ನಂಜನಗೂಡು: ಮತಬೇಟೆ ಆರಂಭಿಸಿದ ದರ್ಶನ್
Team Udayavani, Apr 4, 2023, 10:51 AM IST
ನಂಜನಗೂಡು/ಹುಲ್ಲಹಳ್ಳಿ: ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಸೋಮವಾರ ಬೇಲದ ಕುಪ್ಪೆಗೆ ತೆರಳಿ ಮಹದೇಶ್ವರರಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರವನ್ನು ಅಧಿಕೃತ ವಾಗಿ ಆರಂಭಿಸಿದರು.
ನಂತರ ಬಂಕಳ್ಳಿಗೆ ಆಗಮಿಸಿ ಅಲ್ಲಿ ಮತಯಾ ಚಿ ಸು ವುದರೊಂದಿಗೆ ತಾಲೂಕಿನ ಚುನಾವಣಾ ಕಣಕ್ಕೆ ರಂಗು ತುಂಬುವ ಪ್ರಯತ್ನಿಸಿದರು. ನಂತರ ಮಾತನಾಡಿದ ಅವರು, ಜನಸೇವೆ ತಮಗೆ ಹೊಸದು ಯಾವುದೇ ಕಾರಣಕ್ಕೂ ಮತ ನೀಡಿದ ಮತದಾರ ಪ್ರಭುಗೆ ಅನ್ಯಾಯ ಮಾಡಲಾರೆ. ನಂಜನಗೂಡು ಕ್ಷೇತ್ರದ ಜನತೆಗೆ ಅನುದಿನವೂ ಪ್ರಾಮಾಣಿಕವಾಗಿ ಕೈಲಾದ ಸೇವೆ ಮಾಡಿ ಮತ ನೀಡಿದ ನಿಮ್ಮ ಋಣ ತೀರಿಸುವೆ ಎಂದರು. ತಂದೆ ಧ್ರುವನಾರಾಯಣರ ಅಕಾಲಿಕ ಮರಣದಲ್ಲಿ ಜನ ತಮ್ಮ ತಂದೆಗೆ ತೋರಿದ ಗೌರವ ತನ್ನನ್ನು ವಿಸ್ಮಯಗೊಳಿಸಿದೆ. ಅದೇ ರೀತಿಯಲ್ಲಿ ನಿಮ್ಮ ಪ್ರೀತಿ ವಿಶ್ವಾಸವನ್ನು ಹಿಡಿದಿಟ್ಟುಕೊಳ್ಳವ ಮಹದಾಸೆ ತಮ್ಮದಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ನೇತೃತ್ವದಲ್ಲಿ ತಾಲೂಕು ಕಾಂಗ್ರೆಸ್ ನಾಯಕರೇ ಇಲ್ಲಿನ ಚುನಾವಣೆಯ ಹೊಣೆಗಾರಿಕೆ ನಿಭಾಯಿಸುತ್ತಾರೆ. ತಮ್ಮನ್ನು ಮತ ನೀಡಿ ಆಶೀರ್ವದಿಸಿ ಎಂದು ಮತದಾರರಿಗೆ ಶಿರಬಾಗಿ ನಮಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ತಾಲೂಕಿನ ಜನ ಬದಲಾವಣೆಯೊಂದಿಗೆ ದರ್ಶನ್ ಧ್ರುವನಾರಾ ಯಣರ ಯಶಸ್ಸನ್ನು ಸಹ ಬಯಸಿದ್ದಾರೆ ಎಂದರು.
ನಾವೀಗ ಮತದಾರರ ಆಶೀರ್ವಾದಕ್ಕಾಗಿ ದರ್ಶನ್ ಧ್ರುವನಾರಾಯಣರೊಂದಿಗೆ ಕ್ಷೇತ್ರದ ಪ್ರತಿ ಗ್ರಾಮ ಹಾಗೂ ಮನೆ ಮನೆಗೆ ಬೇಟಿ ನೀಡಲು ಆರಂಭಿಸಿದ್ದು ಶೀಘ್ರ ನಾಮಪತ್ರ ಸಲ್ಲಿಸಲಾಗುವುದು. ಮಾಜಿ ಸಚಿವ ಎಂ.ಮಹದೇವ ಅವರ ಪತ್ನಿ ರಾಜಮ್ಮ ಪುತ್ರ ವಿದ್ಯಾಲಂಕಾರ ದರ್ಶನ್ ಧ್ರುವನಾರಾಯ ಣರನ್ನು ಆಶೀರ್ವದಿಸಿದ್ದು ಮತಯಾಚನೆಗೂ ನಮ್ಮೊಂದಿಗಿದ್ದಾರೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ, ಸಿ.ಎಂ. ಶಂಕರ್, ಶ್ರೀಕಂಠ, ಸೋಮೇಶ, ಬಿ.ಎಂ.ನಾಗೇಶ ರಾಜು, ಶಿವಪ್ಪದೇವರು, ದೊರೆಸ್ವಾಮಿ ನಾಯಕ, ಮಾರುತಿ, ಅಶೋಕ , ಸಂಜಯ , ಹುಚ್ಚೇಗೌಡ, ಲತಾ ಸಿದ್ಧಶೆಟ್ಟಿ, ನಾರಾಯಣ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.