುತ ತಪ್ಪಿದೆ.

ಲಕ್ಷ ಇಟ್ಟಿಗೆಗೆ ಹಾನಿ: ಜಂಕ್‌ಶೀಟ್ ಹಾರಿ ಹೋದ್ದರಿಂದ ಕೊಯ್ದು ಒಣಗಿ ಹಾಕಿದ್ದ ಒಂದು ಲಕ್ಷ ಇಟ್ಟಿಗೆ ನಾಶವಾಗಿದೆ. ಘಟನೆಯಿಂದ ಒಟ್ಟಾರೆ ಐದು ಲಕ್ಷರೂ. ನಷ್ಟು ನಷ್ಟ ಸಂಭವಿಸಿದೆ.

ಹಾನಿ ಪ್ರದೇಶಗಳಿಗೆ ಸಂಸದ ಭೇಟಿ: ಇತ್ತೀಚೆಗೆ ಹನಗೋಡು ಹೋಬಳಿಯ ಹಾನಿಗೀಡಾದ ಹುಣಸೆಗಾಲ ಹಾಗೂ ಕಲ್ಲಹಳ್ಳಿ ಗ್ರಾಮಗಳಿಗೆ ಸಂಸದ ಪ್ರತಾಪ ಸಿಂಹ ಭೇಟಿ ನೀಡಿ ಪರಿಶೀಲಿಸಿ ಹಾನಿಗೊಳಗಾದ ಕುಟುಂಬಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಇವರೊಂದಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಯೋಗಾನಂದ ಕುಮಾರ್‌, ಮಾಜಿ ಅಧ್ಯಕ್ಷರಾದ ಹನಗೋಡು ಮಂಜುನಾಥ್‌, ರಮೇಶ್‌ಕುಮಾರ್‌, ನಗರ ಅಧ್ಯಕ್ಷ ರಾಜೇಂದ್ರ, ತಂಬಾಕು ಮಂಡಳಿ ಸದಸ್ಯ ಕಿರಣ್‌ ಕುಮಾರ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

3-hunsur

Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.